ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಸ್ವಾತಿ ಮಂಜುನಾಥ್ ಹೊಸೂರು(26) ನೇಣಿಗೆ ಶರಣಾದ ಗೃಹಿಣಿಯಾಗಿದ್ದಾಳೆ. ತನ್ನ ಮನೆಯ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”
ಮುಂಡಗೋಡ: ತಾಲೂಕಿನ ಹುನಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಕೋವಿಡ್ ಸಂಕಷ್ಟದಿಂದ ಈಗಷ್ಟೆ ಹೊರ ಬಂದಿರೋ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ಶಿಕ್ಷಣ ಪ್ರಾರಂಭವಾಗುತ್ತಿದೆ. ಅಲ್ದೆ, ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದ ಮೂಲಕ ಇಂದಿನಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ತರಗತಿಗಳು ಪ್ರಾರಂಭವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಶಿಕ್ಷಕರು ಈಗಾಗಲೇ ಕಳಿಸಿರೋ ಮಾರ್ಗಸೂಚಿಗಳನ್ನು ಪಾಲಿಸಿ ಪಾಠ ಕೇಳಬೇಕು ಅಂತಾ ಶಿಕ್ಷಕರು ತಿಳಿಸಿದ್ದಾರೆ.
ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!
ಅದ್ಯಾಕೋ ಗೊತ್ತಿಲ್ಲ, ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ಅವ್ರು ಯಾವ ಪಕ್ಷದಲ್ಲಿದ್ದಾರೆ..? ಯಾವ ಹುದ್ದೆಯಲ್ಲಿದ್ದಾರೆ..? ಅಂತೇಲ್ಲ ನೋಡಿ ಬಕೀಟು ಹಿಡಿಯೋ ಸಲುವಾಗಿ ಹೊಗಳುವ, ಅಥವಾ ಅವ್ರಿಂದ ಬೆನ್ನು ತಟ್ಟಿಸಿಕೊಳ್ಳೊ ಇರಾದೆಯ ಜಾಯಮಾನವಂತೂ ನಮಗೆ ಖಂಡಿತ ಇಲ್ಲ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬ ಉತ್ತುಂಗದ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡ ಪಕ್ಷಾತೀತ ನಾಯಕನಾಗಿ ಕಾಣ್ತಾರೆ. ಆ ಕಾರಣಕ್ಕೆ ಅವ್ರನ್ನ ಬಹುಶಃ ಕಾಂಗ್ರೆಸ್ಸಿನ ಅದೇಷ್ಟೋ ಕಾರ್ಯಕರ್ತರೂ ಇಷ್ಟ ಪಡ್ತಾರೆ. ಅಹಂ ಸುಳಿಯಲ್ಲ..! ನಿಜ, ಶಿವರಾಮ್ ಹೆಬ್ಬಾರ್, ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಅವ್ರ ರಾಜಕೀಯ ಜೀವನದ ಹಾದಿ ಅಷ್ಟೊಂದು ಸುಲಭವಾಗಿದ್ದಲ್ಲ. ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋ ಗಳಿಗೆವರೆಗೂ ಅವ್ರು ಕ್ಷೇತ್ರದಲ್ಲಿ ಪಟ್ಟ ಶ್ರಮ, ಕಾರ್ಯಕರ್ತರೊಂದಿಗಿನ ಅವಿನಾಭಾವ ಸಂಬಂಧ, ಅದೇಂತದ್ದೇ ಸಂದರ್ಭ ಬಂದರೂ ಕ್ಷೇತ್ರದ ಜನತೆಯೊಂದಿಗೆ ಸ್ಪಂಧಿಸುವ ಮನೋಭಾವ, ಇದೇಲ್ಲ ಶಿವರಾಮ್ ಹೆಬ್ಬಾರ್ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮಾತಾಗುವಂತೆ ಮಾಡಿದೆ. ಹೆಬ್ಬಾರ್ ಸಾಹೇಬ್ರು ಸಚಿವರಾದ ಮೇಲೆ ಕ್ಷೇತ್ರದ ಜನರ...
ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!
