ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಮೈನಳ್ಳಿ ಹಾಗೂ ಗುಂಜಾವತಿ ನಡುವೆ ಅಪಘಾತವಾಗಿದೆ. ಮಾರುತಿ ಇಕೋ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದೆ.

ದಾವಣಗೇರೆಯ ಪರಶುರಾಮ R ಆಲದಕಟ್ಟಿ (53), ಬಾಪೂಜಿ N ಕಾಳೆ (42), ಗುರುರಾಜ್ ಸಾಳಂಕಿ (35) ಗಾಯಗೊಂಡವರು. ದಾವಣಗೆರೆಯಿಂದ ಕಾರವಾರಗೆ ಮದುವೆಗೆಂದು ಹೋಗುತ್ತಿದ್ದ ದಾವಣಗೆರೆ ಮೂಲದ ಇಕೋ ವಾಹನ, ಗುಂಜಾವತಿ ಮೈನಳ್ಳಿ ಮದ್ಯೆ ಸ್ಕಿಡ್ ಆಗಿ ಅಪಘಾತವಾಗಿದೆ.‌ ಘಟನೆಯಲ್ಲಿ ಒಬ್ಬರ ಬಲಗಾಲಿಗೆ ಗಾಯವಾಗಿದೆ. ಒಬ್ಬರಿಗೆ ಬಲಗೈಗೆ ಗಾಯ ಆಗಿದೆ. ಇನ್ನೊಬ್ಬರಿಗೆ ಮೈಮೇಲೆ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ.

ತಕ್ಷಣವೇ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಸಿ ಬಳೂರು ಮತ್ತು ಚಾಲಕ ಪ್ರಕಾಶ ಬಾಗೇವಾಡಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!