ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸ್ವಾಮಿಗಳ “ಸಂಗ”..? ಅಸಲು,20 ಸಾವಿರಕ್ಕೆ ವೀಳ್ಯ ಪಡೆದವರು ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸಂಗನಬಸಯ್ಯ ಮುಖ್ಯಾಧಿಕಾರಿಯಾಗಿ ವಾಪಸ್ ಬರ್ತಾರಾ.‌? ಹಾಗಂತ ಒಂದು ಗುಮಾನಿ ಪಟ್ಟಣದಲ್ಲಿ ಗುಲ್ಲೆದ್ದಿದೆ‌. ಈ ಕಾರಣಕ್ಕಾಗಿನೇ ಸ್ವಾಮಿಗಳನ್ನು ಮತ್ತೆ ಪ್ರತಿಷ್ಟಾಪನೆಗೊಳಿಸಲು ಕೆಲವೊಬ್ರು ಸಾಹೇಬ್ರ ಜೊತೆ ಮಾತುಕತೆ ಮಾಡಿದ್ರಾ..? ವಾರದಲ್ಲಿ ಮೂರು ದಿನ ಮುಂಡಗೋಡಕ್ಕೆ ಮತ್ತೆ, ಮೂರು ದಿನ ಯಲ್ಲಾಪುರಕ್ಕೆ ಅನ್ನೋ ಕ್ಯಾಲ್ಕುಲೇಶನ್ ನಲ್ಲಿ ಕುಳಿತಿರೊ ಮಾಹಿತಿ ಲಭ್ಯವಾಗ್ತಿದೆ.

ವೀಳ್ಯ..?
ಇದೇ ವಿಷಯ ಇಟ್ಕೊಂಡು ಅದ್ಯಾರೋ ಮಹಾಶಯರು ಒಬ್ರು ಸಾಹೇಬ್ರ ಜೊತೆ ಮಾತಾಡೋಕೆ ಅಂತಾನೇ ಬರೋಬ್ಬರಿ ಇಪ್ಪತ್ತು ಸಾವಿರಕ್ಕೆ “ವೀಳ್ಯ” ಪಡೆದಿದ್ರು ಅನ್ನೋದು ಲೆಟೆಸ್ಟ್ ಸುದ್ದಿ.. ಆದ್ರೆ ಹಾಗೆ ಮಾತಾಡೋಕೆ ಡೀಲು ಮಾಡಿಕೊಂಡಿದ್ದವರು ಯಾರು ಅಂತಾ ದುರ್ಬಿನ್ ಹಾಕಿ ಹುಡುಕಿದ್ರು ನಮಗಿನ್ನೂ ಸಿಕ್ಕಿಲ್ಲ.

ಅಂದಹಾಗೆ, ಸಂಗನಬಸಯ್ಯ ಸ್ವಾಮಿಗಳು ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಹಲವು ವರ್ಷ ಖಡಕ್ಕು ಕಾರುಬಾರು ಮಾಡಿದವರು, ಒಂದರ್ಥದಲ್ಲಿ ಮುಂಡಗೋಡ ಪಟ್ಟಣ ಪಂಚಾಯತಿಯ ಕಣಕಣದಲ್ಲಿ ಸಂಗನಬಸಯ್ಯ ಸ್ವಾಮಿಗಳ ಹೆಸರು ಅಡಗಿದೆ ಅನ್ನೋ ಮಾತು ಖುದ್ದು ಅದೇ ಪಂಚಾಯತಿಯ “ಖುರ್ಚಿ”ಯಲ್ಲಿ ಬಣ್ಣ ಬಣ್ಣದ ಕರ್ಚೀಪು ಹಾಕಿ ಕೂತವರೇ ಕೆಲವ್ರು ಹೇಳಿಕೊಂಡಿದ್ದಾರೆ.