ಕಾರವಾರ: ಕರ್ನಾಟಕದಿಂದ ಹೊಟ್ಟೆ ಪಾಡಿಗಾಗಿ ದುಡಿಯಲು ಗೋವಾಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಗೋವಾದಲ್ಲೇ ನೇಣಿಗೆ ಶರಣಾಗಿರೋ ಮನಕಲುಕುವ ಘಟನೆ ನಡೆದಿದೆ. ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದ್ದು ಇಡೀ ಗೋವಾ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಹೊಟ್ಟೆಪಾಡಿಗಾಗಿ ಹೋಗಿದ್ರು..! ಕಳೆದ ಹಲವು ವರ್ಷಗಳಿಂದೇ ಕೂಲಿ ಮಾಡಿ ಬದುಕುವ ಉದ್ದೇಶದಿಂದ ಗೋವಾದಲ್ಲೇ ಬದುಕು ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ ಅಂಬಿಗೇರ(28) ಹಾಗೂ 29 ವರ್ಷದ ಸಹೋದರ ಗಂಗಪ್ಪ ಅಂಬಿಗೇರ ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳು ನೇಣಿನ ನಿರ್ಧಾರ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಘಟನೆ ಏನು..? ಕಳೆದ 4-5 ದಿನಗಳಿಂದಷ್ಟೇ ಗೊವಾದ ಜುವಾರಿ ನಗರದ ಶಮಶುದ್ದಿನ್ ಎಂಬ ಮಾಲೀಕನ ಮನೆಯಲ್ಲೇ ದುರ್ದೈವಿಗಳು ವಾಸವಿದ್ದರು, ಮಾಲೀಕ ಶಮಶುದ್ದಿನ್ ನೇಣಿಗೆ ಶರಣಾದವರ ಮೇಲೆ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟ ಬಂಗಾರ ಹಾಗೂ ಹಣದ ಒಟ್ಟು ಮೊತ್ತ ಸುಮಾರು 15...
ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಶಿರಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಕೋರಿ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಮನವಿಯಲ್ಲೇನಿದೆ..? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51(1-18-0) ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ. ಕೇಳಿದ್ರೆ ಹಲ್ಲೆಗೆ ಬರ್ತಾರಂತೆ..! ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ತಹಶೀಲ್ದಾರರಿಂದಲೂ ಕ್ರಮವಿಲ್ಲ..! ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಾಹಶೀಲ್ದಾರರಿಗೆ...
ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಅಗಡಿ ಸಮೀಪದ ಶಾಂತಾ ದುರ್ಗಾ ರೈಸ್ ಮಿಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಶಿಗ್ಗಟ್ಟಿ ಗ್ರಾಮದ ಶೇಖಪ್ಪಾ ಲಮಾಣಿ ಗಾಯಗೊಂಡ ಬೈಕ್ ಸವಾರ ಅಂತಾ ತಿಳಿದು ಬಂದಿದೆ. ಬೈಕ್ ನ ಹಿಂದಿನ ಗಾಲಿ ಪಂಕ್ಚರ್ ಆಗಿದ್ದ ಕಾರಣಕ್ಕೆ ಸ್ಕಿಡ್ ಆಗಿ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಹೀಗಾಗಿ, ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ತರಿಸಿ ಗಾಯಗೊಂಡ ಬೈಕ್ ಸವಾರನನ್ನು ಕಲಘಟಗಿ ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಶಿಗ್ಗಾವಿ:ಐತಿಹಾಸಿಕ ನಾಗನೂರು ಕೆರೆಯ ಸುತ್ತಮುತ್ತ ಪುರಸಭೆ ಅಧ್ಯಕ್ಷರು, ಸದಸ್ಯರಿಂದ ಸ್ವಚ್ಚತಾ ಕಾರ್ಯ..!
