ಮುಂಡಗೋಡ: ಪಟ್ಟಣದ ಅಯ್ಯಪ್ಪ ದೇವಸ್ಥಾನದ ಹತ್ತಿರ ನ್ಯಾಸರ್ಗಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಭಯದಲ್ಲೇ ಓಡಾಡುವ ಪರಿಸ್ಥಿತಿ ಇದೆ‌. ಯಾಕಂದ್ರೆ, ಇಲ್ಲಿ ಅದ್ಯಾರೋ ಮತಿಹೀನ ಆಸ್ಪತ್ರೆಯವರು ತಮ್ಮ ಆಸ್ಪತ್ರೆಯ ತ್ಯಾಜ್ಯಗಳನ್ನು ತಂದು ಎಲ್ಲೆಂದರಲ್ಲಿ ಬಿಸಾಡಿ ಹೋಗ್ತಿದಾರೆ.

ಹೊಟ್ಟೆಗೇನು ಸೆಗಣಿ ತಿಂತಾರಾ..?
ಹಾಗಂತ, ಇಲ್ಲಿನ ರಸ್ತೆಯಲ್ಲಿ ತಿರುಗಾಡೋ ನ್ಯಾಸರ್ಗಿಯ ಜನ ಆಕ್ರೋಶ ವ್ಯಕ್ತ ಪಡಿಸ್ತಿದಾರೆ. ಯಾಕಂದ್ರೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಸಿರೀಂಜ್, ಸೂಜಿಗಳು ಸೇರಿದಂತೆ ಔಷಧಿಯ ಖಾಲಿ ಬಾಟಲ್ ಗಳನ್ನು ಇಲ್ಲಿ ತಂದು ಎಸೆದು ಹೋಗಲಾಗ್ತಿದೆ. ಹಾಗಿದ್ದಾಗ, ಅದ್ಯಾವ ವೈದ್ಯ ಮಹಾಶಯ ಹೀಗೆ ಅನಾಗರೀಕನ ಹಾಗೆ ನಡೆದುಕೊಳ್ತಿದಾನೆ..? ಅವನೇನು ಹೊಟ್ಟೆಗೆ ಸೆಗಣಿ ತಿಂತಾನಾ ಅಂತಾ ನಾಗರೀಕರು ಪ್ರಶ್ನಿಸುತ್ತಿದ್ದಾರೆ.

ಓಡಾಡಲೂ ಭಯ..!
ನಿಜ, ಹಾಗೆ ಎಸೆದು ಹೋಗಿರೋ ಆಸ್ಪತ್ರೆಯ ತ್ಯಾಜ್ಯಗಳಲ್ಲಿ ಅದ್ಯಾವ ರೋಗಿಯ ರೋಗಗಳು ಅಡಗಿವೆಯೋ..? ಅದ್ಯಾವ ಸಾಂಕ್ರಾಮಿಕ ರೋಗವು ಅಡಗಿ ಕುಳಿತಿವೆಯೋ..? ಅದ್ಯಾರ ಕಾಲಿಗೆ ಚುಚ್ಚಿ ಇನ್ನೇನು ಅನಾಹುತ ಸಂಭವಿಸತ್ತೋ ಅನ್ನೋ ಆತಂಕ ಇಲ್ಲಿ ಓಡಾಡುವ ಜನ್ರಿಗೆ ಶುರುವಾಗಿದೆ. ಅಂತಹ ತ್ಯಾಜ್ಯಗಳನ್ನು ತಂದು ಇಲ್ಲಿ ಸುರುವುತ್ತಿದ್ದಾರೆ ಅಂದ್ರೆ ಅವ್ರಿಗೆ ಯಾರ ಭಯವೂ ಇಲ್ವಾ..?

ಅಷ್ಟಕ್ಕೂ ಪಪಂ ಅಧಿಕಾರಿಗಳು ಎಲ್ಲಿದ್ದಾರೆ..?
ಇಷ್ಟೇಲ್ಲ, ನಿತ್ಯವೂ ಇಲ್ಲಿ ಎಲ್ಲೆಂದರಲ್ಲಿ ಆಸ್ಪತ್ರೆಯ ತ್ಯಾಜ್ಯ ಹಾಡಹಗಲೇ ಎಸೆದು ಹೋಗುತ್ತಿದ್ದರೂ ಇಲ್ಲಿನ ಪಟ್ಟಣ ಪಂಚಾಯತಿಗೆ ಇದೇಲ್ಲ ಕಾಣೋದೇ ಇಲ್ವಾ..? ಅಥವಾ ಇದೇಲ್ಲ ನಮಗಾದ್ರೂ ಯಾಕೆ ಬೇಕು ಬಿಡಿ ಅನ್ನೋ ಬೇಜವಾಬ್ದಾರಿನಾ..? ಅಥವಾ ಅಂತಹ ಆಸ್ಪತ್ರೆಗಳ ತಂಟೆಗೆ ಹೋಗೋದು ಯಾಕೆ ಅನ್ನೋ ಭಯಾನಾ..? ಯಾರಿಗೂ ಅರ್ಥವಾಗ್ತಿಲ್ಲ.

