ಬಿಜೆಪಿ MLC ಟಿಕೆಟ್ ಕುತೂಹಲ: ಚೆಲುವಾದಿ ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಬಿಜೆಪಿ ಟಿಕೆಟ್..?

ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆಯಾ..? ಆ ನಾಲ್ವರು ಆಕಾಂಕ್ಷಿಗಳಿಗೆ ಬಿಜೆಪಿಯ ಪ್ರಮುಖ ನಾಯಕರುಗಳಿಂದ ಪೋನ್ ಕರೆ ಬಂದಿದ್ದು, ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುವಂತೆ ಕರೆ ಮಾಡಲಾಗಿದೆ ಅನ್ನೊ ಮಾತುಗಳು ಕೇಳಿ ಬಂದಿವೆ. ಲಿಂಗರಾಜ್ ಪಾಟೀಲ್, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಸಿ. ಮಂಜುಳಾಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ ಎನ್ನಲಾಗಿದೆ.

ಲಿಂಗಾಯತ ಕೋಟಾದಡಿ ಲಿಂಗರಾಜ್ ಪಾಟೀಲ್ ಗೆ ಟಿಕೆಟ್ ಫಿಕ್ಸ್, ದಲಿತ ಕೋಟಾದಡಿ ಚಲುವಾದಿ ನಾರಾಯಣಸ್ವಾಮಿ, ಮಹಿಳಾ ಕೋಟಾದಡಿ ಸಿ.ಮಂಜುಳಾ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ್ ಪ್ರಸಾದ್ ಗೆ ಟಿಕೆಟ್ ಫಿಕ್ಸ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

error: Content is protected !!