ಶಿರಸಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಭಾಗವಾಗಿ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲೆಯ ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಘಟಕವಾದ ಶಿರಸಿಯಿಂದ ಬಸ್ ಗಳು ಕಾರ್ಯ ಆರಂಭಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಈಗಾಗಲೇ ಬಸ್ ಗಳು ಸಂಚಾರವನ್ನ ಆರಂಭಿಸಿದ್ದು, ಸದ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗಳಿಗೆ, ತಾಲೂಕುಗಳಿಂದ ತಾಲೂಕುಗಳಿಗೆ ಮಾತ್ರ ಬಸ್ ಗಳು ಸಂಚಾರ ಪ್ರಾರಂಭಿಸಿವೆ. ಆದ್ರೆ ಪ್ರಯಾಣಿಕರ ಕೊರತೆ ಸಾರಿಗೆ ಸಂಸ್ಥೆಯನ್ನ ಕಾಡುತ್ತಿದೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಸದ್ಯಕ್ಕೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಲಾಗುತ್ತಿದೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ ಗಳನ್ನ ಓಡಿಸಲಾಗುತ್ತಿದೆ. ಇನ್ನು, ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರವನ್ನ ಜನರ ರೆಸ್ಪಾನ್ಸ್ ನೋಡಿಕೊಂಡು ಪ್ರಾರಂಭಿಸಲಾಗುತ್ತೆ ಅಂತಾ KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Top Stories
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಮಾಗೋಡು ಜಲಪಾತದ ದೃಶ್ಯ ವೈಭವ ಕಣ್ತುಂಬಿಕೊಳ್ಳಿ..! ಈಗಲೇ ಒಮ್ಮೆ ಭೇಟಿ ಕೊಡಿ..!!
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿಡುತ್ತಿದ್ದಾನೆ. ಎಲ್ಲೆಂದರಲ್ಲಿ ಮಳೆ ಮಳೆ ಮಳೆ. ಹೀಗಾಗಿ ಮಳೆಯ ಅವಾಂತರಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಅದೇ ಮಳೆಯಿಂದ ಉತ್ತರ ಕನ್ನಡದ ಮಲೆನಾಡಿನ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತಿದೆ. ಪಶ್ಚಿಮ ಘಟ್ಟದ ರಮಣೀಯತೆ..! ಅಂದಹಾಗೆ, ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳನ್ನ ನೋಡೋದೇ ಒಂದು ರೀತಿಯ ಆನಂದ. ಪಶ್ಚಿಮ ಘಟ್ಟಗಳ ಸಾಲು ಹಸಿರನ್ನು ಹೊದ್ದು ನೋಡುಗರ ಮನ ಸೆಳೆಯುತ್ತದೆ. ಅದೇ ರೀತಿ ಜಲಪಾತಗಳ ಜಿಲ್ಲೆ ಉತ್ತರ ಕನ್ನಡ ಈ ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಬರೋದ್ರಿಂದ ಜಲಪಾತಗಳ ವೈಭವ ಸವಿಯೋದೇ ಒಂಥರಾ ಖುಷಿ. ಜಲಪಾತಗಳ ಹಾಲುನೊರೆ..! ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿರೋ ಜಲಪಾತಗಳು ರಾಜ್ಯದಲ್ಲೇ ಅಧಿಕ. ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿದ್ರೆ ಒಂದೊಂದು ಜಲಪಾತಗಳು ಒಂದೊಂದು ರೀತಿಯ ವೈಚಿತ್ರ್ಯವನ್ನ ಸೃಷ್ಟಿಸುತ್ತವೆ. ಅದೇ ರೀತಿ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತ ಇದೀಗ ಮೈದುಂಬಿ ಹರಿಯುತ್ತಿದೆ. ಬೇಡ್ತಿ ನದಿಯಿಂದ ನಿರ್ಮಾಣವಾಗಿರೋ ಈ ಜಲಪಾತ ಸುಮಾರು 200 ಮೀಟರ್ ಎತ್ತರದಿಂದ ಧುಮುಕುತ್ತದೆ. ಯಲ್ಲಾಪುರದಿಂದ 17...
ನಾಳೆಯಿಂದ ಬಸ್ ಸಂಚಾರ ಆರಂಭ: ಏನಿದೆ ರೂಲ್ಸ್..?
