ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಾಚಣಕಿ ಸಮೀಪ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!

ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಾಚಣಕಿ ಸಮೀಪ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಬಾಚಣಕಿ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಅಂದಹಾಗೆ, ಖಾಕಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನು ಯಲ್ಲಾಪುರದ ಮಚ್ಚಿಗಲ್ಲಿಯ 22 ವರ್ಷದ ರಿಹಾನ್ ಹಸನ್ ಶೇಖ್ ಎಂಬಾತ. ಬರೋಬ್ಬರಿ 2kg ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರದ ಮಚ್ಚಿಗಲ್ಲಿಯ ರಿಹಾನ್ ಹಸನ್ ಶೇಖ್, ಎಂಬುವವನೇ ಗಾಂಜಾ ಕೇಸಿನ ಆರೋಪಿಯಾಗಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವನಿಂದ ಬರೋಬ್ಬರಿ 2kg ತೂಕದ ಗಾಂಜಾ ವಶಪಡಿಸಿ ಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 90 ಸಾವಿರ ರೂಪಾಯಿ. ಸಿಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಮಂಜು ಚಿಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಬಸವರಾಜ್ ಒಡೆಯರ್...

ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು, ಒದರಾಟಗಳ ಪರ್ವ ಶುರುವಾಗಿದೆ. ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ಪಾಳಯ, ರಾಜೀನಾಮೆ ಬೀಸಾಕುವಂತೆ ಕಂಡ ಕಂಡಲ್ಲಿ ಕಹಳೆ ಮೊಳಗಿಸಿದೆ. ಮೊನ್ನೆ ಜೂನ್ 11 ರಂದು ಮುಂಡಗೋಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮುಂಡಗೋಡ ಮಂಡಳಕ್ಕೆ ಗುರುವಾರ, ಹೆಬ್ಬಾರ್ ಬೆಂಬಲಿಗರು ಠಕ್ಕರ್ ಕೊಟ್ಟಿದ್ದಾರೆ. ಪತ್ರಿಕಾಗೋಷ್ಟಿಯ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನೈತಿಕತೆಯ ಪಾಠ ಮಾಡಿದ್ದಾರೆ. ಬಿಜೆಪಿ, ಪತ್ರಿಕಾಗೋಷ್ಠಿ ಮತ್ತು ಎಚ್ಚರಿಕೆ..! ಅಂದಹಾಗೆ, ಜೂನ್ 11 ರಂದು ಮುಂಡಗೋಡ ಬಿಜೆಪಿ ಮಂಡಳ ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಒಂದು ವಾರದ ಗಡುವು ನೀಡಿ, ಒಂದುವೇಳೆ ರಾಜೀನಾಮೆ ನೀಡದೇ ಇದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು. ಹೀಗಾಗಿ, ಕೆರಳಿ ಕೆಂಡವಾಗಿರೋ ಹೆಬ್ಬಾರ ಪಡೆ, ಸ್ಥಳೀಯ ಬಿಜೆಪಿಗರ ವಿರುದ್ಧ ಮುಗಿ ಬಿದ್ದಿದೆ. ಅದ್ಯಾವ ನೈತಿಕತೆಯಿಂದ ರಾಜೀನಾಮೆ ಕೇಳ್ತಿರಿ ಅಂತಾ ವಾಗ್ದಾಳಿ ನಡೆಸಿದೆ....

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೆಸ್ಟ್, ಕೊಲೆ ಕೇಸಲ್ಲಿ ಬಂಧಿಸಿದ ಪೊಲೀಸರು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೆಸ್ಟ್, ಕೊಲೆ ಕೇಸಲ್ಲಿ ಬಂಧಿಸಿದ ಪೊಲೀಸರು..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ ಆರಸ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನರವರನ್ನ ಬಂಧಿಸಲಾಗಿದೆ. ಮೈಸೂರಿನಲ್ಲಿ ನಟ ದರ್ಶನರವರನ್ನು ಪೊಲೀಸರು ಬಂಧಿಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೆಸ್ಟ್ ಮಾಡಲಾಗಿದೆ ಅನ್ನೋ ಮಾಹಿತಿ ಬರ್ತಿದೆ.

ಅರಶಿಣಗೇರಿಯ ವ್ಯಕ್ತಿ, ಶಿಗ್ಗಾವಿ ತಾಲೂಕಿನ ಗದ್ದೆಯಲ್ಲಿ ಹೆಣವಾದ, ಈ ಸಾವಿನ ಸುತ್ತ ಅನುಮಾನದ ಹುತ್ತ..!

