ರಸ್ತೆಯ ಅವ್ಯವಸ್ಥೆ ಕಣ್ಣಾರೆ ಕಂಡ PWD ಇಂಜಿನೀಯರ್..! ಫಿಲ್ಡಿಗೆ ಇಳಿದೇ ಬಿಟ್ರು ಸಾಹೇಬ್ರು..!!

ಮುಂಡಗೋಡ; ತಾಲೂಕಿನ ವಡಗಟ್ಟಾ ಅಗಡಿ ರಸ್ತೆ, ಹುನಗುಂದದ ದೇಶಪಾಂಡೆ ನಗರದಲ್ಲಿ ನಡೆದಾಡಲೂ ಆಗದ ಸ್ಥಿತಿಯಲ್ಲಿದೆ, PWD ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ವಹಿಸ್ತಿದ್ದಾರೆ ಅನ್ನೋ ಸುದ್ದಿ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಕಟಿಸುತ್ತಿದ್ದಂತೆ PWD ಇಂಜಿನೀಯರ
ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಬೆಳಿಗ್ಗೆ ರಸ್ತೆಯ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯ ಕುರಿತು ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿ ಪ್ರಸಾರವಾದ ಅರ್ಧ ಗಂಟೆಯಲ್ಲೇ ಅಧಿಕಾರಿಗಳು ಬೇಟಿ ನೀಡಿ, ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ.

ಇನ್ನು PWD ಇಂಜಿನೀಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ಈ ವೇಳೆಯೇ ಹಲವು ಬೈಕ್ ಸವಾರರು ಕೆಸರಲ್ಲಿ ಸಿಲುಕಿ ಪರದಾಡುವ ದೃಷ್ಯ ಇಂಜಿನೀಯರ್ ನಾಗರಾಜ ಭಟ್ ಕಣ್ಣಾರೆ ಕಂಡರು. ಹೀಗಾಗಿ, ಕೆಸರನ್ನು ತೆರವುಗೊಳಿಸಿ ಖಡಿ ಹಾಕುವ ಕಾರ್ಯ ಮಾಡಲು ಅಣಿಯಾಗಿದ್ದಾರೆ.

error: Content is protected !!