ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?

ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?

  ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಗೊತ್ತಿಲ್ಲ. ಇಲ್ಲಿ‌ನ ಅರಣ್ಯ ಸಂಪತ್ತು ಹಾಡಹಗಲೇ ಲೂಟಿಯಾಗ್ತಿದೆ‌. ಅದ್ರಲ್ಲೂ ಕಾತೂರ ಭಾಗದಲ್ಲಿ ನಿತ್ಯವೂ ನೂರಾರು ಮರಗಳು ಉಸಿರು ಚೆಲ್ಲುತ್ತಿವೆ. ಅಸಲು, ಇದೇಲ್ಲ ಖುದ್ದು ಅರಣ್ಯ ಇಲಾಖೆಯ ಕೆಲ ಬ್ರಷ್ಟ ಕಾರಬಾರಿಗಳ ನೆರಳಲ್ಲೇ ನಡೀತಿದೆ ಅನ್ನೋದು ಬಹುದೊಡ್ಡ ದುರಂತ. ಸಾಲು ಸಾಲು ಮಾರಣಹೋಮ..! ನಿಜ ಅಂದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾಡಹಗಲೇ ಅಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆಯಲಾಗ್ತಿದೆ. ಕೋಡಂಬಿ ಸಮೀಪದ ಕಾಡುಗಳಲ್ಲಿ ನಿತ್ಯವೂ ಅರಣ್ಯಗಳ್ಳರು ಬೆಲೆಬಾಳುವ ಅಮೂಲ್ಯ ಮರಗಳನ್ನು ಕಡಿದೊಯ್ತಿದಾರೆ. ಇಷ್ಟೇಲ್ಲ ಆದ್ರೂ ಇಲಾಖೆಯ ಯಾವೊಬ್ಬ ಅಧಿಕಾರಿಗೂ ಕಣ್ಣಿಗೆ ಕಾಣೋದೇ ಇಲ್ಲ. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಆ ಭಾಗದ ಕೆಲವು ಗ್ರಾಮಗಳ ಪರಿಸರ ಪ್ರಿಯರು ಮಾಹಿತಿ ನೀಡಿದ್ರು. ಈ ಕಾರಣಕ್ಕಾಗಿ ರಿಯಾಲಿಟಿ ಚೆಕ್ ಗೆ ತೆರಳಿದ್ದಾಗ ಅಲ್ಲಿನ ಅರಣ್ಯದ ಮಾರಣಹೋಮದ ಇಂಚಿಂಚು ಕತೆಗಳು ಬೆಳಕಿಗೆ ಬಂತು. ಇಲಾಖೆಯಲ್ಲೇ ಕಳ್ಳರು..! ಈಗ್ಗೆ...

ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!

ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!

ಶಿಗ್ಗಾವಿ: ಬೈಕ್ ಅಪಘಾತದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರು ದಾರುಣ ಸಾವು ಕಂಡ ಘಟನೆ ಶಿಗ್ಗಾವಿ ನಡೆದಿದೆ‌. ಶಿಗ್ಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಚನ್ನಪ್ಪ ದೊಡ್ಡಪ್ಪ ಸಂಶಿ(54) ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ. ಇಂದು ಮದ್ಯಾಹ್ನ ಶಿಗ್ಗಾವಿ ತಾಲೂಕಿನ ಹನುಮರಳ್ಳಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ಸಮನ್ಸ್ ಜಾರಿ ಕುರಿತು ಕರ್ತವ್ಯ ನಿಮಿತ್ತ ಹೊರಟಾಗ ಶಿಗ್ಗಾವಿ ತಾಲ್ಲೂಕಿನ ಹನಮರಹಳ್ಳಿ ಗ್ರಾಮದ ಹತ್ತಿರ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ. ಮೂಲತಃ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದವರಾಗಿದ್ದು ಹಾಲಿ ಶಿಗ್ಗಾಂವಿ ಪಟ್ಟಣದ ಮಾರುತಿ ನಗರದಲ್ಲಿ ವಾಸವಿದ್ರು. ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ 2007 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. 24-07-2020 ರಿಂದ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ದಕ್ಷ ಎಸ್ಪಿ ಮೇಡಂ ಎತ್ತಂಗಡಿಗೆ ಮುಹೂರ್ತ ಫಿಕ್ಸ್..? ಉಸ್ತುವಾರಿ “ಕೋಟಾ” ದಡಿ “ವಿಷ್ಣು” ವರ್ಧನವಾ..? ಅಷ್ಟಕ್ಕೂ,ದಕ್ಷತೆಗೆ ಇಷ್ಟೆನಾ ಬೆಲೆ..?

