ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಅನುಷ್ಟಾನಗೊಂಡಿರೋ “ಆರೋಗ್ಯ ಮತ್ತು ಕ್ಷೇಮ ಕೇಂದ್ರ” ಇದ್ದೂ ಇಲ್ಲದಂತಾಗಿದೆ. ಇಲ್ಲಿ ನೇಮಕಗೊಂಡಿರೋ ಸ್ಟಾಪ್ ನರ್ಸ್ ಮೇಡಂ ಈ ಆರೋಗ್ಯ ಕೇಂದ್ರದ ಆರೋಗ್ಯವನ್ನೇ ಹಾಳು ಮಾಡಿದ್ದಾರೆ ಅಂತಿದಾರೆ ಇಲ್ಲಿನ ಜನ. ಯಾಕಂದ್ರೆ, “ತಮಗಿಷ್ಟ ಬಂದಾಗ ಬರೋದು, ಬೇಕಾದಾಗ ಹೋಗೋದು” ಅನ್ನೋ ರೂಢಿ ಇಟ್ಕೊಂಡಿರೋ ನರ್ಸಮ್ಮ ಇಲ್ಲಿನ ಜನ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರೋದು ಮದ್ಯಾಹ್ನ..! ಅಂದಹಾಗೆ, ನಂದಿಕಟ್ಟಾ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸ್ಥಾಪನೆಗೊಂಡಿರೋ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಓರ್ವ ಅಟೆಂಡರ್ ಹಾಗೂ ಮುಖ್ಯವಾಗಿ ಓರ್ವ ಸ್ಟಾಪ್ ನರ್ಸ್ ನಿಯೋಜನೆ ಮಾಡಲಾಗಿದೆ. ನಿತ್ಯವೂ ಇಲ್ಲಿನ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಲು ಅಂತಾ ನರ್ಸ್ ಮೇಡಂ ನಿಯೋಜನೆಗೊಂಡಿದ್ದಾರೆ. ಆದ್ರೆ, ಇಲ್ಲಿ ಒಂದು ದಿನವೂ ಈ ತಾಯಿ ಸಮಯಕ್ಕೆ ಸರಿಯಾಗಿ ಬಂದೇ ಇಲ್ಲವಂತೆ. ಇದು ಸರಿನಾ..? ಅಂದಹಾಗೆ, ಬೆಳಿಗ್ಗೆ 9.30 ಕ್ಕೆ ನಿತ್ಯವೂ ಡ್ಯೂಟಿಗೆ ಹಾಜರಾಗಿ, ಸಂಜೆ 4.30 ವರೆಗೂ ತಮ್ಮ ಕರ್ತವ್ಯ ನಿಭಾಯಿಸಬೇಕಿರೋದು ಇವ್ರ...
Top Stories
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಸತತ ಮಳೆಯಿಂದ ಗೋವಿನಜೋಳ ಬೆಳೆದ ರೈತನ ಗೋಳು..!
ಮುಂಡಗೋಡ: ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರೋ ಕಾರಣಕ್ಕೆ ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಮೌಲ್ಯದ ಗೋವಿನ ಜೋಳದ ಬೆಳೆ ನೀರಲ್ಲಿ ಹಾಕಿದಂತಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಹೀಗಾಗಿ ರಸ್ತೆ ಮೇಲೇಲ್ಲ ಗೊವಿನಜೋಳ ಹರಡಿಕೊಂಡು ಒಣಹಾಕಲು ಹರಸಾಹಸ ಪಡ್ತಿದಾನೆ ರೈತ. ಅಲ್ಲದೇ ಸ್ವಲ್ಪ ಹೊತ್ತು ಬಿಡುವು ಕೊಟ್ಟ ಮಳೆ ಮತ್ತೆ ಕೆಲವೇ ಹೊತ್ತಲ್ಲಿ ಸುರಿಯಲು ಪ್ರಾರಂಭವಾಗತ್ತದೆ. ಹೀಗಾಗಿ ಇಡೀ ರೈತನ ಕುಟುಂಬಗಳು ಈಗ ಗೋವಿನಜೋಳದ ಒಣ ಹಾಕುವ ಕೆಲಸ ಹಾಗು ಮತ್ತೆ ಕೂಡಿಡುವ ಕೆಲಸದಲ್ಲೇ ಕಾಲ ಕಳೆಯುವಂತಾಗಿದೆ.
