ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಶಿರಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಕೋರಿ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ‌.

ಮನವಿಯಲ್ಲೇನಿದೆ..?

ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51(1-18-0) ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.

ಮನವಿ ಪತ್ರ

ಕೇಳಿದ್ರೆ ಹಲ್ಲೆಗೆ ಬರ್ತಾರಂತೆ..!
ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ‌ ಮನವಿ‌ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ತಹಶೀಲ್ದಾರರಿಂದಲೂ ಕ್ರಮವಿಲ್ಲ..!

ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಾಹಶೀಲ್ದಾರರಿಗೆ ಅಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ.. ಆದ್ರೆ ಮುಂಡಗೋಡ ತಹಶೀಲ್ದಾರರಿಂದ ಯಾವುದೇ ಕ್ರಮವಾಗಿಲ್ಲ ಅಂತಾ ನಿವಾಸಿಗಳು ಶಿರಸಿ ಎಸಿಗೆ ಸಲ್ಲಿಸಿರೋ ಮನವಿಯಲ್ಲಿ ದಾಖಲಿಸಿದ್ದಾರೆ.

ಸನವಳ್ಳಿ ಗ್ರಾಮದ ಬೈರಪ್ಪ ಹನಕನಳ್ಳಿ, ಫಕ್ಕೀರಪ್ಪ ಕೆರಿಹೊಲದವರ್, ಅಶೋಕ ಮಟ್ಟಿಮನಿ, ಶಿವಮೂರ್ತಯ್ಯ ಹಿರೇಮಠ, ಗಂಗಪ್ಪ ಕೆರಿಹೊಲದವರ್, ಶಂಭು ಕೆರಿಹೊಲದವರ್, ಹಸನ್ ಸಾಬ್ ಸಿದ್ಧಿ, ನಾಗಪ್ಪ ಯಲ್ಲಾಪುರ, ತಿರಕಪ್ಪ ಸುಣಗಾರ್ ಹಾಗೂ ಭಾಷಾಸಾಬ್ ಸಿದ್ದಿ ಎಂಬುವವರು ಶಿರಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

error: Content is protected !!