Mundgod Accident News; ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಭೀಕರ ಅಪಘಾತವಾಗಿದೆ. ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ನಾಲ್ಕು ಜನರಿಗೆ ಗಾಯವಾಗಿದೆ. ಮೂವರಿಗೆ ಗಂಭೀರ ಗಾಯವಾಗಿದೆ.

ಬಾಚಣಕಿ ಬೀಗರ ಮನೆಗೆ ಬಂದಿದ್ದ  ಮಂಜುನಾಥ್ (25), ಬಾಚಣಕಿಯ ಶಿವಯ್ಯ ಈರ್ಪಯ್ಯ ಮಠದ (28) ನಿಂಗಪ್ಪ ಕುಸೂರು(65), ಎಂಬುವ ಮೂವರಿಗೆ ಗಂಭೀರ ಗಾಯವಾಗಿದೆ ಅಂತಾ ಮಾಹಿತಿ ಬಂದಿದೆ. ಇನ್ನು ನಾಗರಾಜ ನಿಂಗಪ್ಪ ಸಾಗರ್(28) ಸಣ್ಣಪುಟ್ಟ ಗಾಯವಾಗಿದೆ. ಇದ್ರಲ್ಲಿ ಮಂಜುನಾಥ್ ಎಂಬುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ರಾಯಲ್ ಎನ್ಫೀಲ್ಡ್ ಹಾಗೂ ಅಪಾಚಿ ಬೈಕಗಳ ನಡುವೆ ಅಪಘಾತ ಸಂಭವಿಸಿದ್ದು. ಗಾಯಾಳುಗಳನ್ನು ಮುಂಡಗೋಡ ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!