ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತ ಸ್ವಾತಿ ಪತಿ ಹಾಗೂ ಅತ್ತೆಯ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌.

ಬುಧವಾರ ರಾತ್ರಿ ಸ್ವಾತಿ ಮಂಜುನಾಥ ಹೊಸೂರ (26) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ವರದಕ್ಷಿಣೆ ಕಿರುಕುಳವಾ..?
ಅಂದಹಾಗೆ, ಆತ್ಮಹತ್ಯೆ ಮಾಡಿಕೊಂಡಿರೋ ಗೃಹಿಣಿ ಸ್ವಾತಿಗೆ ಮೂವರು ಹೆಣ್ಣುಮಕ್ಕಳು ಜನಿಸಿದ್ದಾರೆ. ಹೀಗಾಗಿ, ಬರೀ ಹೆಣ್ಣುಮಕ್ಕಳನ್ನೇ ಹೆತ್ತಿದ್ದಿಯಾ, ಅಲ್ದೆ ಮದುವೆಯಲ್ಲಿ ವರದಕ್ಷಿಣೆ ಕೂಡ ನೀಡಿಲ್ಲ ಅಂತಾ ಪತಿ ಮಂಜುನಾಥ್ ಹಾಗೂ ಅತ್ತೆ ತಾಯವ್ವ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ರು ಅಂತಾ ಆರೋಪಿಸಲಾಗಿದೆ.

ಮೃತಳ ತಾಯಿಯಿಂದ ದೂರು..!
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿರೋ ಮೃತ ಗೃಹಿಣಿಯ ತಾಯಿ ಮಲ್ಲವ್ವ ಕಬ್ಬೇರ್, ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೇಸು ದಾಖಲಿಸಿದ್ದಾರೆ.

ಇನ್ನು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

*************************”

ಚೌಡಳ್ಳಿ ರೈತನ ಮಕ್ಕಳ ಸಾಹಸವನ್ನೂ ಒಮ್ಮೆ ನೋಡಿ..

error: Content is protected !!