ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಶಿಧರ್.!

ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶಶಿಧರ್ ಪರವಾಪುರ ರಾಜೀನಾಮೆ ನೀಡಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಶಶಿಧರ್ ಮುಂದಿನ 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಿಸುವ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಅಂದಹಾಗೆ, ಕಳೆದ ಒಂದು ವರ್ಷದಿಂದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಶಿಧರ್ ಕಾರ್ಯನಿರ್ವಹಿಸಿದ್ದರು. ಒಳಗಿನ ಒಪ್ಪಂದದಂತೆ, ಒಂದು ವರ್ಷದ ನಂತರ ಅಧಿಕಾರ ಬಿಟ್ಟುಕೊಡುವ ಮಾತಾಗಿತ್ತು. ಹೀಗಾಗಿ, ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಈ ವೇಳೆ, ಉಪಾಧ್ಯಕ್ಷ ಕಸ್ತೂರಿ ಹರಿಜನ, ಸದಸ್ಯರ ಕಲ್ಲಪ್ಪ ಸುಣಗಾರ್, ಫಕ್ಕಿರೇಶ್ ತಾವರಗೇರಿ, ರೇಣುಕಾ ಕುರಿ, ಪ್ರಭಾವತಿ ಇಂಗಳೆ ಮುಖಂಡರಾದ ಬಸವರಾಜ್ ಹೊಂಡದಕಟ್ಟಿ, ಅಂದಾನಿ ಸೂರಣ್ಣವರ್, ಮಲ್ಲಿಕಾರ್ಜುನ ಸುಣಗಾರ ಸೇರಿದಂತೆ ಹಲವರು ಹಾಜರಿದ್ದರು.

error: Content is protected !!