ದಕ್ಷ ಎಸ್ಪಿ ಮೇಡಂ ಎತ್ತಂಗಡಿಗೆ ಮುಹೂರ್ತ ಫಿಕ್ಸ್..? ಉಸ್ತುವಾರಿ “ಕೋಟಾ” ದಡಿ “ವಿಷ್ಣು” ವರ್ಧನವಾ..? ಅಷ್ಟಕ್ಕೂ,ದಕ್ಷತೆಗೆ ಇಷ್ಟೆನಾ ಬೆಲೆ..?

ಉತ್ತರ ಕನ್ನಡ ಕಂಡ ದಕ್ಷ ಐಪಿಎಸ್ ಅಧಿಕಾರಿ, ಎಸ್ಪಿ ಡಾ. ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆ ಆಗೋದು ಬಹುತೇಕ ಫಿಕ್ಸ್ ಆಗಿದೆಯಂತೆ. ಇದೇ ಡಿಸೆಂಬರ್ ಅಂತ್ಯದ ಹೊತ್ತಿಗೆ ಸುಮನಾ ಮೇಡಮ್ಮಿಗೆ ಜಿಲ್ಲೆಯಿಂದ ಎತ್ತಂಗಡಿ ಮಾಡೋಕೆ ಅದೊಂದು “ಕೂಟ” ನಿದ್ದೆಗೆಟ್ಟು ಓಡಾಡ್ತಿದೆ ಅನ್ನೋದು ಸದ್ಯದ ಸುದ್ದಿ. ದಕ್ಷ, ಖಡಕ್ ಪೊಲೀಸ್ ಅಧಿಕಾರಿಣಿ ಸುಮನಾ ಪೆನ್ನೇಕರ್ ಜಾಗಕ್ಕೆ “ಉಸ್ತುವಾರಿ” ಗಳ ಖಾಸಾ ಶಿಷ್ಯರೊಬ್ಬರನ್ನು ಪ್ರತಿಷ್ಟಾಪಿಸಲು ಮುಹೂರ್ತವೂ ಪಿಕ್ಸ್ ಆಗಿದೆಯಂತೆ. “ವಿಷ್ಣು” ವರ್ಧನವಾ..? ಈ ಮೊದಲು ಉಡುಪಿ ಜಿಲ್ಲೆಯ ಎಸ್ಪಿಯಾಗಿ‌ ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿಯನ್ನು ಉತ್ತರ ಕನ್ನಡಕ್ಕೆ ತಂದು ಕೂರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಒಳಗೊಳಗೇ ಮಾಡಿಕೊಳ್ಳಲಾಗಿದೆ ಅನ್ನೋ ಮಾಹಿತಿ ಇದೆ. ಶ್ರೀನಿವಾಸರ “ಕೋಟಾ” ದಡಿಯಲ್ಲಿ “ವಿಷ್ಣು” ವರ್ಧನೆಗೆ ಬೇಕಾದ ಎಲ್ಲಾ ಮಸಲತ್ತುಗಳೂ ಜಾರಿಯಲ್ಲಿವೆ. ಈ ಕುರಿತು ಸಿಎಂ ಎದುರೂ ಪುಂಖಾನುಪುಂಕ ವರದಿಗಳು ಖುದ್ದು ಕೆಲ ಸಚಿವರು, ಶಾಸಕರ ಅಮೃತ ಹಸ್ತದಿಂದಲೇ ಸಲ್ಲಿಕೆಯಾಗಿ ಆಗಿದೆ. ಅಲ್ಲದೇ ಸಿಎಂ ಎದುರು, ಈಗಿನ ಎಸ್ಪಿ ಮೇಡಂ ನಮ್ಮ ಮಾತೇ...

ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?

ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?

ಯಲ್ಲಾಪುರ ಅರೆಬೈಲ್ ಘಾಟಿನಲ್ಲಿ ಭಯಾನಕ ರಾಬರಿ ನಡೆದಿದೆ‌. ಕಾರಲ್ಲಿ ತೆರಳುತ್ತಿದ್ದವರನ್ನ ಥೇಟು ಸಿನಿಮಾ ಸ್ಟೈಲಿನಲ್ಲೇ ಅಡ್ಡಗಟ್ಟಿ ಕೋಟಿ ಕೋಟಿ ಹಣ ಎಗರಿಸಿಕೊಂಡು ಹೋಗಿದ್ದಾರೆ ಖದೀಮರು. ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು‌. ಹೀಗಾಗಿ, ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ. ಹೇಗಾಯ್ತು..? ಅವತ್ತು ಅಕ್ಟೋಬರ್ ಒಂದನೇ ತಾರೀಖು, ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರೆಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದಾರೆ ಖದೀಮರು. ತಕ್ಷಣವೇ ಆರೇಳು ಜನ ದರೋಡೆಕೋರರ ತಂಡ ಏಕಾಏಕಿ ಕಾರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ಮಾಡಿದೆ. ಹೀಗಾಗಿ, ಅಕ್ಷರಶಃ ದರೋಡೆಕೋರರ ದಾಳಿಗೆ ನಲುಗಿ ಹೋಗಿದೆ “ಚಿನ್ನದ ಪಡೆ”.. ಹೀಗಾಗಿ, ಬದುಕಿದರೆ ಸಾಕು ಅಂತಾ ಶರಣಾಗಿದ್ದಾರೆ ಹಣವಂತರು. ತಕ್ಷಣವೇ ಕಾರಲ್ಲಿದ್ದ ಬರೋಬ್ಬರಿ 2...

“ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್” ದೇವರಗುಡ್ಡದ ಕಾರಣೀಕ ನುಡಿ..! ಕಾರಣಿಕದ ಅರ್ಥವೇನು ಗೊತ್ತಾ..?

“ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್” ದೇವರಗುಡ್ಡದ ಕಾರಣೀಕ ನುಡಿ..! ಕಾರಣಿಕದ ಅರ್ಥವೇನು ಗೊತ್ತಾ..?

