ಮುಂಡಗೋಡ: ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆ ಕಾವು ಮತ್ತೆ ಏರ ತೊಡಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತುದಿಗಾಲಲ್ಲಿ ನಿಂತಿದೆ ಅನ್ನೋ ಸಂಗತಿ ಹೊರಬೀಳುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮತ್ತೆ ಒಳಗೊಳಗೆ ಚುನಾವಣೆಯ ಪೀಕಲಾಟಗಳು ಶುರುವಾಗಿವೆ. ಅದರ ಭಾಗವಾಗಿ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬಾಚಣಕಿ ತಾಪಂ ಕ್ಷೇತ್ರದಲ್ಲಿ ಟಿಕೆಟ್ ಹಂಬಲಗಳು ಎರಡೂ ಕ್ಷೇತ್ರದಲ್ಲಿ ಚಾಲ್ತಿ ಪಡೆದುಕೊಂಡಿವೆ.
ಕಾಂಗ್ರೆಸ್ ಗೆ ಮೊನ್ಸಿ..!
ಬಾಚಣಕಿ ತಾಪಂ ಕ್ಷೇತ್ರ ಬಾಚಣಕಿ, ನ್ಯಾಸರ್ಗಿ, ಅರಷಿಣಗೇರಿ, ಮಜ್ಜಿಗೇರಿ ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಈಗಾಗಲೇ ಸಾಮಾನ್ಯ ಮೀಸಲಾತಿ ಘೋಷಣೆಯಾಗಿದೆ. ಹೀಗಾಗಿ, ಕಾಂಗ್ರೆಸ್ ನಲ್ಲಿ ಒಂದಿಷ್ಟು ರೋಚಕ ಅನ್ನುವಷ್ಟು ಟಿಕೆಟ್ ಸೆಣಸಾಟಗಳು ಶುರುವಾಗಿವೆ. ಅರಷಿಣಗೇರಿಯ ಮೊನ್ಸಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಸರತ್ತು ಶುರುವಿಟ್ಟಿದ್ದಾರೆ.
ಯಾರು ಈ ಮೊನ್ಸಿ..?
ಇದು 10 ವರ್ಷಗಳ ಹಿಂದಿನ ಮಾತು, ಇಂದೂರು ಜಿಲ್ಲಾವಪಂಚಾಯತಿ ಕ್ಷೇತ್ರದಲ್ಲಿ ಜನತಾ ಪರಿವಾರದ ಒಂದಿಷ್ಟು ಗಟ್ಟಿ ನಾಯಕರು ಇದ್ದರು. ಹುನಗುಂದದ ಆರ್.ಸಿ.ಅಂಗಡಿ, ಇಂದೂರಿನ ಎಸ್.ಎನ್. ಗೋಖಲೆ ಸೇರಿದಂತೆ ಕೆಲವೇ ಕೆಲವು ನಾಯಕರುಗಳ ಪೈಕಿ ಅರಷಿಣಗೇರಿಯ ಕೆ.ಜಿ.ಥಾಮಸ್ ಕೂಡ ಒಬ್ರು. ಆ ಹೊತ್ತಲ್ಲೇ 3 ಬಾರಿ ಸತತವಾಗಿ ಗ್ರಾಮ ಪಂಚಾಯತ ಚುನಾವಣೆಲಿ ಗೆದ್ದು ಗ್ರಾಪಂ ಸದಸ್ಯನಾಗಿ, ಹಾಗೇ 2006 ರ ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ತಾಪಂ ಅಧ್ಯಕ್ಷರಾಗಿದ್ದವರು ಕೆ.ಜಿ.ಥಾಮಸ್. ಅದೇ ವೇಳೆ ಅದ್ಯಾವುದೋ ಕಾರಣಕ್ಕೆ ಕೆ.ಜಿ.ಥಾಮಸ್ ಕೊಲೆಯಾಗಿದ್ದರು. ಆ ನಂತರದಲ್ಲಿ ಅವ್ರ ಕುಟುಂಬ ಇದುವರೆಗೂ ರಾಜಕೀಯದಿಂದ ಒಂದಿಷ್ಟು ಅಂತರ ಕಾಯ್ದುಕೊಂಡಿದ್ದರು. ಆದ್ರೆ ಕಾಂಗ್ರೆಸ್ ನಲ್ಲೇ ಮುಂದುವರೆದಿದ್ದರು.