ಎರಡು ದಿನದ ಹಿಂದೆ..?
ಯಸ್, ಹೇಗಾದ್ರೂ ಸರಿ ಮತ್ತೆ ಮುಂಡಗೋಡಿನ ಪಟ್ಟಣ ಪಂಚಾಯತಿಯ ಚೀಪ್ ಆಫೀಸರ್ ಖುರ್ಚಿ ಮೇಲೆ ಸ್ವಾಮಿಗಳನ್ನ ಕೂರಿಸಿ ಕಣ್ತುಂಬಿಕೊಳ್ಳಬೇಕು ಅಂತಾ ಅದೊಂದು ಪಡೆ ಒಳಗಿಂದೊಳಗೆ ಕಾರ್ಯತಂತ್ರ ರೂಪಿಸ್ತಿರೋ ಮಾತು ಇದೆ. ಈಗಿರೋ “ಚೀಫು” ಮಂತ್ರಕ್ಕಿಂತ ಉಗುಳನ್ನೇ ಜಾಸ್ತಿ ಕಕ್ಕುತ್ತಿರೋ ಕಾರಣಕ್ಕೆ ನಮಗೆ ಇವ್ರು ಬೇಡ, ಕನಿಷ್ಟ ಪಕ್ಷ ವಾರದಲ್ಲಿ ಮೂರು ದಿನವಾದ್ರೂ ಸಂಗನಬಸಯ್ಯ ಸ್ವಾಮಿಗಳ “ಸಂಗ” ಬೇಕೆ ಬೇಕು ಅಂತಾ ಜಿದ್ದಿಗೆ ಬಿದ್ದಿದ್ದಾರಂತೆ. ಹೀಗಾಗಿ, ಈ ಕಾರ್ಯತಂತ್ರಕ್ಕೆ ಹೆಬ್ಬಾರ್ ಸಾಹೇಬ್ರು ಓಕೆ ಅನ್ನೋ ಹಾಗೆ ಅವ್ರ ಮನವೊಲಿಸಬೇಕು ಅಂತಾ ಅವನೊಬ್ಬನಿಗೆ 20 ಸಾವಿರ ರೂಪಾಯಿ ಉಡಿಗೆ ಹಾಕಿ, ಸಾಹೇಬ್ರಿಗೆ ಹೇಳಪ್ಪಾ ಅಂತಾ ಹುರುದುಂಬಿಸಿ ಕಲಿಸಿದ್ರಂತೆ. ಆದ್ರೆ ಹಾಗೆ ಸಾಹೇಬ್ರ ಹತ್ರ ಹೋಗಿದ್ದ ಆತ ಅದೇಷ್ಟರ ಮಟ್ಟಿಗೆ ಹೇಳಿದ್ನೊ ಬಿಟ್ನೊ ಗೊತ್ತಿಲ್ಲವಂತೆ. ಹೀಗಾಗಿ, ಖುದ್ದು ಸಂಗನಬಸಯ್ಯ ಸ್ವಾಮಿಗಳೂ ಸೇರಿ ಹಲವರು ಇದೇ ಚಿಂತೆಯಲ್ಲಿ ಮುಳುಗಿದ್ದಾರೆ ಅಂತಾ ಪಂಚಾಯತಿ ಅಂಗಳದಲ್ಲಿ ಚರ್ಚೆಯಾಗ್ತಿದೆ.