ಅರಶಿಣಗೇರಿಯ ವ್ಯಕ್ತಿ, ಶಿಗ್ಗಾವಿ ತಾಲೂಕಿನ ಗದ್ದೆಯಲ್ಲಿ ಹೆಣವಾದ, ಈ ಸಾವಿನ ಸುತ್ತ ಅನುಮಾನದ ಹುತ್ತ..!

ಮುಂಡಗೋಡ: ಕೆಲಸಕ್ಕೆಂದು ಹೋಗಿದ್ದ ಅರಶಿಣಗೇರಿಯ ವ್ಯಕ್ತಿಯೋರ್ವ ಹೆಣವಾಗಿದ್ದಾ‌ನೆ. ಶಿಗ್ಗಾವಿ ತಾಲೂಕಿನ ಕುನ್ನೂರು ಬಳಿಯ ಮಮದಾಪುರ ತಾಂಡಾದ ಗದ್ದೆಯಲ್ಲಿ ಶವವಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದವನಿಗೆ ವಿದ್ಯುತ್ ತಗುಲಿ ಸಾವಿಗೆ ಕಾರಣವಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಕುಟುಂಬಸ್ತರು ಈ ಸಾವಿನಲ್ಲಿ ಅನುಮಾನವಿದೆ ಅಂತಾ ಆರೋಪಿಸುತ್ತಿದ್ದಾರೆ. ಅಂದಹಾಗೆ, ಮೈಲಾರಗೌಡ ನಿಂಗನಗೌಡ ಪಾಟೀಲ್ (36), ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಈತ ನಿನ್ನೆ ಅಂದ್ರೆ ಬುಧವಾರ, ಅರಶಿಣಗೇರಿಯಿಂದ ಮಮದಾಪುರ ಬಳಿಯ ಗದ್ದೆಗೆ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಅದ್ಯಾವ ಕಾರಣಕ್ಕೊ ಏನೋ ವಿದ್ಯುತ್ ಕಂಬದ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಹೀಗಾಗಿ, ಈತನ ಸಾವಿನ ಬಗ್ಗೆ ಅರಶಿಣಗೇರಿಯ ವ್ಯಕ್ತಿಯ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 4 ನಂತರ ಜಿಪಂ, ತಾಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ

ಜೂನ್ 4 ನಂತರ ಜಿಪಂ, ತಾಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ

ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟವಾದ ನಂತರ ಜಿಲ್ಲಾ ಪಂಚಾಯತ ಚುನಾವಣೆ ನಡೆಸುವಾದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ, ಬಿ ಬಿ ಎಮ್ ಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಕ್ಷೇತ್ರ ಪುನರವಿಂಗಡಣೆಯಾದ ಬಳಿಕ ಮೀಸಲಾತಿ ಪ್ರಕಟಿಸಲಾಗುವದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾರ್ ಪಲ್ಟಿ ನಾಲ್ವರು ಸ್ಥಳದಲ್ಲೇ ಸಾವು, 6 ಜನರಿಗೆ ಗಾಯ..!

ಕಾರ್ ಪಲ್ಟಿ ನಾಲ್ವರು ಸ್ಥಳದಲ್ಲೇ ಸಾವು, 6 ಜನರಿಗೆ ಗಾಯ..!

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವಾಗಿದೆ, ಕಾರು ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದು ಬಿದ್ದ ಪರಿಣಾಮ, 4 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 6 ಜನರಿಗೆ ಗಾಯವಾಗಿದೆ. ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ಘಟನೆ ನಡೆದಿದ್ದು, ಎನ್ ಎಚ್ 4 ಪಿಬಿ ರಸ್ತೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಕಾರ್ ಬಿದ್ದಿದೆ‌. ಘಟನೆಯಲ್ಲಿ, ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ‌ 28 ಸಾವು ಕಂಡಿದ್ದಾರೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊ‌ನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?

ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?

ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ಹಾವಳಿ ಜೋರಾಗಿದೆಯಾ..? ಸಂಜೆ ಮುಂಡಗೋಡ ಪೊಲೀಸರು ಪಟ್ಟಣದ ದೇಶಪಾಂಡೆ ನಗರದಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಪೊಲೀಸರ ವಶದಲ್ಲಿರೋ ಆರೋಪಿಯಿಂದ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ..? ವಸ್ತುಗಳು ಏನೇನು..? ಎಲ್ಲ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಿದೆ. ಅಸಲು, ಈ ಕೇಸು ಪೊಲೀಸ್ ಠಾಣೆಯ ಟೇಬಲ್ಲಿನ ಮೇಲೆ ಖಡಕ್ಕಾದ ಪೈಲಾಗಿ ರೂಪಗೊಳ್ಳತ್ತೋ ಅಥವಾ ನಾಮಕೆವಾಸ್ತೆ ಚಕ್ಕಂಬಕ್ಕಳ ಹಾಕಿ ಕೂರೋ ವ್ಯವಸ್ಥೆನಾ ಕಾದು ನೋಡಬೇಕಿದೆ. ಗಣಪತಿ ಬಪ್ಪಾ ಮೊರಯಾ..!

