ಮುಂಡಗೋಡ ಪಟ್ಟಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೋಲ್ಡ್ ಸ್ಮಿತ್ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಭೂ ವ್ಯವಹಾರದಲ್ಲಿ ಆಗಿರೋ ದಗಲ್ಬಾಜಿಗೆ ಮನನೊಂದು ಸುಸೈಡ್ ಮಾಡಿಕೊಂಡಿದ್ದಾರೆ ಅಂತಾ ಮೃತನ ಪತ್ನಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಿಣಾಮ ಹುಬ್ಬಳ್ಳಿಯ 6 ಜನರ ವಿರುದ್ಧ ಕೇಸು ದಾಖಲಾಗಿದೆ.
ಜ್ಯುವೇಲ್ಲರಿ ಶಾಪ್ ಮಾಲೀಕ..!
ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಜ್ಯುವೇಲ್ಲರಿ ಶಾಪ್ ನಡೆಸುತ್ತಿದ್ದ ಆಶ್ರಿತ್ ಮೋಹನ್ ವೇರ್ಣೇಕರ್(45) ಎಂಬುವವನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೂ ವ್ಯವಹಾರದಲ್ಲಿ ಮೋಸ..!
ಅಸಲು, ಮುಂಡಗೋಡಿನಲ್ಲಿ ಬಸ್ ನಿಲ್ದಾಣದ ಎದುರುಗಡೆಯೇ ಮನೆ ಹಾಗೂ ಜ್ಯವೇಲ್ಲರಿ ಅಂಗಡಿ ನಡೆಸುತ್ತಿದ್ದ ಆಶ್ರಿತ್ ಹುಬ್ಬಳ್ಳಿಯಲ್ಲೊಂದು ಜಾಗ ಖರೀದಿಸಿದ್ದ. ಈತನಿಗೆ ಹುಬ್ಬಳ್ಳಿಯ ಶಮಶುದ್ದೀನ ಅಬ್ದುಲ ಲತೀಫ್ ಪಟವೇಗರ, ಕುಶಾಲಚಂದ್ರ ಬಾಬುಲಾಲ ಜೈನ್, ಉಪಾದೇವಿ ಕೋಂ ಕುಶಾಲಚಂದ್ರ ಜೈನ್, ಸಾಧಿಕ ಜಕಾಡಿ, ಮುನಾಫ್ ಪಟವೇಗರ ಹಾಗೂ ಜಾವೀದ್ ಅಹ್ಮದ ಬ್ಯಾಳಿ ಇವರೆಲ್ಲರೂ ಸೇರಿ ಹುಬ್ಬಳ್ಳಿಯ ಗಾರ್ಡನಪೇಟದಲ್ಲಿರೊ ಆಸ್ತಿ ಮಾರಾಟ ಮಾಡಿರ್ತಾರೆ.
ಧಮ್ಕಿ ಹಾಕಿದ್ರು..!
ಮಾರಾಟ ಮಾಡಿಕೊಡುವಾಗ ಆಸ್ತಿ ಮೇಲೆ ಇದ್ದ ಸಾಲದ ರಖಂ ಭರಣ ಮಾಡಿ, ಬೋಜಾ ಕಡಿಮೆ ಮಾಡಿ ಕೊಡುವ ಮಾತಾಗಿರತ್ತೆ. ಆದ್ರೆ, ಖರೀದಿ ಪತ್ರಗಳು ಆದ ನಂತರವೂ ಆಸ್ತಿಯ ಮೇಲೆ ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಸಾಲದ ಭೋಜಾ ಇರತ್ತೆ. ಹೀಗಾಗಿ, ಇದನ್ನೆಲ್ಲ ಪ್ರಶ್ನಿಸಿದ್ದ ಆಶ್ರಿತ್ ಗೆ ನಾವು ಹಣ ತುಂಬಲ್ಲ, ಅದೇನ ಮಾಡ್ಕೊತಿಯೊ ಮಾಡ್ಕೊ ಅಂತಾ ಧಮ್ಕಿ ಹಾಕಿದ್ದರು ಅಂತಾ ಆರೋಪಿಸಲಾಗಿದೆ. ಹೀಗಾಗಿ, ಮನನೊಂದ ಆಶ್ರಿತ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮೃತನ ಪತ್ನಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.