ಕಾರವಾರ:ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅನ್ನೋಟಿಕರ್ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ
ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅನ್ನೋಟಿಕರ್ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು, ಫಲಕಾರಿಯಾಗದೆ ಇಂದು ಸಂಜೆ 5 ಘಂಟೆ 8 ನಿಮಿಷಕ್ಕೆ ವೇಳೆಗೆ ಶುಭಲತಾ ಅವರು ಮೃತಪಟ್ಟಿದ್ದಾರೆ.
ಪತಿ ಶಾಸಕರಾಗಿದ್ದ ವಸಂತ್ ಅನ್ನೋಟಿಕರ್ ಹತ್ಯೆಯ ನಂತರ ಶುಭಲತಾ ಇಡೀ ಕುಟುಂಬದ ಜವಬ್ದಾರಿ ಹೊತ್ತಿದ್ದರು. ಕ್ಷೇತ್ರದಲ್ಲಿ ಅನ್ನೋಟಿಕರ್ ಅಭಿಮಾನಿಗಳ ಜೊತೆ ನಿಂತಿದ್ದ ಶುಭಲತಾರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು.
ಮಗ ಮಾಜಿ ಸಚಿವ ಆನಂದ್ ಅನ್ನೋಟಿಕರ್ ರಾಜಕೀಯಕ್ಕೆ ಬಂದ ನಂತರ ಶುಭಲತಾ ರಾಜಕೀಯದಿಂದ ದೂರ ಉಳಿದಿದ್ದರು. ಮೃತರು ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದು ನಾಳೆ ಕಾರವಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.