ಪಾಳಾ ಮಾವು ಬೆಳೆಗಾರರ ಮಾರುಕಟ್ಟೆಗೆ ನೂತನ ಐಡಿಯಾ..!
ಮುಂಡಗೋಡ: ತಾಲೂಕಿನ ಪಾಳಾದ ಆಪೂಸ್ ಮಾವಿನ ಹಣ್ಣು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದೆ. ಆದ್ರೆ ಪ್ರಸಕ್ತ ವರ್ಷದ ನಿರಂತರ ಮಳೆಯಿಂದ ಮಾವಿನ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಮಳೆಯಿಂದ ಮಾವು ಕೊಳೆತು ಹೋಗುತ್ತಿದೆ. ಹೀಗಾಗಿ ಇಲ್ಲಿನ ಮಾವು ಬೆಳೆಗಾರರು ಒಗ್ಗಟ್ಟಾಗಿ ಮಾವು ಬೆಳೆಗಾರರೇ ಖುದ್ದಾಗಿ ಸಂಘವೊಂದನ್ನ ಕಟ್ಟಿಕೊಂಡಿದ್ದಾರೆ. ಈ ಮೂಲಕ ತಾವು ಬೆಳೆದ ಮಾವುಗಳನ್ನು ಯಾವುದೇ ರಾಸಾಯನಿಕ ಬಳಸದೇ ಹಣ್ಣುಗಳನ್ನು ದಾಸ್ತಾನು ಮಾಡಿ, ಅದಕ್ಕಾಗೇ ರಕ್ಷಣಾ ವಿಧಾನಗಳನ್ನು ಅನುಸರಿಸಿ, ತಮ್ಮ ಮಾವುಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ದಲ್ಲಾಳಿಗಳು ಹಾಗೂ ಮದ್ಯವರ್ತಿಗಳ ಹಾವಳಿಯಿಂದ ತಮಗೆ ಆಗುತ್ತಿದ್ದ ನಷ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಯಶಸ್ಸು ಕಾಣುತ್ತಿದ್ದಾರೆ.
ಸಾಲಗಾಂವಿಯಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಭತ್ತದ ಬಣಿವೆ..!
ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಸತತ ಸುರಿಯುತ್ತಿರೋ ಮಳೆಯ ಕಾರಣಕ್ಕೆ ರೈತನೋರ್ವ ಭತ್ತ ಕಟಾವು ಮಾಡಿ ಇಟ್ಟಿದ್ದ ಬಣಿವೆ ನೀರಲ್ಲಿ ಮುಳುಗಿದೆ. ಗ್ರಾಮದ ಸರ್ವೆ ನಂ.212 ರಲ್ಲಿ ಸರ್ಕಾರಿ ಕೆರೆಯಲ್ಲಿ ಬಡ ರೈತ ಮಂಜುನಾಥ್ ಬಸವಣ್ಣೆಪ್ಪ ಮೂಲಿಮನಿ, ಭತ್ತದ ಬಣಿವೆ ಒಕ್ಕಿದ್ದ. ತನ್ನ ಗದ್ದೆಯಲ್ಲಿ ಜಾಗ ಇಲ್ಲದ ಸಲುವಾಗಿ ಖಾಲಿಯಾಗಿದ್ದ ಕೆರೆಯಲ್ಲಿ ಭತ್ತದ ಬಣಿವೆ ಒಕ್ಕಿದ್ದ ಹೀಗಾಗಿ, ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರೋ ಭಾರಿ ಮಳೆಯಿಂದ ಕೆರೆ ತುಂಬಿ ಭತ್ತದ ಬಣಿವೆ ನೀರಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದೆ. ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಟಿ ಭತ್ತಕ್ಕೆ ಹಾನಿ..! ಇನ್ನು ಇದೇ ಗ್ರಾಮದ ರೈತ ಪುಟ್ಟಪ್ಪ ದೇವೇಂದ್ರಪ್ಪ ಗುಲ್ಯಾನವರ ಎಂಬುವವರ ಒಂದು ಎಕರೆ ನಾಟಿ ಭತ್ತದ ಗದ್ದೆಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಪ್ಪದ ರಸ್ತೆಯಲ್ಲೇ ನರಳಾಡುತ್ತಿದೆ ಅಪರೂಪದ ಕಾಡು ಪ್ರಾಣಿ, ಬೇಕಿದೆ ರಕ್ಷಣೆ..!
