ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಮುಂಡಗೋಡ; ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದ ರೈತರ ಮನಸಲ್ಲಿ ಭಗೀರಥರ ಸ್ಥಾನ ಪಡೆದಿದ್ದಾರೆ ಅಂತಾ ಹಿರಿಯ ಪತ್ರಕರ್ತ, ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಚಿವ ಹೆಬ್ಬಾರ್ ರವರನ್ನು ಹಾಡಿಹೊಗಳಿದ್ರು. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಸೆಲ್ಕೋ) ಸಂಸ್ಥೆಗಳು ನೀಡಿದ ಡಯಾಲಿಸಿಸ್ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಚಿವರ ಪ್ರಯತ್ನದಿಂದ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಇನ್ನು, ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸಂಸ್ಥೆಯ ಮೂಲಕವಾಗಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಡಯಾಲಿಸಿಸ್ ವಾರ್ಡ್ ಅನ್ನು ನಿರ್ಮಾಣ ಮಾಡಿದ್ದು ಶ್ಲಾಘನೀಯ ಅಂತಾ ಮೆಚ್ಚುಗೆ ವ್ಯಕ್ತ ಪಡಿಸಿದ ಅವ್ರು, ಸಚಿವರ ಜನಪರ ನಿಲುವುಗಳನ್ನು ಕೊಂಡಾಡಿದರು. **************************** ಜಾಹೀರಾತು

ಸೈಕ್ಲಿಂಗ್ ಮಾಡುವಾಗಲೇ ಸಾವನ್ನಪ್ಪಿದ ಸೈಕ್ಲಿಸ್ಟ್..!

ಸೈಕ್ಲಿಂಗ್ ಮಾಡುವಾಗಲೇ ಸಾವನ್ನಪ್ಪಿದ ಸೈಕ್ಲಿಸ್ಟ್..!

ಹುಬ್ಬಳ್ಳಿಯ ಸೈಕ್ಲಿಸ್ಟ್ ಒಬ್ಬರು ಸೈಕ್ಲಿಂಗ್ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿಗ್ಗಾಂವ ಸಮೀಪ ನಡೆದಿದೆ. ಬಸವಗೌಡ ಶಂಕರಗೌಡ ಶಿವಳ್ಳಿ (35) ಮೃತರಾಗಿದ್ದು, ಬಿವ್ಹಿಬಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಅಲ್ಲದೇ ಹಲವಾರು ವರ್ಷಗಳಿಂದ ಸೈಕ್ಲಿಸ್ಟ್ ಆಗಿದ್ದು, ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಇಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶಿಗ್ಗಾಂವ ಬಳಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ******************* ಜಾಹೀರಾತು

ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?

ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ “ಕೈ” ಬಲಗೊಳ್ಳುತ್ತಿದೆ. ಮುಂಬರೋ ವಿಧಾನಸಭಾ ಚುನಾವಣೆ ಹೊತ್ತಿಗೆ ತನ್ನ ತೋಳ್ಬಲ ತೋರಿಸಲು ಏನೇನು ಬೇಕೋ ಅದನ್ನೇಲ್ಲ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ ದೇಶಪಾಂಡೆ ಪಡೆ. ಹೀಗಾಗಿನೇ, ಈಗಿಂದಲೇ ಅಂತಹದ್ದೊಂದು ರಣತಂತ್ರ ರೂಪಿಸಿ, ಕಾರ್ಯಕರ್ತರನ್ನು ಉತ್ತೇಜಿಸೋ ಕೆಲಸದಲ್ಲಿ ನಿರತವಾಗಿದೆ ಅದೋಂದು ಟೀಂ.. ಯುವಕರೇ ಟಾರ್ಗೆಟ್..! ಯಾವಾಗ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಲಿ ಪ್ರಶಾಂತ್ ದೇಶಪಾಂಡೆಯವರೇ ಕಣಕ್ಕಿಳಿಯೋದು ಅಂತಾ ಘೋಷಣೆಯ ಹಂತಕ್ಕೆ ಬಂತೋ, ಅವತ್ತಿನಿಂದಲೇ, ಕ್ಷೇತ್ರದಲ್ಲಿ ಗಟ್ಟಿಗೊಳ್ಳಲು ಬೇಕಾದ ಒಂದಿಷ್ಟು ತಯಾರಿ ಶುರುವಿಟ್ಟುಕೊಂಡಿದ್ದಾರೆ ದೊಡ್ಡ ಸಾಹೇಬ್ರು. ಅದ್ರ ಭಾಗವಾಗಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಡಸಾಲೆಯ ಅತೃಪ್ತ ಆತ್ಮಗಳ ತಲಾಶ್ ಮಾಡಿಸಿ, ಅಂತವರ ಒಂದು ಲಿಸ್ಟ್ ತರಿಸಿಕೊಂಡಿದ್ದಾರೆ. ಅವ್ರನ್ನೇಲ್ಲ ಹೇಗೆ ಪಕ್ಷಕ್ಕೆ ಎಳೆದು ತರೋದು ಅನ್ನೋ ಪಕ್ಕಾ ಪ್ಲಾನ್ ನೊಂದಿಗೇ ಫಿಲ್ಡಿಗಿಳಿದಿದೆ ಕೈ ಪಡೆ. ಈ ಕಾರಣಕ್ಕಾಗಿನೇ ಕಳೆದ ವಾರ ಮುಂಡಗೋಡ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಪ್ರಶಾಂತ್ ದೇಶಪಾಂಡೆ, ಅದ್ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ರೂ ಅಂತವರಿಗೆ ಮುಕ್ತ ಸ್ವಾಗತ ಅಂತಾ...

ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?

ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?

ಮುಂಡಗೋಡ:ತಾಲೂಕಿನ ಇಂದೂರು ಸಂತೆಯಲ್ಲಿ ವ್ಯಾಪಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ಕರ ವಸೂಲಿ ಹೆಸ್ರಲ್ಲಿ ಇಲ್ಲಿ ದಂಧೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಟೆಂಡರ್ ಅವದಿ ಮುಗಿದು ತಿಂಗಳುಗಳೇ ಕಳೆದ್ರೂ ಇಲ್ಲಿ ವ್ಯಾಪಾರಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗ್ತಿದೆ. ಆದ್ರೆ ಇದನ್ನೇಲ್ಲ ನಿಭಾಯಿಸಬೇಕಿದ್ದ ಪಿಡಿಓ ಮಾತ್ರ ಅದೇನು ಮಾಡ್ತಿದಾರೋ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದದ್ದೇ ರೇಟು..! ಇಂದೂರು ಸಂತೆಯಲ್ಲಿ ಸುತ್ತ ಮುತ್ತಲ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬರ್ತಾರೆ. ಅಲ್ಲದೇ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ. ಆದ್ರೆ, ಹಾಗೆ ಬರೋ ವ್ಯಾಪಾರಸ್ಥರಿಗೆ ಇಲ್ಲಿನ ಗ್ರಾಮ ಪಂಚಾಯತಿ ಜಾಗೆಯ ಕರ ಅಂತಾ 20 ರೂ‌. ಗಳನ್ನು ವಸೂಲಿ ಮಾಡತ್ತೆ. ಹಾಗೆ ವಸೂಲಿ ಮಾಡೋಕೆ ಟೆಂಡರ್ ನೀಡಿರಲಾಗತ್ತೆ. ಆದ್ರೆ, ಸದ್ಯ ಹಾಗೆ ನೀಡಿರೋ ಟೆಂಡರ್ ಅವಧಿಯೂ ಮುಗಿದಿದೆ. ಆದ್ರೆ, ಹಾಗೆ ಟೆಂಡರ್ ಪಡೆದ ಮಹಾನುಭಾವ ಇಂದೂರು ಸಂತೆಯಲ್ಲೇ ಬೇಕಾಬಿಟ್ಟಿ ಹಣ ವಸೂಲಿ ಮಾಡ್ತಿದಾನೆ. ಹಾಗಂತ ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ....

ಮುಂಡಗೋಡ ಪಿಐ ಪ್ರಭುಗೌಡರಿಗೆ ಕುಂದರ್ಗಿ ಯುವಕರಿಂದ ಸನ್ಮಾನ..!

ಮುಂಡಗೋಡ ಪಿಐ ಪ್ರಭುಗೌಡರಿಗೆ ಕುಂದರ್ಗಿ ಯುವಕರಿಂದ ಸನ್ಮಾನ..!

ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸಿ ಇದೀಗ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಆಗ್ತಿರೊ ಪ್ರಭುಗೌಡ ಕಿರೆದಳ್ಳಿಯವರಿಗೆ ಕುಂದರ್ಗಿಯ ಯುವಕರು ಸನ್ಮಾನಿಸಿದ್ರು. ಕುಂದರ್ಗಿ ಗ್ರಾಮದ ಓಂಕಾರ ಯುವಕ‌ ಮಂಡಳದ ಯುವಕರು ಹಾಗೂ ಗ್ರಾಮಸ್ಥರು ಪ್ರಭುಗೌಡರವರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಕುಂದರ್ಗಿ ಗ್ರಾಮದ ಹಲವರು ಭಾಗಿಯಾಗಿದ್ರು.

ಮುಂಡಗೋಡಿನಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು; ಪಪಂ ಬೇಜವಾಬ್ದಾರಿ ಕೇಳೋರ್ಯಾರು..?

ಮುಂಡಗೋಡಿನಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು; ಪಪಂ ಬೇಜವಾಬ್ದಾರಿ ಕೇಳೋರ್ಯಾರು..?

ಮುಂಡಗೋಡ: ಪಟ್ಟಣದಲ್ಲಿ ಈಗ ಎಲ್ಲೆಂದರಲ್ಲಿ ಬಿಡಾಡಿ ದನಗಳ ಕಾರುಬಾರು ಜೋರಾಗಿದೆ‌. ಪಟ್ಟಣ ಪಂಚಾಯತಿಯವರ ನಿರ್ಲಕ್ಷದಿಂದ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಹಾಗೂ ಪಟ್ಟಣದ ಹಲವು ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ರಸ್ತೆಯಲ್ಲೇ ಗುಂಪು ಗುಂಪಾಗಿ ಠಿಕಾಣಿ ಹೂಡುತ್ತವೆ. ರಸ್ತೆಯ ನಡುವೆಯೇ ಹಿಂಡು ಹಿಂಡಾಗಿ‌ ಮಲಗಿರುತ್ತವೆ. ಹೀಗಾಗಿ, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಾರಿ ಅದೇಷ್ಟೋ ಜನ ಸವಾರರು ಬಿಡಾಡಿ ದನಗಳ ಕಾಟದಿಂದ ಬಿದ್ದು ಗಾಯಗೊಂಡಿದ್ದಾರೆ. ಹಾಗೆನೇ, ದನಗಳಿಗೂ ಗಾಯಗಳಾಗಿವೆ. ರಾತ್ರಿ ವೇಳೆ ಅಪಘಾತ..! ಇನ್ನು, ಹಗಲು ಅದೇಷ್ಟು ಸಮಸ್ಯೆಯೋ ಅದಕ್ಕಿಂತ ಹೆಚ್ಚು ಸಮಸ್ಯೆಯಾಗ್ತಿರೋದು ರಾತ್ರಿ ಹೊತ್ತಲ್ಲಿ. ಯಾಕಂದ್ರೆ, ಎಲ್ಲೆಂದರಲ್ಲಿ ರಸ್ತೆಯ ನಡುವೆಯೇ ಮಲಗುವ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ರಾತ್ರಿ ವೇಳೆ ಹಾಗೆ ಮಲಗುವ ದನಗಳು ಕಾಣದೇ ಅದೇಷ್ಟೋ ಅಪಘಾತಗಳು ಸಂಭವಿಸಿವೆ. ಅದ್ರಲ್ಲಿ, ಸವಾರರಿಗೂ ಗಾಯವಾದ್ರೆ, ಕೆಲವು ಸಾರಿ ಇಂತಹ ಅಪಘಾತಗಳಲ್ಲಿ ದನಗಳೂ...

ಶಿರಸಿ ಜಿಪಂ ಕಚೇರಿಯಲ್ಲಿ ಎಸಿಬಿ ದಾಳಿ: ಇಬ್ಬರು ಬ್ರಷ್ಟರು ಬಲೆಗೆ..!

ಶಿರಸಿ ಜಿಪಂ ಕಚೇರಿಯಲ್ಲಿ ಎಸಿಬಿ ದಾಳಿ: ಇಬ್ಬರು ಬ್ರಷ್ಟರು ಬಲೆಗೆ..!

