ಪಾಳಾದಲ್ಲಿ MSIL ವೈನ್ ಶಾಪ್ ದೋಚಿದ ಖದೀಮರು, ಗಾಂಧಿ ಜಯಂತಿಯಂದೇ ಅದೇಷ್ಟು ಎಣ್ಣೆ ಕದ್ರು ಗೊತ್ತಾ..?

ಮುಂಡಗೋಡ ತಾಲೂಕಿನ ಪಾಳಾದಲ್ಲಿ MSIL ವೈನ್ ಶಾಪ್ ಕಳ್ಳತನವಾಗಿದೆ. ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು ಸಿಕ್ಕಷ್ಟು ಎಣ್ಣೆ ಬಾಚಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿಯೇ ನಡೆದಿರೋ ಘಟನೆ, ಇಂದು ಸಂಜೆ ಬೆಳಕಿಗೆ ಬಂದಿದೆ.

ಗಾಂಧಿ ಜಯಂತಿಯ ಕಾರಣಕ್ಕೆ ಬಂದ್ ಆಗಿದ್ದ MSIL ವೈನ್ ಶಾಪ್ ಗೆ ಕನ್ನ ಹಾಕಿರೋ ಖದೀಮರು ಸುಮಾರು 60-65 ಸಾವಿರ ಮೌಲ್ಯದ ಮದ್ಯ ಎಗರಿಸಿ ಹೋಗಿದ್ದಾರೆ ಅಂತಾ ಅಂದಾಜಿಸಲಾಗಿದೆ. ಅಂದಹಾಗೆ, ನಿನ್ನೆ ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪದಲ್ಲೂ ಇದೇ‌ಮಾದರಿಯಲ್ಲಿ ವೈನ್ ಶಾಪ್ ಕಳ್ಳತನವಾಗಿದೆ. ಹೀಗಾಗಿ, ಈ ಕಳ್ಳತನವೂ ಅದೇ ಗ್ಯಾಂಗ್ ಮಾಡಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಕಳ್ಳರಿಗೆ ಬಲೆ ಬೀಸಿದ್ದಾರೆ.

error: Content is protected !!