ಇನ್ನು, ಪಟ್ಟಣದ ಬಹುತೇಕ ಜನ ಇದೇ ರಸ್ತೆಯಲ್ಲಿ ಬೆಳಿಗ್ಗೆ ವಾಕಿಂಗ್ ಹೋಗ್ತಾರೆ. ಅಲ್ದೇ ಇದೆ ಏರಿಯಾದಲ್ಲಿ ಅಯ್ಯಪ್ಪ ಸ್ವಾಮಿಯ ಭವ್ಯ ದೇವಾಲಯವಿದೆ. ಹೀಗಾಗಿ ನಿತ್ಯವೂ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರ ಓಡಾಟ ಇದ್ದೇ ಇರತ್ತೆ. ಹೀಗಿದ್ದಾಗಲೂ “ಯಮದೂತ” ಡಾಕ್ಟರುಗಳಿಗೆ ಮಾನ ಮರ್ಯಾದೆ ಇಲ್ವಾ..? ಇಂತಹ ಅನಾಗರೀಕ ವರ್ತನೆ ಅದೇಷ್ಟು ಸರಿ..? ಈ ಎಲ್ಲ ಪ್ರಶ್ನೆಗಳನ್ನು ಕೇಳ್ತಿದಾರೆ ಜನ.

ಸಾಂಕ್ರಾಮಿಕ ಭಯ..!
ಮೊದಲೇ, ಮುಂಡಗೋಡಿನ ಮಂದಿ ಈಗಾಗಲೇ ಕೊರೋನಾ ಎರಡನೇ ಅಲೆಯಲ್ಲಿ ನಲುಗಿ ಹೋಗಿದ್ದಾರೆ. ಇನ್ನೇನು ಮೂರನೇ ಅಲೆ ಬರುವ ಎಲ್ಲಾ ಲಕ್ಷಣಗಳೂ ಎದೆ ನಡುಗಿಸುತ್ತಿದೆ. ಈ ಕಾರಣಕ್ಕಾಗೇ ದೇಶಾದ್ಯಂತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಬಹುಮುಖ್ಯವಾಗಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗ್ತಿದೆ. ಹೀಗಿದ್ದಾಗ, ಅಂತಹ ಪಾಠ ಹೇಳಬೇಕಾಗಿರೋ ವೈದ್ಯರುಗಳೇ ಹೀಗೆ ಅನಾಗರೀಕರಂತೆ ನಡೆದುಕೊಂಡ್ರೆ ಹೇಗೆ..?

ಕಠಿಣ ಕ್ರಮ ಕೈಗೊಳ್ಳಿ..!
ಅದ್ಯಾರೇ ಡಾಕ್ಟರ್ ಆಗಿರಲಿ, ಅದ್ಯಾರೇ ಆಸ್ಪತ್ರೆಯವರಾಗಿರಲಿ, ಹೀಗೆ ಅನಾಗರೀಕತೆ ತೋರಿಸಿ ತಮ್ಮ ಆಸ್ಪತ್ರೆಯ ತ್ಯಾಜ್ಯಗಳನ್ನು ಎಸೆದು ಹೋಗೋ ಯಮದೂತರುಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ. ಅದೇಲ್ಲದಕ್ಕೂ ಮೊದಲು, ಹಾಗೆ ಎಸೆದು ಹೋಗಿರೋ ತ್ಯಾಜ್ಯಗಳನ್ನು ತಕ್ಷಣವೇ ತೆರವುಗೊಳಿಸಬೇಕಿದೆ. ಅಂದಾಗ ಮಾತ್ರ ಇಲ್ಲಿನ ಜನ ನಿರಾತಂಕದಲ್ಲಿ ಓಡಾಡಲು ಸಾಧ್ಯ.

ಅಯ್ಯಪ್ಪ ಬಜಂತ್ರಿ ಆಕ್ರೋಶ..!
ಇದನ್ನೇಲ್ಲ ಕಣ್ಣಾರೆ ಕಂಡಿರೋ ನ್ಯಾಸರ್ಗಿಯ ಯುವಕ, ಸಾಮಾಜಿಕ ಹೋರಾಟಗಾರ ಅಯ್ಯಪ್ಪ ಬಜಂತ್ರಿ ಡಾಕ್ಟರುಗಳ ಅನಾಗರೀಕ ವರ್ತನೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣವೇ ಇಂತಹ ಅವ್ಯವಸ್ಥೆ ಸರಿ ಮಾಡುವಂತೆ ಆಗ್ರಹಿಸಿದ್ದಾರೆ.

error: Content is protected !!