 ದೇವರಗುಡ್ಡ: ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ಚಾಮಿಯ ಕಾರಣೀಕ ನುಡಿ ಹೊರಬಿದ್ದಿದೆ. “ಅಕಾಶದ ಗುಡ್ಡಕ್ಕೆ ಶಿಶು ಏರಿ ತಲೆ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಕಾರಣಿಕ ನುಡಿ. ವೃತಾಧಾರಿ ಗೊರವಯ್ಯ ನಾಗಪ್ಪಜ್ಜ ದುರಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. ವಿಜಯ ದಶಮಿಯ ಆಯುಧ ಪೂಜೆ ದಿನದಂದು ಪ್ರತಿವರ್ಷ ಕಾರ್ಣಿಕ ನುಡಿವ ಗೊರವಯ್ಯನವರು, ಇಂದು ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ಕಾರಣೀಕ ತಾತ್ಪರ್ಯ..! ಅಂದಹಾಗೆ, ಪ್ರತೀ ವರ್ಷ ಆಯುಧ ಪೂಜೆಯ ದಿನ ನುಡಿಯುವ ದೇವರಗುಡ್ಡದ ಕಾರಣೀಕಚನ್ನು ಬಹುತೇಕ ರೈತರ ಕೃಷಿ ಹಾಗೂ ರಾಜಕೀಯ ಆಗು ಹೋಗುಗಳ ಕುರಿತಾಗಿನೇ ವಿಶ್ಲೇಷಣೆ ಮಾಡಲಾಗುತ್ತದೆ. ಹೀಗಾಗಿ, ಪ್ರಸಕ್ತ ವರ್ಷದ ದೇವರಗುಡ್ಡ ಕಾರಣೀಕದ ತಾತ್ಪರ್ಯವನ್ನೂ ವಿಶ್ಲೇಷಣೆ‌ ಮಾಡಲಾಗಿದೆ. ಕೃಷಿ..! ಈ ಅಕಾಶವೆಂಬ ಒಂದು ಪ್ರಪಂಚದಲ್ಲಿ ಬದುಕುತ್ತಿರುವ ನಾವು, ಅ ಗುಡ್ಡಕ್ಕೆ ಸಣ್ಣದಾದ ಒಂದು ಶಿಶು ಅಂದರೆ, ಸಣ್ಣ ರೈತನು ಕೂಡ ಅಕಾಶದ ಎತ್ತರಕ್ಕೆ ಏರುವ ದಿನ ಬರುತ್ತದೆ. ರೈತರು ಬೆಳೆದ ಬೆಳೆಗಳಿಗೆ ಅಕಾಶದ ಎತ್ತರದ ಬೆಲೆ ಸಿಗಲಿದೆ ಅಂತಾ ಕೃಷಿಗೆ...

108 ಅಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದ ಹಿನ್ನೆಲೆ, ರಾಜ್ಯಾಧ್ಯಂತ 108 ಅಂಬ್ಯುಲೆನ್ಸ್ ಸೇವೆ ವ್ಯತ್ಯಯ..!

108 ಅಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದ ಹಿನ್ನೆಲೆ, ರಾಜ್ಯಾಧ್ಯಂತ 108 ಅಂಬ್ಯುಲೆನ್ಸ್ ಸೇವೆ ವ್ಯತ್ಯಯ..!

ಬೆಂಗಳೂರು: ರಾಜ್ಯಾದ್ಯಂತ 108 ಅಂಬ್ಯುಲೆನ್ಸ್ ಸೇವೆ ಬಹುತೇಕ ಸ್ಥಗಿತವಾಗುತ್ತಿದೆ. ಕಳೆದ ಎರಡು ತಿಂಗಳಿಂದ ಸರಿಯಾಗಿ ಸಂಬಳ ನೀಡದ ಹಿನ್ನೆಲೆ 108 ಸಿಬ್ಬಂದಿಗಳು ಸೇವೆ ಸ್ಥಗಿತಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಇಂದು ಕೇವಲ 300 ರಿಂದ 400 ಅಂಬ್ಯಲೆನ್ಸ್ ಗಳು ಮಾತ್ರ ಕಾರ್ಯನಿರ್ವಹಿಸ್ತಿದೆ. ಉಳಿದಂತೆ ಯಾವುದೇ 108 ಅಂಬ್ಯುಲೆನ್ಸ್ ಗಳು ಕಾರ್ಯ ನಿರ್ವಹಿಸ್ತಿಲ್ಲ. ಸಂಬಳ ಇಲ್ಲ‌‌.. ಅಸಲು, 108 ಅಂಬ್ಯಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿಂದ ಯಾವುದೇ ಸಂಬಳ ನೀಡಿಲ್ಲ. ಹೀಗಾಗಿ, 108 ಅಂಬ್ಯಲೆನ್ಸ್ ಸಿಬ್ಬಂದಿಗಳು ದಸರಾ ಹಬ್ಬದ ಸಂಭ್ರಮಕ್ಕೂ ಸಮಸ್ಯೆಯಾಗಿದೆ. ಸಂಬಳವಿಲ್ಲದೇ ಹೇಗೆ ಕಾರ್ಯ ನಿರ್ವಹಿಸೋದು ಅಂತಾ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ‌. ನಾಳೆ ಮದ್ಯಾಹ್ನದ ಗಡುವು..? ಇಂದು ಬಹುತೇಕ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದು, ನಾಳೆ ಮದ್ಯಾನದವರೆಗೂ ಗಡುವು ನೀಡಿದ್ದಾರಂತೆ. ನಾಳೆಯಷ್ಟೊತ್ತಿಗೆ ಸಂಬಳ ನೀಡದೇ ಹೋದರೆ ಇಡೀ ರಾಜ್ಯಾದ್ಯಂತ ಅಂಬ್ಯಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ‌.

ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!

ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!

ಹಳಿಯಾಳ: ಗಾಂಜಾ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಿದ್ದ ವ್ಯಕ್ತಿಯನ್ನು ಸಿನಿಮಿಯ ರೀತಿಯಲ್ಲಿ ಟ್ರೇಸ್ ಮಾಡಿ ಹಿಡಿದಿದ್ದಾರೆ ಹಳಿಯಾಳ ಪೊಲೀಸ್ರು. ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಕಲ್ಲಯ್ಯ ಚಂಬಯ್ಯ ಗುಡಿ ಎಂಬುವನೇ ಗಾಂಜಾ ಸಾಗಿಸುತ್ತಿದ್ದ ಆರೋಪಿಯಾಗಿದ್ದಾನೆ. ಅಂದಹಾಗೆ, ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಯ ನವರಾತ್ರಿಯ ಸಂಭ್ರಮ ಜೋರಾಗಿದೆ. ಗ್ರಾಮಗಳಲ್ಲಿ ದಸರಾ ಹಬ್ಬದ ನಿಮಿತ್ಯ ದುರ್ಗಾದೌಡ್ ಮೆರೆವಣಿಗೆ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ದುರ್ಗಾ ದೌಡ್ ಮೆರವಣಿಗೆಯ ಬಂದೋಬಸ್ತ್ ಗಾಗಿ ತೆರಳಿದ್ದ ಹಳಿಯಾಳ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ ಅವರ ಪಡೆ, ಕರ್ತವ್ಯ ಮುಗಿಸಿ ವಾಒಸ್ ಬರುತ್ತಿದ್ದಾಗ, ತಾಲೂಕಿನ ಹವಗಿ ಗ್ರಾಮದ ಐಟಿಐ ಕಾಲೇಜಿನ ಹತ್ತಿರ ಗಾಂಜಾ ಸಾಗಿಸುತ್ತಿದ್ದ ಆರೋಪಿ ಎದುರಿಗೆ ಸಿಕ್ಕಿದ್ದಾನೆ. ಅಸಲು, ಆತ ಯಾರು ಅನ್ನೋದೇ ಪೊಲೀಸರಿಗೆ ಗೊತ್ತಿರಲಿಲ್ಲ. ಆದ್ರೆ ಯಾವಾಗ ಪೊಲೀಸರ ವಾಹನ ಕಂಡ ಕೂಡಲೇ ಆರೋಪಿ ಓಡಲು ಶುರುವಿಟ್ಟಿದ್ದಾನೆ. ತಕ್ಷಣವೇ ಅನುಮಾನಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕೈಗೆ ಸಿಕ್ಕ ವ್ಯಕ್ತಿಯನ್ನು ವಿಚಾರಿಸಿದಾಗ ಆತನೇ ಒಪ್ಪಿಕೊಂಡಿದ್ದು, ಹಳಿಯಾಳಕ್ಕೆ...

