ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡಸಿ ಗಾಯಗೊಳಿಸಿದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆದಿದೆ.

ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45)ಎಂಬವನೆ ಗಾಯಗೊಂಡ ರೈತನಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿನಿಂದ ಬಂದ ಕರಡಿಯೊಂದು ದಾಳಿ ನಡೆಸಿ ಹಿಂಬದಿ ಕಚ್ಚಿ ಗಾಯಗೊಳಿಸಿದೆ.

ಈ ವೇಳೆ ರೈತ ತೀವ್ರ ಚೀರಾಟ ನಡೆಸಿದಾಗ ಕರಡಿ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ರೈತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

error: Content is protected !!