ಶಿಗ್ಗಾವಿ : ಪಟ್ಟಣದ ಐತಿಹಾಸಿಕ ನಾಗನೂರ ಕೆರೆಯ ಸುತ್ತಮುತ್ತಲೂ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಕೈಗೊಂಡರು. ನಾಗನೂರ ಕೆರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಮಾತನಾಡಿದ ಪುರಸಭೆ ಅದ್ಯಕ್ಷ ಮತ್ತು ಉಪಾಧ್ಯಕ್ಷರು, ಕೆರೆಯ ದಂಡೆಯಲ್ಲಿ ಗಣೇಶನ ದೇವಸ್ಥಾನವಿದೆ ಈ ಪ್ರದೇಶವು ಪುರಸಭೆಯವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ ಅದನ್ನು ಮನಗಂಡು ತಾವು ಕೂಡ ಯಾರೇ ಕಲುಷಿತ ಮಾಡಿದರೂ ಸಹಿತ ನೋಡಿ ಸುಮ್ಮನೇ ಇರಬಾರದು ಅಂತ ವಿಷಯ ಇದ್ದರೆ ಪುರಸಭೆಯ ಸಹಾಯವಾಣಿಗೆ ತಿಳಿಸಿ ಮತ್ತು ಇಲ್ಲಿ ಹುಟ್ಟು ಹಬ್ಬ ಆಚರಿಸುವುದಾಗಲಿ, ಮದ್ಯಪಾನ ಮಾಡುವದಾಗಲಿ ಕಂಡು ಬಂದರೆ ಅವರು ಶಿಕ್ಷೆಗೆ ಗುರಿ ಮಾಡಲಾಗುವುದು ಎಂದರು. ಜೊತೆಗೆ ಪಟ್ಟಣದ ರಾಚನಕಟ್ಟೆ ಕೆರೆಗೆ ತಡೆಗೋಡೆ ಕಟ್ಟಿಸುವುದು ಅವಶ್ಯವಿದ್ದು ಪಟ್ಟಣದ ಜನರು ಕುಡಿಯಲು ಬಳಸುವ ಗಂಗಾಮಾತೆ ಇದಾಗಿದೆ ಎಂದರು. ಬೆಳಗ್ಗೆ 6 ಗಂಟೆಗೆ ಆಗಮಿಸಿ ಕೆರೆಯ ದಡದಲ್ಲಿ ಹಾಕಲಾಗಿರುವ ತ್ಯಾಜ್ಯ, ಬಿಯರ್ ಬಾಟಲ್...
ಕಬನೂರು ಗ್ರಾಪಂ ನಲ್ಲಿ ಏನಿದು ವಾಸನೆ..? ಸದಸ್ಯರೇ ಮಾಡಿರೋ ಆರೋಪಗಳು ಸತ್ಯವಾ..?
ಶಿಗ್ಗಾವಿ : ತಾಲೂಕಿನ ಕಬನೂರ ಪಂಚಾಯತಿಯ ನೂತನ ಅದ್ಯಕ್ಷರು ಮತ್ತು ಪಿಡಿಓ ಸೇರಿದಂತೆ ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ವಿರುದ್ದ ಪಂಚಾಯತಿಯ ಕೆಲ ಸದಸ್ಯರುಗಳು ಸಿಡಿದೆದ್ದಿದ್ದಾರೆ. ಯಾರವರು..? ಗ್ರಾಮ ಪಂಚಾಯತಿ ಸದಸ್ಯರಾದ ಕೋಟೆಪ್ಪ ಕಮ್ಮಾರ್, ಅನ್ನಪೂರ್ಣ ಓಲೇಕಾರ, ಹಲೀಮಾ ಕಾಳಂಗಿ ಅವರುಗಳು ತಮ್ಮದೇ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓರವರ ಮೇಲೆ ಆರೋಪ ಮಾಡ್ತಿದಾರೆ. ಹೌದು, ಶಿಗ್ಗಾವಿ ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಗೈದಿದಾರೆ. ಏನದು ಆರೋಪ..? 15 ನೇ ಹಣಕಾಸಿನ ಯೋಜನೆಯಲ್ಲಿ ಎಸ್,ಟಿ ಸಮುದಾಯದವರಿಗೆ ಅನ್ಯಾಯವಾಗಿದೆಯಂತೆ. ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡ್ತಿದಾರಂತ, ಸದಸ್ಯರ ಕಡೆಗಣನೆ ಮಾಡಿದ್ದಾರೆ ಅಂತಾ ಅರೋಪಿಸಿದ್ದಾರೆ. ಇನ್ನು, ಇನ್ನುಳಿದ ಸದಸ್ಯರ ಮಧ್ಯ ಸಾಮರಸ್ಯದ ಕೊರತೆ ಇದೆ, ಗ್ರಾಪಂ ಅಧ್ಯಕ್ಷರಿಂದ ಜಾತಿ ನಿಂದನೆ ಮಾತುಗಳು ಕೇಳ್ತಿವೆ. ಗ್ರಾಮ ಪಂಚಾಯತಿಯಲ್ಲಿ ಖರ್ಚಿನ ಲೆಕ್ಕ ಕೇಳಿದರೆ ಜಗಳಕ್ಕೆ ಅಧಿಕಾರಿಗಳು ಜಗಳಕ್ಕೇ ಬರ್ತಾರಂತೆ, 6 ಸದಸ್ಯರು ಸೇರಿ ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ, ಇದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ಭಾರಿ...
ಹೇಗಿದೆ ಗೊತ್ತಾ ಸರ್ಪ ಸಲ್ಲಾಪ..? ಇದು ನಾಗಲೋಕದ ಅಚ್ಚರಿ..!!