ಅ.28 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಪಾಳಾ ಪಂಚಾಯತಿ 1ಸ್ಥಾನಕ್ಕೆ ಚುನಾವಣೆ

ಅ.28 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಪಾಳಾ ಪಂಚಾಯತಿ 1ಸ್ಥಾನಕ್ಕೆ ಚುನಾವಣೆ

ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿರುವ ಗ್ರಾಮ ಪಂಚಾಯತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 28 ರಂದು ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. 2022 ಅಗಷ್ಟ ನಿಂದ, 2022ರ ನವೆಂಬರ್ ತಿಂಗಳವರೆಗಿನ ಅವಧಿಯಲ್ಲಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪುಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪಾಳಾ 1 ಸ್ಥಾನಕ್ಕೆ ಚುನಾವಣೆ..! ಅದ್ರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟೂ 6 ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅದ್ರಲ್ಲಿ ಮುಂಡಗೋಡ ತಾಲೂಕಿನ ಪಾಳಾ ಗ್ರಾಮ ಪಂಚಾಯತಿಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಉಪಚುನವಾಣೆ ನಡೆಯಲಿದೆ. ಅಂದಹಾಗೆ, ಪಾಳಾ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದ ಶ್ರೀಮತಿ ಅಕ್ಕಮ್ಮ ಬಸವರಾಜ್ ಮೇಲಿನಮನಿ...

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸ್ವಾಮಿಗಳ “ಸಂಗ”..? ಅಸಲು,20 ಸಾವಿರಕ್ಕೆ ವೀಳ್ಯ ಪಡೆದವರು ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸ್ವಾಮಿಗಳ “ಸಂಗ”..? ಅಸಲು,20 ಸಾವಿರಕ್ಕೆ ವೀಳ್ಯ ಪಡೆದವರು ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸಂಗನಬಸಯ್ಯ ಮುಖ್ಯಾಧಿಕಾರಿಯಾಗಿ ವಾಪಸ್ ಬರ್ತಾರಾ.‌? ಹಾಗಂತ ಒಂದು ಗುಮಾನಿ ಪಟ್ಟಣದಲ್ಲಿ ಗುಲ್ಲೆದ್ದಿದೆ‌. ಈ ಕಾರಣಕ್ಕಾಗಿನೇ ಸ್ವಾಮಿಗಳನ್ನು ಮತ್ತೆ ಪ್ರತಿಷ್ಟಾಪನೆಗೊಳಿಸಲು ಕೆಲವೊಬ್ರು ಸಾಹೇಬ್ರ ಜೊತೆ ಮಾತುಕತೆ ಮಾಡಿದ್ರಾ..? ವಾರದಲ್ಲಿ ಮೂರು ದಿನ ಮುಂಡಗೋಡಕ್ಕೆ ಮತ್ತೆ, ಮೂರು ದಿನ ಯಲ್ಲಾಪುರಕ್ಕೆ ಅನ್ನೋ ಕ್ಯಾಲ್ಕುಲೇಶನ್ ನಲ್ಲಿ ಕುಳಿತಿರೊ ಮಾಹಿತಿ ಲಭ್ಯವಾಗ್ತಿದೆ. ವೀಳ್ಯ..? ಇದೇ ವಿಷಯ ಇಟ್ಕೊಂಡು ಅದ್ಯಾರೋ ಮಹಾಶಯರು ಒಬ್ರು ಸಾಹೇಬ್ರ ಜೊತೆ ಮಾತಾಡೋಕೆ ಅಂತಾನೇ ಬರೋಬ್ಬರಿ ಇಪ್ಪತ್ತು ಸಾವಿರಕ್ಕೆ “ವೀಳ್ಯ” ಪಡೆದಿದ್ರು ಅನ್ನೋದು ಲೆಟೆಸ್ಟ್ ಸುದ್ದಿ.. ಆದ್ರೆ ಹಾಗೆ ಮಾತಾಡೋಕೆ ಡೀಲು ಮಾಡಿಕೊಂಡಿದ್ದವರು ಯಾರು ಅಂತಾ ದುರ್ಬಿನ್ ಹಾಕಿ ಹುಡುಕಿದ್ರು ನಮಗಿನ್ನೂ ಸಿಕ್ಕಿಲ್ಲ. ಅಂದಹಾಗೆ, ಸಂಗನಬಸಯ್ಯ ಸ್ವಾಮಿಗಳು ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಹಲವು ವರ್ಷ ಖಡಕ್ಕು ಕಾರುಬಾರು ಮಾಡಿದವರು, ಒಂದರ್ಥದಲ್ಲಿ ಮುಂಡಗೋಡ ಪಟ್ಟಣ ಪಂಚಾಯತಿಯ ಕಣಕಣದಲ್ಲಿ ಸಂಗನಬಸಯ್ಯ ಸ್ವಾಮಿಗಳ ಹೆಸರು ಅಡಗಿದೆ ಅನ್ನೋ ಮಾತು ಖುದ್ದು ಅದೇ ಪಂಚಾಯತಿಯ “ಖುರ್ಚಿ”ಯಲ್ಲಿ ಬಣ್ಣ ಬಣ್ಣದ ಕರ್ಚೀಪು ಹಾಕಿ ಕೂತವರೇ ಕೆಲವ್ರು...