ಬೆಂಗಳೂರು: ನಾಳೆಯಿಂದ ಅನ್ ಲಾಕ್ ಆರಂಭವಾಗಿತ್ತಿರುವುದರಿಂದ ರಾಜ್ಯಾದ್ಯಂತ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. 3 ಸಾವಿರ ಬಸ್ ಗಳು ರಸ್ತೆಗೆ..! ನಾಳೆಯಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3000 ಬಸ್ ಗಳು ಸಂಚರಿಸಲಿವೆ. ಆದರೆ ಅಂತರಾಜ್ಯಗಳಿಗೆ ಸದ್ಯಕ್ಕೆ ಬಸ್ ಸಂಚಾರ ಲಭ್ಯವಿರುವುದಿಲ್ಲ. ಪ್ರಯಾಣಿಕರು ಹಾಗೂ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಕೋವಿಡ್ ನಿಯಮ ಕಡ್ಡಾಯ..! ಚಾಲಕರು ಹಾಗೂ ನಿರ್ವಾಹಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಲಸಿಕೆ ಮೊದಲ ಅಥವಾ ಎರಡನೇ ಡೋಸ್ ಪಡೆದಿರಬೇಕು. ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಯಾಣಿಕರು ಮಾಸ್ಕ್ ಇಲ್ಲದೇ ಬಸ್ ಹತ್ತುವಂತಿಲ್ಲ. ಶೇ.50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶವಿದ್ದು, ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಿರಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು...
ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!
ಮುಂಡಗೋಡ: ತಾಲೂಕಿನಲ್ಲಿ ಇಂದು 5 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 19 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ ಒಟ್ಟೂ 84 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 43 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 13 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ಇಂದು ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ತಾಲೂಕಿನ ತಟ್ಟಿಹಳ್ಳಿಯ 65 ವರ್ಷದ ಓರ್ವ ಪುರುಷ ವ್ಯಕ್ತಿ, ಹಾಗೂ ಮುಂಡಗೋಡ ಪಟ್ಟಣದ ಆನಂದನಗರ ನಿವಾಸಿ 45 ವರ್ಷದ ಮಹಿಳೆ ಕೋವಿಡ್ ಗೆ ಬಲಿಯಾಗಿದ್ದಾರೆ ಅಂತಾ ಮುಂಡಗೋಡ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.
ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ: ಉತ್ತರ ಕನ್ನಡದಲ್ಲೂ ಇಂದು ರೆಡ್ ಅಲರ್ಟ್..!
ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ಮೂರು ದಿನ ರಾಜ್ಯಾದ್ಯಂತ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿಯೂ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನಿಗಾ ವಹಿಸಲು ಸಿಎಂ ಸೂಚನೆ ಮಳೆಯಿಂದ ಕರ್ನಾಟಕದ 20 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿನ್ನೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಸಿಎಂ ಯಡಿಯೂರಪ್ಪ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಮತ್ತೆ ಪ್ರವಾಹದ ಭೀತಿ..! ಕರ್ನಾಟಕ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ 1,710...
ಜೂನ್ 21 ರಿಂದ 16 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿ: ಸಿಎಂ ಘೋಷಣೆ
ಬೆಂಗಳೂರು: ಜೂನ್ 21ರಿಂದ 16 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದ್ದು, 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುತ್ತಿರುವುದಾಗಿ ತಿಳಿಸಿದರು. ಎಲ್ಲಿ ಅನ್ ಲಾಕ್..? ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು ನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ, ಮಂಡ್ಯ, ರಾಮನಗರ, ತುಮಕೂರು, ಗದಗ, ಕಲಬುರ್ಗಿ, ಹಾವೇರಿ, ಯಾದಗಿರಿ, ಬೀದರ್, ಕೋಲಾರ ಸೇರಿದಂತೆ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 5ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್..! ಮೈಸೂರಿನಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದ್ದು, ಈಗಿರುವ ಕಠಿಣ ಕ್ರಮ ಮುಂದುವರೆಯಲಿದೆ. ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ,...
ಯರೇಬೈಲ್ ಗ್ರಾಮದಲ್ಲಿ ಸರಾಯಿ ಮಾರಾಟ ನಿಷೇಧಕ್ಕೆ ಆಗ್ರಹ: ತಹಶೀಲ್ದಾರರಿಗೆ ಮನವಿ
ಮುಂಡಗೋಡ: ತಾಲೂಕಿನ ಯರೇಬೈಲು ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ಮುಂಡಗೋಡ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಯರೆಬೈಲು ಗ್ರಾಮದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಗ್ರಾಮದಲ್ಲಿ ಇನ್ನು ಮುಂದೆ ಸರಾಯಿ ಮಾರಾಟ ಮಾಡದಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಯಾರಾದ್ರೂ ಸರಾಯಿ ಮಾರಾಟ ಮಾಡಿದರೇ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
ವಡಗಟ್ಟಾ ಅಗಡಿ ರಸ್ತೆ ಬಂದ್; ಹುನಗುಂದ ರೈತರ ಗೋಳು ಕೇಳೋರ್ಯಾರು..?
ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ವಡಗಟ್ಟಾ-ಅಗಡಿ ರಸ್ತೆ ಬಂದ್ ಆಗಿದೆ. ಮುಂಡಗೋಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ. ಆಗಿದ್ದೇನು..? ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತಿ, ಇನ್ನೇನು ಮೊಳಕೆ ಒಡೆದು ಸಸಿಯಾಗುವ ಹಂತದಲ್ಲಿರುವಾಗಲೇ ಭಾರೀ ಮಳೆಯ ಕಾರಣಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ. ಅರಶಿಣಗೇರಿ ಕೆರೆ ಕಾಲುವೆ ಫುಲ್.! ಈ ಮದ್ಯೆ, ಅರಶಿಣಗೇರಿ ಕೆರೆಯಿಂದ ರೈತರ ಜಮೀನುಗಳಿಗೆ ಸಂಪರ್ಕಿಸೋ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯ ನೀರು ಹರಿದು ಬರುತ್ತಿದೆ. ಹಾಗೆ ಹರಿದು ಬರುವ ನೀರು ಹುನಗುಂದ ಗ್ರಾಮದ ದೇಶಪಾಂಡೆ ನಗರದಲ್ಲಿ ಬಂದು ನಿಲ್ಲುತ್ತಿದೆ. ಯಾಕಂದ್ರೆ, ರಸ್ತೆಗೆ ಅಡ್ಡಲಾಗಿ ಕಟ್ಟಿರೋ ಚಿಕ್ಕ ಸಿಡಿ ಸಂಪೂರ್ಣ ಕುಸಿತಗೊಂಡಿದೆ. ಆ ಕಾರಣಕ್ಕೆ ಕಾಲುವೆಯಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ರೈತರ ಗದ್ದೆಗಳಿಗೆ ಹೊಕ್ಕಿದೆ. ಹೀಗಾಗಿ ರೈತರ ಜಮೀನುಗಳು ಅಕ್ಷರಶಃ ಕೆರೆಗಳಂತಾಗಿ ಮಾರ್ಪಟ್ಟಿವೆ. ಈ ಕಾರಣಕ್ಕಾಗಿ ರೈತರ ಆಕ್ರೋಶದ ಕಟ್ಟೆಯೊಡೆದಿದೆ. ರೈತನ...
ಜಿಲ್ಲೆಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್: ಹೆಚ್ಚಿದ ಆತಂಕ, ತನಿಖೆ ಚುರುಕು..!
ಕಾರವಾರ: ಕಾರವಾರ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿದೆ. ಯಾವಾಗಿಂದ..? ಕಳೆದ ಸೋವವಾರದಿಂದ ಸತತ ಟ್ರ್ಯಾಕ್ ಆಗುತ್ತಿರುವ ನಿರ್ಬಂಧಿತ ಸ್ಯಾಟಲೈಟ್ ಫೋನ್ ಸಂಬಂಧ, ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ವಿಭಾಗದಿಂದ ತನಿಖೆ ಶುರುವಾಗಿದೆ. ಟ್ರ್ಯಾಕ್ ಆದ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ), ಅರಣ್ಯ ಇಲಾಖೆ ಸ್ಥಳೀಯ ಪೊಲೀಸರೊಳಗೊಂಡ ಐದು ಜನರ ತಂಡ ಜಾಂಬಾ ಗ್ರಾಮ ವ್ಯಾಪ್ತಿಯ ಅರಣ್ಯ ದಲ್ಲಿ ಕೂಮಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಎಲ್ಲೇಲ್ಲಿ ಆಕ್ಟಿವ್..? ಈವರೆಗೆ ಜಿಲ್ಲೆಯ ಕಾರವಾರ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್ ಅಗಿದೆ. ಕೈಗಾ ಅಣುಸ್ಥಾವರ, ನೌಕಾನೆಲೆ ಭದ್ರತೆ ದೃಷ್ಟಿಯಿಂದ ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ಹೆಚ್ಚಿನ ತನಿಖೆ ಶುರು ಮಾಡಿದೆ.
ಮುಂಡಗೋಡ ತಾಲೂಕಿನಲ್ಲಿ ಮಳೆಯಿಂದ 12 ಮನೆಗಳಿಗೆ ಹಾನಿ..!
ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆ, ಗಾಳಿ ಅವಾಂತರ ತಂದಿಟ್ಟಿದೆ. ತಾಲೂಕಿನಲ್ಲಿ ಮಳೆ ಗಾಳಿಗೆ ಒಟ್ಟೂ 12 ಮನೆಗಳಿಗೆ ಹಾನಿಯಾಗಿದ್ದು ಸಂಕಷ್ಟ ತಂದೊಡ್ಡಿದೆ. ಮಳೆಯಿಂದ ಹಾನಿ ಎಲ್ಲೇಲ್ಲಿ..? ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 12 ಮನೆಗಳಿಗೆ ಮಳೆ, ಗಾಳಿಯಿಂದ ಹಾನಿಗೊಳಗಾಗಿದ್ದು, ಹುನಗುಂದ, ಹರಗನಳ್ಳಿ, ಭದ್ರಾಪುರ, ಶ್ಯಾನವಳ್ಳಿ, ಇಂದೂರು, ಗಣೇಶಪುರ, ಚಿಗಳ್ಳಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಇನ್ನು ಮುಂಡಗೋಡ ಪಟ್ಟಣ ಹಾಗೂ ಸನವಳ್ಳಿ ಗ್ರಾಮದಲ್ಲಿ ತಲಾ ಎರಡು ಮನೆಗಳು ಜಖಂಗೊಂಡಿವೆ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಇನ್ನು ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳು ಶೀಘ್ರವೇ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.