ಬಿಸಿತುಪ್ಪವಾದ್ರಾ ಮಲ್ಲಯ್ಯ..?
ಅಸಲು, ಸಿಎಂ ತವರು ಕ್ಷೇತ್ರ ಶಿಗ್ಗಾವಿಯಿಂದ ಮುಂಡಗೋಡಿಗೆ ವರ್ಗವಾಗಿ ಬಂದು ಕೂತಿರೋ ಮಲ್ಲಯ್ಯ ಸ್ವಾಮಿಗಳು ಒಂದಿಷ್ಟು ಕಠೋರ ಮನುಷ್ಯ. ಮಾತು ಮತ್ತು ಕೃತಿಗಳ ವಿಷಯದಲ್ಲಿ ಹೇಳೋದಾದ್ರೆ ಈ ಯಪ್ಪ ಕೆಲಸಗಾರನೂ ಹೌದು. ಕೆಲವ್ರಿಗೆ ಈತನ ಕೆಲವೊಂದು ವರಸೆಗಳು ಸಹ್ಯವಾಗುವುದಿಲ್ಲ. ಹೀಗಾಗಿ, ಒಳಗೊಳಗೆ “ಚೀಪು” ಕಂಡಕೂಡಲೇ ಚೀರಾಟ, ಹಾರಾಟ ನಡೀತಿದೆಯಂತೆ. ಮೀಟಿಂಗುಗಳಲ್ಲಿ ಏಕದಂ ಎಗರಾಟಗಳೂ ನಡೀತಿವೆಯಂತೆ.

ಬೃಂದಾವನದಿಂದ..!
ಅಂದಹಾಗೆ, ಈಗ್ಗೆ ಎರಡು ಮೂರು ದಿನಗಳ ಹಿಂದೆ ಪಟ್ಟಣ ಪಂಚಾಯತಿ ಸಭೆಯಲ್ಲಿ, ಅದೇನೋ “ಬೃಂಧಾವನ”ದ ಇಶ್ಯೂ ಬೆಂಕಿಯಂತ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಆ ಬಿಸಿಯ ಬಿಸಿಯ ಚರ್ಚೆಯ ಹಿಂದೆ “ಪಂಚ” ಲಂಚದ ಬಾಬತ್ತಿನ ಅಂತೆ ಕಂತೆಗಳ ಒಳಹೂರಣದ ಅನುಮಾನದ ಹೊಗೆಯಾಡಿತ್ತು. ಹೀಗಾಗಿ, ಬಹುತೇಕ ಖುರ್ಚಿಗಳು ಅವತ್ತಿನ ಸಭೆಯಲ್ಲಿ ಗರಮಾ ಗರಂ ಆಗಿದ್ದವು‌. ಈ ಕಾರಣಕ್ಕಾಗೇ ಸಂಗನಬಸಯ್ಯನವರ ಸಂಗಕ್ಕಾಗಿ ಮತ್ತೆ ಬಯಕೆಗಳು ಶುರುವಾಯ್ತಾ ಅನ್ನೊ ಅನುಮಾನಗಳಿವೆ. ಅದೇನು ಕತೆಯೋ ಗೊತ್ತಿಲ್ಲ.

ಅದರ ಜೊತೆ ಫಾರ್ಮ ನಂಬರ್ 3 ರ ಅಮೇದ್ಯ ಸದ್ಯ ಪಂಚಾಯತಿಯ ಕೆಲವೇ ಕೆಲವು ಅಧಿಕಾರಿಗಳು ಟೇಬಲ್ಲು ಕೆಳಗಡೆ ಲಕ್ಷ್ಮವ್ವ ತಾಯಿ ಹರಿದಾಡುವಂತೆ ಮಾಡುತ್ತಿದೆ. ಹೀಗಾಗಿ, ಇದೇ ವೇಳೆಯಲ್ಲಿ ಹಳೆಯ ಸ್ವಾಮಿಗಳು ಬಂದ್ರೆ ಒಂದಿಷ್ಟು ಬರಪೂರ “ಎಣಕೀ” ಮಾಡಬಹುದು ಅನ್ನೋ ಲೆಕ್ಕಾಚಾರವೂ ಇದೆಯಂತೆ. ಈ ಕಾರಣಕ್ಕಾಗೇ, ಇನ್ನೇನು ಕೆಲವೇ ದಿನಗಳಲ್ಲಿ ಮುಂಡಗೋಡ ಪಟ್ಟಣ ಪಂಚಾಯತಿ “ಚೀಫು” ಖುರ್ಚಿಯ ಮೇಲೆ ಎರಡೇರಡು ಸ್ವಾಮಿಗಳ ದರ್ಬಾರ್ ನಡೆಯೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

error: Content is protected !!