ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಅನುಷ್ಟಾನಗೊಂಡಿರೋ “ಆರೋಗ್ಯ ಮತ್ತು ಕ್ಷೇಮ ಕೇಂದ್ರ” ಇದ್ದೂ ಇಲ್ಲದಂತಾಗಿದೆ. ಇಲ್ಲಿ ನೇಮಕಗೊಂಡಿರೋ ಸ್ಟಾಪ್ ನರ್ಸ್ ಮೇಡಂ ಈ ಆರೋಗ್ಯ ಕೇಂದ್ರದ ಆರೋಗ್ಯವನ್ನೇ ಹಾಳು ಮಾಡಿದ್ದಾರೆ ಅಂತಿದಾರೆ ಇಲ್ಲಿನ ಜನ. ಯಾಕಂದ್ರೆ, “ತಮಗಿಷ್ಟ ಬಂದಾಗ ಬರೋದು, ಬೇಕಾದಾಗ ಹೋಗೋದು” ಅನ್ನೋ ರೂಢಿ ಇಟ್ಕೊಂಡಿರೋ ನರ್ಸಮ್ಮ ಇಲ್ಲಿನ ಜನ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬರೋದು ಮದ್ಯಾಹ್ನ..!
ಅಂದಹಾಗೆ, ನಂದಿಕಟ್ಟಾ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸ್ಥಾಪನೆಗೊಂಡಿರೋ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಓರ್ವ ಅಟೆಂಡರ್ ಹಾಗೂ ಮುಖ್ಯವಾಗಿ ಓರ್ವ ಸ್ಟಾಪ್ ನರ್ಸ್ ನಿಯೋಜನೆ ಮಾಡಲಾಗಿದೆ. ನಿತ್ಯವೂ ಇಲ್ಲಿನ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಲು ಅಂತಾ ನರ್ಸ್ ಮೇಡಂ ನಿಯೋಜನೆಗೊಂಡಿದ್ದಾರೆ. ಆದ್ರೆ, ಇಲ್ಲಿ ಒಂದು ದಿನವೂ ಈ ತಾಯಿ ಸಮಯಕ್ಕೆ ಸರಿಯಾಗಿ ಬಂದೇ ಇಲ್ಲವಂತೆ.

ಇದು ಸರಿನಾ..?
ಅಂದಹಾಗೆ, ಬೆಳಿಗ್ಗೆ 9.30 ಕ್ಕೆ ನಿತ್ಯವೂ ಡ್ಯೂಟಿಗೆ ಹಾಜರಾಗಿ, ಸಂಜೆ 4.30 ವರೆಗೂ ತಮ್ಮ ಕರ್ತವ್ಯ ನಿಭಾಯಿಸಬೇಕಿರೋದು ಇವ್ರ ಜವಾಬ್ದಾರಿ. ಆದ್ರೆ, ಈಯಮ್ಮ ಮಾತ್ರ ಇದ್ಯಾವುದನ್ನೂ ಲೆಕ್ಕಕ್ಕೆ ಪಡಿತಾನೇ ಇಲ್ಲ. ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ಈ ನರ್ಸಮ್ಮ, ಬೆಳಿಗ್ಗೆ ಲೇಟಾಗೇ ಬಂದು, ಮದ್ಯಾನದಷ್ಟೊತ್ತಿಗೆ ವಾಪಸ್ ಹೋಗಿ ಬಿಡ್ತಾರೆ. ಹೀಗಾಗಿ, ಈ ಆರೋಗ್ಯ ಕೇಂದ್ರವನ್ನು ನಂಬಿ ಬರೋ ರೋಗಿಗಳು ಬಂದ ದಾರಿಗೆ ಸುಂಕವಿಲ್ಲ ಅಂತಾ ವಾಪಸ್ ಹೋಗೊ ಸ್ಥಿತಿ ನಿರ್ಮಾಣವಾಗಿದೆ.

ಹೇಳೋರೇ ಇಲ್ವಾ..?
ನಿಜ ಅಂದ್ರೆ ಇಲ್ಲಿನ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಬೇಕಾಗಿ ಇಲ್ಲಿರೋದು ಇವ್ರೊಬ್ರೇ ನರ್ಸಮ್ಮ. ಆದ್ರೂ ಈ ನರ್ಸ್ ಮೇಡಂ ಮಾತ್ರ ಹೀಗೆ ತಮಗಿಷ್ಟ ಬಂದಾಗ ಬರೋದು, ಇಷ್ಟ ಬಂದಾಗ ಹೋಗೋದು ಅಂತಾದ್ರೆ ಅಲ್ಲಿರೋ ರೋಗಿಗಳು ಏನ್ ಮಾಡಬೇಕು..? ಮತ್ತೇಲ್ಲಿಗೆ ಹೋಗಬೇಕು..? ಅಂತಾ ಕೇಳ್ತಿದಾರೆ ಇಲ್ಲಿನ ಜನ. ಹೀಗಿದ್ದಾಗ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದ್ರೂ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲವಂತೆ, ಹೀಗಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ನರ್ಸಮ್ಮನ “ಸಮಯ” ಪ್ರಜ್ಞೆಯನ್ನು ಸರಿ ಮಾಡುವಂತೆ ಮನವಿ ಮಾಡ್ತಿದಾರೆ. ಇನ್ನಾದ್ರೂ ನರ್ಸಮ್ಮ ಸಮಯಕ್ಕೆ ಸರಿಯಾಗಿ ಬಂದು, ನಿಗದಿ ಪಡಿಸಿರೋ ಸಮಯದಲ್ಲಿ ಕಾರ್ಯ ನಿರ್ವಹಿಸಬೇಕಿದೆ.

error: Content is protected !!