ಇಸ್ಪೀಟು ಆಟದ ಅನುಮತಿಗೆ ಲಂಚ, ತಡಸ ಪೊಲೀಸ್ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ, ಜೊತೆಗೆ ಪೇದೆಯೂ ತಗಲಾಕ್ಕೊಂಡ..!

ಇಸ್ಪೀಟು ಆಟದ ಅನುಮತಿಗೆ ಲಂಚ, ತಡಸ ಪೊಲೀಸ್ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ, ಜೊತೆಗೆ ಪೇದೆಯೂ ತಗಲಾಕ್ಕೊಂಡ..!

ಶಿಗ್ಗಾವಿ: ತಡಸಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ‌. 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ತಡಸ ಪಿಎಸ್ ಐ ಹಾಗು ಪೇದೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ‌. ತಡಸ ಠಾಣೆ ಪಿಎಸ್ಐ ಶರಣ ಬಸಪ್ಪ, ಪೇದೆ ಸುರೇಶ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಗ್ಯಾಂಬಲಿಂಗ್ ಗೆ ಇಸ್ಪೀಟು ಆಟಕ್ಕೆ ಅನುಮತಿ ನೀಡಲು 2 ಲಕ್ಷ ರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಸ್ಪೀಟ್ ಆಡಿಸಲು, ಪ್ರಭಾಕರ ಎನ್ನುವವರಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ 2 ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಕೆಡವಲಾಗಿದೆ.

ಅಗಡಿ ಪೆಟ್ರೊಲ್ ಬಂಕ್ ಬಳಿ ಬೈಕ್ ಅಪಘಾತ, ಇಬ್ಬರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಅಗಡಿ ಪೆಟ್ರೊಲ್ ಬಂಕ್ ಬಳಿ ಬೈಕ್ ಅಪಘಾತ, ಇಬ್ಬರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಬೈಕ್ ಅಪಘಾತವಾಗಿದೆ. ಅಗಡಿ ಸಮೀಪದ ಪೆಟ್ರೊಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರಿಗೆ ಗಾಯವಾಗಿದೆ. ಇದ್ರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಅನ್ನೊ ಮಾಹಿತಿ ಇದೆ. ಬಸಾಪುರ ಗ್ರಾಮದ ತಿಪ್ಪಯ್ಯ ಹಾಗೂ ಹುಲಿಹೊಂಡ ಗ್ರಾಮದ ಕುಮಾರ್ ಎಂಬುವವರಿಗೆ ಗಾಯವಾಗಿದೆ. ಇದ್ರಲ್ಲಿ ಓರ್ವನ ಸ್ಥಿತಿ ಗಂಭೀರ ಅಂತಾ ಹೇಳಲಾಗ್ತಿದೆ. ಸದ್ಯ 108 ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡ ಸಮೀಪ ಭೀಕರ ಅಪಘಾತ, ಗಾಯಗೊಂಡಿದ್ದ ಇ‌ಂದೂರಿನ ಮತ್ತೋರ್ವ ವ್ಯಕ್ತಿ ಸಾವು..! ಮೃತರ ಸಂಖ್ಯೆ ಎರಡಕ್ಕೆ ಏರಿಕೆ..!

ಮುಂಡಗೋಡ ಸಮೀಪ ಭೀಕರ ಅಪಘಾತ, ಗಾಯಗೊಂಡಿದ್ದ ಇ‌ಂದೂರಿನ ಮತ್ತೋರ್ವ ವ್ಯಕ್ತಿ ಸಾವು..! ಮೃತರ ಸಂಖ್ಯೆ ಎರಡಕ್ಕೆ ಏರಿಕೆ..!

ಮುಂಡಗೋಡ ಪಟ್ಟಣದ ಸಮೀಪ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ. ಎರಡು ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇಂದೂರಿನ ಕುಮಾರ್ ಇಳಿಗೇರ್(44) ಸಾವನ್ನಪ್ಪಿದ ಮತ್ತೋರ್ವ ಬೈಕ್ ಸವಾರನಾಗಿದ್ದಾ‌ನೆ. ಇನ್ನು ಘಟನೆಯಲ್ಲಿ ಮುಂಡಗೋಡಿನ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಗ ದಾಖಲಿಸಲಾಗಿತ್ತು. ಈಗ ಚಿಕಿತ್ಸೆ ಫಲಿಸದೇ ಮತ್ತೋರ್ವ ಸಾವನ್ನಪ್ಪಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!