ಶಿರಸಿ: ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರಸಿ ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದಿದೆ. ಶಿರಸಿ ಜಿಲ್ಲಾ ಪಂಚಾಯತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ್ಯ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಗುತ್ತಿಗೆದಾರನಿಗೆ 4 ಲಕ್ಷ ರೂ.ಗಳ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆದಿದೆ. ಘಟನೆಯಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರ ಕೈವಾಡ ಇರಬಹುದು ಎಂಬ ಶಂಕೆಯನ್ನು ಎಸಿಬಿ ವ್ಯಕ್ತಪಡಿಸಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಡಿಎಸ್ಪಿ ವಿರೇಶ ನೇತೃತ್ವದಲ್ಲಿ ದಾಳಿ ನಡೆದಿದೆ.

ಚೀಪ್ ರೇಟ್ ಚಿನ್ನದ ಗ್ಯಾಂಗ್, ಬಲೆಗೆ ಬಿದ್ದಿದ್ದೇ ರೋಚಕ..! “ಧರ್ಮೆ”ಯ ಅಂಗಳದ ದರೋಡೆ ಕೇಸ್ ನ ಇಂಚಿಂಚೂ ಕತೆಯಿದು..!

ಚೀಪ್ ರೇಟ್ ಚಿನ್ನದ ಗ್ಯಾಂಗ್, ಬಲೆಗೆ ಬಿದ್ದಿದ್ದೇ ರೋಚಕ..! “ಧರ್ಮೆ”ಯ ಅಂಗಳದ ದರೋಡೆ ಕೇಸ್ ನ ಇಂಚಿಂಚೂ ಕತೆಯಿದು..!

ಚೀಪ್ ರೇಟ್ ಚಿನ್ನದ ಹೆಸ್ರಲ್ಲಿ ದರೋಡೆಗಿಳಿದು ಲಕ್ಷ ಲಕ್ಷ ವಂಚಿಸುತ್ತಿದ್ದ ಖತರ್ನಾಕ ಗ್ಯಾಂಗ್ ನ ಹೆಡೆಮುರಿ ಕಟ್ಟುವಲ್ಲಿ ಮುಂಡಗೋಡ ಪೊಲೀಸ್ರು ಬಹುತೇಕ ಯಶಸ್ವಿಯಾಗಿದ್ದಾರೆ. ಪರಿಣಾಮ, ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆದು ಹೋಗಿದ್ದ ರಾಬರಿ ಕೇಸ್ ಒಂದು ಹಂತದಲ್ಲಿ ತಾರ್ಕಿಕ ಅಂತ್ಯದತ್ತ ಬಂದು ನಿಂತಿದೆ. ಕೇಸ್ ನಲ್ಲಿ ಕಂತೆಗಟ್ಟಲೇ ಹಣವನ್ನು ಎಗರಿಸಿ ಪರಾರಿಯಾಗಿದ್ದ ಖದೀಮರನ್ನು ನಮ್ಮ ಹೆಮ್ಮೆಯ ಮುಂಡಗೋಡ ಪೊಲೀಸ್ರು ಎಳೆದು ತಂದಿದ್ದಾರೆ. ಹೀಗಾಗಿ, ಮುಂಡಗೋಡ ಪೋಲಿಸರಿಗೊಂದು ಬಿಗ್ ಸೆಲ್ಯೂಟ್..! 9-ಮೈನೆಸ್-6…! ಅಂದಹಾಗೆ, ಸಧ್ಯ ಪ್ರಕರಣದಲ್ಲಿ ಬರೋಬ್ಬರಿ 22.50 ಲಕ್ಷ ಹಣವನ್ನು ಅನಾಮತ್ತಾಗಿ ಎಗರಿಸಿ ಪರಾರಿಯಾಗಿದ್ದ 9 ಜನ ದರೋಡೆಕೋರರ ಪೈಕಿ, ಸದ್ಯ 5 ಖದೀಮರನ್ನು ಎಳೆದು ತರಲಾಗಿದೆ. ಜೊತೆಗೆ 6 ನೇ ಆರೋಪಿ ಪೊಲೀಸರ ವಶದಲ್ಲಿದ್ದಾನೆ ಅನ್ನೋ ಮಾಹಿತಿ ಇದೆ. ಅದ್ರೊಂದಿಗೆ 19 ಲಕ್ಷ ಹಣ, ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಅಂದಹಾಗೆ, ಈ ಕೇಸ್ ನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಇನ್ನೂ ಸಿಕ್ಕಿಲ್ಲ. ಅವ್ರು ದಾವಣಗೇರೆಯಲ್ಲೇ...

ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!

ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!

ಶಿರಸಿ: ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಹವಣಿಸುತ್ತಿದ್ದ ಆರೋಪಿಗಳನ್ನ ಬಂಧಿಸಿದ ಘಟನೆ ನಡೆದಿದೆ. ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಕಾಲೋನಿಯಲ್ಲಿ 1 ಕೆಜಿ 910 ಗ್ರಾಂ ತೂಕದ ಅಂದಾಜು 25ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಅಕ್ರಮವಾಗಿ ಸೊರಬದಿಂದ ಸಾಗಾಟ ಮಾಡಿಕೊಂಡು ಶಿರಸಿಯಲ್ಲಿ ಮಾರಾಟ ಮಾಡುವುದಕ್ಕಾಗಿ, ಬಂದವರನ್ನು ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ಮಂಜುನಾಥ ನಾಯ್ಕ(31) ಹಾಗೂ ವೀರಭದ್ರಪ್ಪ ತಂದೆ ಕರಿಯಪ್ಪ ಈಡಿಗ(42) ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊಳಗ ದೇವನಹಳ್ಳಿಯವರು. 1 ನೇ ಆರೋಪಿ ಮಂಜುನಾಥನ ವಿರುದ್ಧ ಈ ಹಿಂದೆ ಸುಲಿಗೆ ಪ್ರಕರಣವು ಬನವಾಸಿ ಠಾಣೆಯಲ್ಲಿ ದಾಖಲಾಗಿದೆ. ಆರೋಪಿತರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಶಾಸಕನಿಗೆ ಹೂಮಳೆಗೈದ “MLA ಭಕ್ತ” ಪೊಲೀಸರಿಗೆ ಎಸ್ಪಿ ನೋಟಿಸ್..!

ಶಾಸಕನಿಗೆ ಹೂಮಳೆಗೈದ “MLA ಭಕ್ತ” ಪೊಲೀಸರಿಗೆ ಎಸ್ಪಿ ನೋಟಿಸ್..!

ಬೆಳಗಾವಿ: ಕಿತ್ತೂರು ಶಾಸಕರಿಗೆ ಬಹುಪರಾಕ್ ಅಂತಾ ಹೂಮಳೆಗರೆದು, ಮಹಾರಾಜನಂತೆ ಮೆರೆಸಿದ ಪೋಲಿಸ್ ಅಧಿಕಾರಿಗಳಿಗೆ ಎಸ್ಪಿ ನೋಟಿಸ್ ನೀಡಿದ್ದಾರೆ. ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ್ ಹಾಗೂ ಪತ್ನಿಗೆ ಹೂಮಳೆಗೈದ ಪೋಲಿಸ್ ಅಧಿಕಾರಿಗಳಿಗೆ ಬೆಳಗಾವಿ ಪೋಲಿಸ್‌ ವರಿಷ್ಠಾಧಿಕಾರಿ ಲಕ್ಷ್ಮಣ‌ ನಿಂಬರಗಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಹುಟ್ಟುಹಬ್ಬದ ನಿಮಿತ್ತ ಬೈಲಹೊಂಗಲದ ಶಾಸಕ ಮಹಾಂತೇಶ ದೊಡಗೌಡರ ಹುಟ್ಟು ಹಬ್ಬದ ಹಿನ್ನೆಲೆ ಅವ್ರ ಮನೆಗೆ ತೆರಳಿ ಪುಷ್ಪವೃಷ್ಠಿ ಮಾಡಿದ್ದ ಪೋಲಿಸರಿಗೆ ಬಿಸಿ ಮುಟ್ಟಿಸಲಾಗಿದೆ. ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ಬೈಲಹೊಂಗಲ ಠಾಣೆ ಸಿಪಿಐ ಯು.ಬಿ. ಸಾತೇನಹಳ್ಳಿ, ನೇಸರ್ಗಿ ಠಾಣೆ ಪಿಎಸ್ಐ ಯಲ್ಲಪ್ಪ‌ ಶೀಗಿಹಳ್ಳಿ, ಗುಪ್ತಚರ ಇಲಾಖೆಯ ವಿಶ್ವನಾಥ ಮಲ್ಲನ್ನವರ, ಪೇದೆ ಮಂಜುನಾಥಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

error: Content is protected !!