ಇದು ನಾಗಲೋಕದ ಅಚ್ಚರಿ..! ಸರ್ಪ ಸಲ್ಲಾಪದ ಅಪರೂಪದ ಕ್ಷಣಗಳು.. ಅಲ್ಲಿ ಯಾರ ಹಂಗೂ ಇಲ್ಲ..ಯಾವ ಭಯಗಳೂ ಸುಳಿಯೋಕೆ ಛಾನ್ಸೇ ಇಲ್ಲ.. ಯಾಕಂದ್ರೆ ಅದು ಆ ಎರಡು ನಾಗಗಳ ಏಕಾಂತ ಸಮಯ.. ಅಕ್ಷರಶಃ ರಸಮಯ ಗಳಿಗೆಗಳು.. ಯಸ್, ನಿಡಗುಂದಿ ತಾಲೂಕಿನ ನಿಡಗುಂದಿ ಪುನರ್ವಸತಿ ಕೇಂದ್ರದ ಬಳಿ ಎರಡು ಸರ್ಪಗಳು ಸಮ್ಮಿಲನಗೊಂಡಿದ್ದವು. ಇಲ್ಲಿನ ಕಾಲುವೆ ಬಳಿ ಇಂದು ಸಾಯಂಕಾಲ 3ರಿಂದ 4 ಗಂಟೆಯ ವರೆಗೆ ಅಂದ್ರೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಹಾವುಗಳು ಹೀಗೆ ಸಮ್ಮಿಲನಗೊಂಡಿದ್ದವು. ಸರ್ಪಗಳ ಮಿಲನ ಮಹೋತ್ಸವವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಪರೂಪದ ಈ ದೃಶ್ಯಗಳು ನೋಡುಗರಿಗೆ ರೋಮಾಂಚಕಗೊಳಿಸಿವೆ.
ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಜನ ಕಂಗಾಲಾಗಿದ್ದಾರೆ. ನಿತ್ಯವೂ ಇಲ್ಲಿನ ಜನ್ರು ಕತ್ತಲೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮನೆಯಲ್ಲೇ ಕುಳಿತು ಆನ್ ಲೈನ್ ಕ್ಲಾಸ್ ಗಾಗಿ ಕಾಯ್ತಿರೊ ಮಕ್ಕಳ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಕರೇಂಟೇ ಇರಲ್ಲ. ಕಣ್ಣಾ ಮುಚ್ಚಾಲೆ..! ನಿಜ, ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೇನು ಸಮಸ್ಯೆಯೋ ಗೊತ್ತಿಲ್ಲ. ಇಲ್ಲಿ ವಿದ್ಯುತ್ ಬಹುತೇಕ ಇರೋದೇ ಇಲ್ಲ. ಐದು ನಿಮಿಷ ಬಂದ್ರೆ, ಮತ್ತೆ ಒಂದು ಗಂಟೆ ಕರೇಂಟು ಕೈ ಕೊಡುತ್ತದೆ. ಪ್ರತೀ ಕ್ಷಣವೂ ಕಣ್ಣಾಮುಚ್ಚಾಲೆ ಆಟ ಅಡತ್ತೆ ಇಲ್ಲಿನ ಕರೆಂಟು.. ವಿದ್ಯಾರ್ಥಿಗಳ ಪರದಾಟ.. ಗ್ರಾಮದಲ್ಲಿ ಕರೆಂಟು ಕಣ್ಣಾ ಮುಚ್ಚಾಲೆಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಿರಿಕಿರಿ ಶುರುವಾಗಿದೆ. ಯಾಕಂದ್ರೆ ಈಗ ಕೊರೋನಾ ಸಂಕಷ್ಟದ ಮದ್ಯೆ ಶಾಲೆಗೆ ಹೋಗಲಾಗದೆ ಮನೆಯಲ್ಲೇ ಕುಳಿತು, ಆನ ಲೈನ್ ಪಾಠ ಕೇಳುತ್ತಿರೋ ಮಕ್ಕಳಿಗೆ ಕರೆಂಟು ಕಣ್ಣಾಮುಚ್ಚಾಲೆ ಇನ್ನಿಲ್ಲದ ಕಿರಿಕಿರಿ ತಂದಿದೆ. ಇನ್ಮೇಲೆ ದೂರದರ್ಶನದ ಮೂಲಕವೂ ಮಕ್ಕಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆ ಜಾತಿಯಾಗುತ್ತಿದೆ. ಹೀಗಾಗಿ, ವಿದ್ಯುತ್ ಇಲ್ಲದೇ...