ಮುಂಡಗೋಡ ತಾಲೂಕಿನ ಇಂದೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಆಯ್ಕೆಯಾಗಿದ್ದಾರೆ. ಅಸಲು, ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ ಆಗಿರೋದು ವಿಶೇಷ.
ಶಶಿಧರ್ ಪರವಾಪುರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಂದಹಾಗೆ, 16 ಸದಸ್ಯ ಬಲದ ಇಂದೂರು ಗ್ರಾಮ ಪಂಚಾಯತಿಯಲ್ಲಿ ನಾಲ್ಕನೇ ಅವಧಿಗೆ ಫಕ್ಕಿರೇಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗ್ತಿದಾರೆ. ವಿಚಿತ್ರ ಅಂದ್ರೆ ಈ ಹಿಂದೆ ಇದೇ ಗ್ರಾಮ ಪಂಚಾಯತಿಯಲ್ಲಿ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಬೆಂಬಲಿತರು ಕೇವಲ ನಾಲ್ಕೇ ಸದಸ್ಯ ಬಲಕ್ಕೆ ಕುಸಿದಿದ್ದು, ಅಧ್ಯಕ್ಷ ಚುನಾವಣೆಯಲ್ಲಿ ನಾಮಪತ್ರ ಕೂಡ ಸಲ್ಲಿಸಿಲ್ಲ. ಹೀಗಾಗಿ, ಫಕ್ಕಿರೇಶ್ ತಾವರಗೇರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.