ಕಲಘಟಗಿಯಲ್ಲಿ ನೇಣು ಬಿಗಿದುಕೊಂಡು ಬಾಲ ಸಹೋದರಿಯರು ಆತ್ಮಹತ್ಯೆ..!

ಕಲಘಟಗಿಯಲ್ಲಿ ನೇಣು ಬಿಗಿದುಕೊಂಡು ಬಾಲ ಸಹೋದರಿಯರು ಆತ್ಮಹತ್ಯೆ..!

ಕಲಘಟಗಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೂನ್ 7 ರಂದು ಮದುವೆಯಾಗಬೇಕಿದ್ದ ಹುಡುಗ, ಜಿನ್ನೂರಿನ ತೋಟದ ಮನೆಯಲ್ಲಿ ಭೀಕರ ಹತ್ಯೆಯಾದ..!

ಜೂನ್ 7 ರಂದು ಮದುವೆಯಾಗಬೇಕಿದ್ದ ಹುಡುಗ, ಜಿನ್ನೂರಿನ ತೋಟದ ಮನೆಯಲ್ಲಿ ಭೀಕರ ಹತ್ಯೆಯಾದ..!

ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದು ಹೋಗಿದ್ದಾರೆ ದುಷ್ಕರ್ಮಿಗಳು. ಇನ್ನೇನು ಜೂ. 7 ರಂದು ಹಸೆಮಣೆ ಏರಲು ರೆಡಿಯಾಗಿದ್ದ ಯುವಕ ಸದ್ಯ ಹೆಣವಾಗಿ ಬಿದ್ದಿದ್ದಾನೆ. ಅಂದಹಾಗೆ, ಜಿನ್ನೂರಿನ ನಿಂಗಪ್ಪ ನವಲೂರ (28) ಕೊಲೆಯಾಗಿರುವ ಯುವಕನಾಗಿದ್ದು, ತೋಟದ ಮನೆಯಲ್ಲಿ ಮಲಗಿದ್ದ ವೇಳೆ ಮದ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದಾರೆ ದುಷ್ಟರು. ಅಸಲು, ಇದೇ ಜೂನ್ 7 ರಂದು ಯುವಕನಿಗೆ ಮದುವೆ ಫಿಕ್ಸ್ ಆಗಿತ್ತು. ಕಲಘಟಗಿ ತಾಲೂಕಿನ ತಾವಗೇರಿ ಯುವತಿಯ ಜೊತೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ, ಮದುವೆಯ ಸಂಭ್ರಮಕ್ಕೆ ಅಣಿಯಾಗಿದ್ದ ಯುವಕ. ಆದ್ರೆ, ಅದರೊಳಗೆ ಭೀಕರವಾಗಿ ಹತ್ಯೆಯಾಗಿದ್ದು ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಜಿನ್ನೂರು ಗ್ರಾಮ ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸನವಳ್ಳಿಗಷ್ಟೇ ಸೀಮಿತವಾಯ್ತಾ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧದ ಸಮರ..? ಸಾಹೇಬ್ರೆ, ತಾಲೂಕಿನೆಲ್ಲೆಡೆ ಇದೆ ಅಕ್ರಮ ಭಟ್ಟಿಗಳು..! ಕ್ರಮ ಯಾವಾಗ..?

ಸನವಳ್ಳಿಗಷ್ಟೇ ಸೀಮಿತವಾಯ್ತಾ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧದ ಸಮರ..? ಸಾಹೇಬ್ರೆ, ತಾಲೂಕಿನೆಲ್ಲೆಡೆ ಇದೆ ಅಕ್ರಮ ಭಟ್ಟಿಗಳು..! ಕ್ರಮ ಯಾವಾಗ..?