ಮುಂಡಗೋಡ: ತಾಲೂಕಿನಲ್ಲಿ ಸತತ ಮಳೆ ಬೀಳುತ್ತಿರೋ ಕಾರಣಕ್ಕೆ ಮನುಷ್ಯರಷ್ಟೇ ತೊಂದರೆ ಅನುಭವಿಸುತ್ತಿಲ್ಲ. ಬದಲಾಗಿ ಕಾಡು ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ತಾಲೂಕಿನ ಕೊಪ್ಪ ಗ್ರಾಮದ ಹತ್ತಿರ ರಸ್ತೆಯ ಮದ್ಯೆ ಕಾಡು ಮರ ನಾಯಿ ಅಂತ ಕರಿಯುವ ಅಪರೂಪದ ಪ್ರಾಣಿ ಅನಾರೋಗ್ಯದಿಂದ ಬಳಲುತ್ತಿದೆ. ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರೋ ಅಪರೂಪದ ಪ್ರಾಣಿ ರಸ್ತೆ ದಾಟಲು ಸಹ ಪರದಾಡುತ್ತಿದೆ. ರಸ್ತೆಯಲ್ಲಿ ಒದ್ದಾಡುತ್ತಿದ್ದ ಪ್ರಾಣಿಯನ್ನು ದಾರಿಹೋಕರು ರಸ್ತೆಯ ಪಕ್ಕದಲ್ಲಿ ಇಟ್ಟು ರಕ್ಷಿಸಿದ್ದಾರೆ. ಆದ್ರೆ ಈ ಅಪರೂಪದ ಪ್ರಾಣಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಅಪರೂಪದ ಪ್ರಾಣಿಯನ್ನು ಸಂರಕ್ಷಿಸಬೇಕಿದೆ.
ಮುಂಡಗೋಡ ತಾಲೂಕಿನಲ್ಲಿ ಸತತ ಮಳೆಯಿಂದ ಕಂಗಾಲಾದ ಜನ, ಎಲ್ಲೇಲ್ಲಿ ಹಾನಿ..?
ಮುಂಡಗೋಡ: ತಾಲೂಕಿನಾಧ್ಯಂತ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನ ಜನ ಹೈರಾಣಾಗಿದ್ದಾರೆ. ಹಗಲೂ ರಾತ್ರಿ ಸುರಿದ ಸತತ ಮಳೆಯಿಂದ ಅನ್ನದಾತನ ಬದುಕೆ ಅತಂತ್ರವಾಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಹಾಗಿದ್ರೆ ಎಲ್ಲೇಲ್ಲಿ ಏನೇನು ಹಾನಿಯಾಗಿದೆ..? ಇಲ್ಲಿದೆ ರಿಪೋರ್ಟ್ ಬಸಾಪುರದಲ್ಲಿ ಮನೆ ಕುಸಿತ..! ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಇಲ್ಲಿನ ಕಲ್ಲಯ್ಯ ಕರ್ಪೂರಮಠ್ ಎಂಬುವವರ ಮನೆ ಸಂಪೂರ್ಣ ಬಿದ್ದಿದೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಈ ಕಡೆ ಗಮನ ಹರಿಸಿಲ್ಲ ಅಂತಿದಾರೆ ಕುಟುಂಬಸ್ಥರು. ಹೀಗಾಗಿ, ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಕಬ್ಬು ಬೆಳೆಗೆ ಆತಂಕ..! ಮುಂಡಗೋಡ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಭಾರೀ ಮಳೆಗೆ ತಾಲೂಕಿನ ಅನ್ನದಾತ ಅಕ್ಷರಶಃ ಆತಂಕದಲ್ಲಿದ್ದಾನೆ. ತಾಲೂಕಿನ ಕಬ್ಬು ಬೆಳೆಗಾರರಿಗೆ ಮಳೆಯ ಕಾರಣಕ್ಕೆ ಭಾರಿ ಆತಂಕ ಶುರುವಾಗಿದೆ. ಮಳೆಯ ನೀರು ಸಂಪೂರ್ಣವಾಗಿ...