ಈಗ ಥಾಮಸ್ ಪುತ್ರನ ಎಂಟ್ರಿ..!
ಯಸ್, ಈಗ ಮತ್ತದೇ ಕೆ.ಜಿ.ಥಾಮಸ್ ಪುತ್ರ ಮೊನ್ಸಿ ಥಾಮಸ್ ತಾಲೂಕಾ ಪಂಚಾಯತಿ ಚುನಾವಣೆ ಮೂಲಕ ಗ್ರ್ಯಾಂಡ್ ಎಂಟ್ರಿಯಾಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಬಾಚಣಕಿ ತಾಲೂಕಾ ಪಂಚಾಯತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ರೆಡಿಯಾಗಿದ್ದಾರೆ. ಈ ಸಂಬಂಧ ಖುದ್ದು ಆರ್.ವಿ.ದೇಶಪಾಂಡೆ ಯವರನ್ನು ಸಂಪರ್ಕಿಸಿ ಈಗಾಗಲೇ ಅಂತಹದ್ದೊಂದು ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಅದ್ಭುತ ಕ್ರೀಡಾ ಪಟು..!
ಮುಂಡಗೋಡ ತಾಲೂಕಿನ ಕಬಡ್ಡಿ ಕ್ರೀಡಾಭಿಮಾನಿಗಳಿಗೆ ಮೊನ್ಸಿ ಅಂದ್ರೆ ಚಿರಪರಿಚಿತ ವ್ಯಕ್ತಿ. ಯಾಕಂದ್ರೆ ಈಗಾಗಲೇ ತಾಲೂಕಿನಲ್ಲಿ ಅದ್ಭುತ ಕಬಡ್ಡಿ ಆಟಗಾರನಾಗಿ ಹೊರಹೊಮ್ಮಿದ್ದ ಇವ್ರು, ಹಲವು ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅಲ್ದೇ ತಮ್ಮ ಸ್ವಂತ ಖರ್ಚಿನಲ್ಲೇ ಕ್ರೀಡಾಪಟುಗಳಿಗೆ ಕಬಡ್ಡಿ ತರಬೇತಿ ನೀಡಿ ಯುವಕರ ಮನಗೆದ್ದಿದ್ದಾರೆ. ಹೀಗಾಗಿ, ಇದೇಲ್ಲ ಇವ್ರಿಗೆ ಪ್ಲಸ್ ಆಗತ್ತಾ..? ಅನ್ನೋ ಚರ್ಚೆಗಳು ಶುರುವಾಗಿವೆ.
ಯುವ ಪಡೆಯಿದೆ..
ಇನ್ನು, ಮೊನ್ಸಿ ಇದುವರೆಗೂ ರಾಜಕೀಯದಲ್ಲಿ ದೊಡ್ಡ ಮಟ್ಟಿಗೆ ಗುರುತಿಸಿಕೊಂಡಿದ್ದು ಕಡಿಮೆ. ಆದ್ರೆ ತಳಮಟ್ಟದಲ್ಲಿ ಕಾಂಗ್ರೆಸ್ ಬಲಪಡಿಸುವಲ್ಲಿ ಮೊನ್ಸಿ ಶ್ರಮಿಸಿದ್ದಾರೆ. ಈ ಕಾರಣಕ್ಕಾಗಿನೇ ಒಂದಿಷ್ಟು ಬಲಿಷ್ಟವಾದ ಯುವ ಪಡೆ ಇವ್ರ ಬೆನ್ನಿಗಿದೆ. ಅಲ್ದೇ, ತಾಲೂಕು ಮಟ್ಟದ ಕಾಂಗ್ರೆಸ್ ನಾಯಕರುಗಳೂ ಮೊನ್ಸಿ ಕುರಿತು ಒಂದಿಷ್ಟು ಸಕಾರಾತ್ಮಕ ಭಾವನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಬಾರಿ ಬಾಚಣಕಿ ತಾಪಂ ಕ್ಷೇತ್ರದಲ್ಲಿ ಮೊನ್ಸಿ “ಕೈ” ಬಲವಾಗೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರ್ತಿವೆ.