ಪಾಳಾದಲ್ಲಿ MSIL ವೈನ್ ಶಾಪ್ ದೋಚಿದ ಖದೀಮರು, ಗಾಂಧಿ ಜಯಂತಿಯಂದೇ ಅದೇಷ್ಟು ಎಣ್ಣೆ ಕದ್ರು ಗೊತ್ತಾ..?

ಪಾಳಾದಲ್ಲಿ MSIL ವೈನ್ ಶಾಪ್ ದೋಚಿದ ಖದೀಮರು, ಗಾಂಧಿ ಜಯಂತಿಯಂದೇ ಅದೇಷ್ಟು ಎಣ್ಣೆ ಕದ್ರು ಗೊತ್ತಾ..?

ಮುಂಡಗೋಡ ತಾಲೂಕಿನ ಪಾಳಾದಲ್ಲಿ MSIL ವೈನ್ ಶಾಪ್ ಕಳ್ಳತನವಾಗಿದೆ. ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು ಸಿಕ್ಕಷ್ಟು ಎಣ್ಣೆ ಬಾಚಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿಯೇ ನಡೆದಿರೋ ಘಟನೆ, ಇಂದು ಸಂಜೆ ಬೆಳಕಿಗೆ ಬಂದಿದೆ. ಗಾಂಧಿ ಜಯಂತಿಯ ಕಾರಣಕ್ಕೆ ಬಂದ್ ಆಗಿದ್ದ MSIL ವೈನ್ ಶಾಪ್ ಗೆ ಕನ್ನ ಹಾಕಿರೋ ಖದೀಮರು ಸುಮಾರು 60-65 ಸಾವಿರ ಮೌಲ್ಯದ ಮದ್ಯ ಎಗರಿಸಿ ಹೋಗಿದ್ದಾರೆ ಅಂತಾ ಅಂದಾಜಿಸಲಾಗಿದೆ. ಅಂದಹಾಗೆ, ನಿನ್ನೆ ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪದಲ್ಲೂ ಇದೇ‌ಮಾದರಿಯಲ್ಲಿ ವೈನ್ ಶಾಪ್ ಕಳ್ಳತನವಾಗಿದೆ. ಹೀಗಾಗಿ, ಈ ಕಳ್ಳತನವೂ ಅದೇ ಗ್ಯಾಂಗ್ ಮಾಡಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಕಳ್ಳರಿಗೆ ಬಲೆ ಬೀಸಿದ್ದಾರೆ.

error: Content is protected !!