ಚುನಾವಣೆಗೆ “ಕಣಕಹಳೆ” ಮೊಳಗಿಸಿದ್ರಾ ಹೆಬ್ಬಾರ್..? “ಸಾಂತ್ವನ”ದ ಸಚಿವ ಮತದಾರನ ಮನೆ ಮಾತಾಗಿದ್ದಾದ್ರೂ ಹೇಗೆ..?
ಸಚಿವ ಶಿವರಾಮ್ ಹೆಬ್ಬಾರ್ ಮತ್ತೆ ಮೈ ಕೊಡವಿ ಎದ್ದಿದ್ದಾರೆ. ಚುನಾವಣೆ ವರ್ಷದಲ್ಲಿ ಬಿಜೆಪಿ ಜಯಭೇರಿ ಬಾರಿಸಲು ನಿನ್ನೆಯಿಂದಲೇ “ಪವರ್ ಫುಲ್” ರಣಕಹಳೆ ಮೊಳಗಿಸಿದ್ದಾರೆ. ಕ್ಷೇತ್ರದ ಪ್ರತೀ ಭಾಗದಲ್ಲಿ ಖುದ್ದು ಬೂತ್ ಮಟ್ಟದ ಕಾರ್ಯಕರ್ತರ ಮೈದಡವಿ ಮಾತಾಡಿಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ತುಂಬ ಮತ್ತೊಮ್ಮೆ ತಮ್ಮದೇ ಆದ ಕಾರ್ಯಪಡೆ ರಚಿಸಿ ಹುರುಪು ತುಂಬಿಸುತ್ತಿದ್ದಾರೆ. ಮಳಗಿ ಭಾಗ..! ನಿನ್ನೆ ಮಂಗಳವಾರದಿಂದಲೇ ಸಚಿವ ಹೆಬ್ಬಾರ್, ಮಳಗಿ ಭಾಗದಿಂದ ತಮ್ಮ ಗೆಲುವಿನ ಕೇಕೆ ಹಾಕಲು ಬೇಕಾದ ರಹದಾರಿಗೆ ಹಸಿರು ನಿಶಾನೆ ತೋರಿದ್ದಾರೆ. ಅಂದಹಾಗೆ ಈ ಮಳಗಿ ಭಾಗದಲ್ಲಿ ಬಿಜೆಪಿಗೆ ಬದ್ರ ನೆಲೆ ಒದಗಿಸುವ ಅವಶ್ಯಕತೆ ಇದೆ. ಇಲ್ಲಿ ಬಿಜೆಪಿ ಅಂದುಕೊಳ್ಳುವಷ್ಟು ಪೂರಕ ವಾತಾವರಣ ಇಲ್ಲ. ಅದು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೇ ಬಿಜೆಪಿಗೆ ಅರ್ಥವಾಗಿದೆ. ಮಳಗಿ ಗ್ರಾಮ ಪಂಚಾಯತಿಯಲ್ಲಿ ಅನಾಯಾಸವಾಗಿ ದಕ್ಕಬೇಕಿದ್ದ ಚುಕ್ಕಾಣಿ, ಒಳಗೊಳಗಿನ ತಿಕ್ಕಾಟಗಳಿಂದ ಕೈ ತಪ್ಪಿ ಹೋಗಿತ್ತು. ಮಳಗಿ ಗ್ರಾಮ ಪಂಚಾಯತಿಯ ಒಟ್ಟೂ 19 ಸ್ಥಾನಗಳ ಪೈಕಿ, 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದು...
ಕುಟುಂಬಕ್ಕೊಂದೇ ಟಿಕೆಟ್, ಕೈ ಪಡೆಯಲ್ಲಿ ಕೊಲಾಹಲ, ಆರ್ವಿಡಿ ಕನಸಿಗೆ ಕತ್ತರಿಯಾಗತ್ತಾ ತೀರ್ಮಾನ..?
