ಮುಂಡಗೋಡ ಸಂತೆ ಮಾರುಕಟ್ಟೆ ಬಳಿ ಶ್ರೀಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ..!

ಮುಂಡಗೋಡ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರ ಶ್ರೀಗಂಧ ಮರ ಕಳ್ಳತನ ವಿಫಲ ಯತ್ನ ನಡೆದಿದೆ. ಎಸ್.ನಾರಾಯಣರಾವ್ ಎಂಬುವವರ ಮನೆ ಆವರಣದಲ್ಲಿ ಘಟನೆ ನಡೆದಿದ್ದು ಮರ ಕಡಿದು ಸಾಗಿಸಲಾಗದೇ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ.

ಅಂದಹಾಗೆ, ಇದೇ ಸ್ಥಳದಲ್ಲಿ ಈ ಹಿಂದೆಯೂ ಶ್ರೀಗಂಧದ ಮರಗಳ ಕಳ್ಳತನದ ವಿಫಲ ಯತ್ನಗಳು ನಡೆದಿತ್ತು. ಆದ್ರೆ, ಇವತ್ತು ನಡೆದಿರೋ ಘಟನೆ ಖಚಿತತೆಯಿಂದಲೇ ಕಳ್ಳರು ಬಂದು, ಇನ್ನೇನು ಸಾಗಿಸುವ ಹಂತದಲ್ಲಿ ಅರ್ದಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತದೇ ಪ್ರಕರಣ ದಾಖಲಿಸಿಕೊಂಡು ಮುಂದಿನ “ಕಠಿಣ” ಕ್ರಮಕ್ಕೆ ಮುಂದಾಗಿದ್ದಾರೆ.

error: Content is protected !!