ರಾಷ್ಟ್ರ ಮಟ್ಟದಲ್ಲಿ ಕೈ ಪಡೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಹೊಸತನಗಳ ಅನ್ವೇಷಣೆಗೆ ಹೊರಟಿದೆ. ಉದಯಪುರದಲ್ಲಿ ಸದ್ಯ ನಡೆಯುತ್ತಿರೊ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಹೊಸತನಗಳಿಗೆ ಒಗ್ಗಬೇಕಾದ ಅನಿವಾರ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಕಾಂಗ್ರೆಸ್. ಕುಟುಂಬ ರಾಜಕಾರಣಕ್ಕೆ ತೀಲಾಂಜಲಿ ಇಟ್ಟು, ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ಚಿಂತನಾ ಶಿಬಿರದಲ್ಲಿ ಗಂಭೀರ ಚಿಂತನೆ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ಕೊಡಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿಬಿಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗ್ತಿದೆ. ಹೀಗಾಗಿ, ರಾಜ್ಯದಲ್ಲಿ ತಮ್ಮ ಕುಟುಂಬದ ಕುಡಿಗಳಿಗೆ ಪಟ್ಟಾಭಿಷೇಕ ಮಾಡುವ ಮಹದಾಸೆ ಹೊತ್ತ ಕೈ ಪಡೆಯ ಸಾಲು ಸಾಲು ನಾಯಕರಿಗೆ ನಿರಾಶೆ ಕಾದಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ. ದೇಶಪಾಂಡೆ ಕನಸು..? ದೂರದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿನ ತೀರ್ಮಾನಗಳು ಕರ್ನಾಟಕದ ಉಳಿದ ಕ್ಷೇತ್ರಗಳಲ್ಲಿ ಅದ್ಯಾವ ಮಟ್ಟಿಗೆ ಪರಿಣಾಮ ಬೀರತ್ತೋ ಗೊತ್ತಿಲ್ಲ. ಆದ್ರೆ ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಕ್ಕೆ ಮಾತ್ರ ಬಹುತೇಕ ಗೇಮ್ ಪ್ಲ್ಯಾನ್ ಉಲ್ಟಾ ಪಲ್ಟಾ...
ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!
ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ. ಕಾತೂರಿನಲ್ಲಿ ಟೀ ಅಂಗಡಿ ನಡೆಸುತ್ತಿರೊ ಮಹಮ್ಮದ್ ಜಾಫರ್ ಮಹಮ್ಮದ ಹುಸೇನ ಮರಗಡಿ (48) ಎಂಬುವವನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ. ಈ ವೇಳೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಹಾಗೂ ತಂಡ ದಾಳಿ ನಡೆಸಿದೆ. ಇನ್ನು ಹೀಗೆ ದಂಧೆ ನಡೆಸಲು ಬೆನ್ನೆಲುಬಾಗಿ ನಿಂತಿದ್ದ ಹಾಗೂ ಮಟ್ಕಾ ಆಟದಿಂದ ಸಂಗ್ರಹವಾದ ಹಣವನ್ನು ಪಾಳಾ ಗ್ರಾಮದ ಮೌಲಾಲಿ ಹಾಗೂ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಚಿಕ್ಕೆರೂರಿನ ಅಥಾವುಲ್ಲಾ ಎಂಬುವವನಿಗೆ ನೀಡುತ್ತಿರುವಾದಾಗಿ ಆರೋಪಿ ಒಪ್ಪಿಕೊಂಡಿದ್ದು ಅವರಿಬ್ಬರ ಮೇಲೂ ಕೇಸು ದಾಖಲಾಗಿದೆ. ಇವ್ರೊಂದಿಗೆ, ನಗದು ಹಣ 1120 -ರೂ ವಶಪಡಿಸಿಕೊಳ್ಳಲಾಗಿದೆ.
ಕಮಲ್ ಪಂಥ್ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ..!
ಬೆಂಗಳೂರು: ರಾಜ್ಯ ಸರ್ಕಾರ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂಥ್ ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಸಿ. ಎಚ್. ಪ್ರತಾಪ್ ರೆಡ್ಡಿ ನೇಮಕಗೊಂಡಿದ್ದಾರೆ. ಕೆಎಸ್ಆರ್ಪಿಯ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿ, ಅವರ ಜಾಗಕ್ಕೆ ಕ್ರೈಂ ಮತ್ತು ಟೆಕ್ನಿಕಲ್ ಸೆಲ್ನಲ್ಲಿ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು, ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂ. ಎನ್. ಅನುಚೇತ್ ಅವರನ್ನು ಸಿಐಡಿಯ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.