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಹೆಜ್ಜೆಗೊಂದರಂತೆ ಇರೋ ಅಕ್ರಮ ಇಟ್ಟಿಗೆ ಭಟ್ಟಿಗಳ‌ ಮೇಲೆ ತಹಶೀಲ್ದಾರ್ ಶಂಕರ್ ಗೌಡಿ ಸಾಹೇಬ್ರು ಸಮರ ಸಾರಿದ್ದಾರೆ‌. ನಿನ್ನೆ ಇಡೀ ಸನವಳ್ಳಿಯ ಅಕ್ರಮ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಛಳಿ ಬಿಡಿಸಿದ್ದಾರೆ. ಹೀಗಾಗಿ, ತಾಲೂಕಿನ ಮಂದಿ ತಹಶೀಲ್ದಾರರ ಖಡಕ್ ಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸ್ತಿದಾರೆ. ನಿಜ..! ತಾಲೂಕಿನ ಸನವಳ್ಳಿಯಲ್ಲಿ ಇಟ್ಟಿಗೆ ಭಟ್ಟಿಗಳ ರಾಜಾರೋಶತನಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದ್ದೇ ಇದೆ. ಅದನ್ನ ಇಡೀ ತಾಲೂಕಿನ ಜನ ಬಯಸಿದ್ರು. ಕಾರಣವೆಂದ್ರೆ, ಅಲ್ಲಿ ಸಾಕಷ್ಟು ಕಾನೂನುಗಳ ಉಲ್ಲಂಘನೆ ಆಗ್ತಿತ್ತು. ಆದ್ರೆ, ಇದೇಲ್ಲ ಈ ಹಿಂದಿನ ಎಲ್ಲಾ ಅಧಿಕಾರಿಗಳಿಗೂ ತಿಂಗಳಿಗೆ ಒಂದಿಷ್ಟು ಕೈ ಬಿಸಿ ಮಾಡಿದ್ರೆ ಮುಗೀತು ನಮ್ಮನ್ನ ಕೇಳೋರ್ಯಾರು ಅನ್ನೋ‌ ಮನಸ್ಥಿತಿ ಅಕ್ರಮ ಇಟ್ಟಿಗೆ ಅಡ್ಡೆಗಳ ಮಾಲೀಕರಿಗೆ ಗಟ್ಟಿ ದೈರ್ಯ ತುಂಬಿತ್ತು. ಹೀಗಾಗಿ, ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ಭಟ್ಟಿಗಳು ಹೊಗೆ ಉಗುಳುತ್ತಿದ್ದವು. ಅದೇಷ್ಟೋ ಅರಣ್ಯ ಸಂಪತ್ತು ಲೂಟಿಯಾಗ್ತಿತ್ತು. ಪರಿಸರಕ್ಕೆ ಧಕ್ಕೆ ಯಾಗ್ತಿತ್ತು. ಆದ್ರೆ, ಸಧ್ಯ ತಹಶೀಲ್ದಾರ್ ಸಾಹೇಬ್ರು ಇಂತಹ ಅಕ್ರಮಿಗಳ ಬೆನ್ನು ಬಿದ್ದಿದ್ದಾರೆ...

ಸನವಳ್ಳಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿದ ತಹಶೀಲ್ದಾರ್, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ..!

ಸನವಳ್ಳಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿದ ತಹಶೀಲ್ದಾರ್, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ..!

 ಮುಂಡಗೋಡಿನ ದಕ್ಷ, ಗಂಡೆದೆಯ ತಹಶೀಲ್ದಾರ್ ಶಂಕರ್ ಗೌಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಇವತ್ತು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ್ರು. ನೋಟೀಸ್ ನೀಡಿದ್ದರೂ..! ಅಸಲು, ಈ ಹಿಂದೆ ದಾಳಿ ಮಾಡಿದ್ದ ತಹಶೀಲ್ದಾರ್ ಸಾಹೇಬ್ರು ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ, ನೋಟೀಸ್ ಜಾರಿ ಮಾಡಿದ್ರು. ಆದ್ರೆ ಇಟ್ಟಿಗೆ ಭಟ್ಟಿ ನಡೆಸ್ತಿರೋ ಮಾಲೀಕರು ಕ್ಯಾರೇ ಅಂದಿರಲಿಲ್ಲ. ಹೀಗಾಗಿ, ಸಮಯಕ್ಕಾಗಿ ಕಾದಿದ್ದ ತಹಶೀಲ್ದಾರ್ ಇವತ್ತು ತಮ್ಮ ಬೆಟಾಲಿಯನ್ ಜೊತೆ ಫಿಲ್ಡಿಗೆ ಇಳಿದು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾಗಿದ್ರು. ನಾಲ್ಕೈದು ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸುತ್ತಿದ್ದಾಗ ಮಾಲೀಕರು ಎಚ್ಚೆತ್ತುಕೊಂಡು ನಾವೇ ತೆರವು ಮಾಡ್ತಿವಿ ಅಂತಾ ಭರವಸೆ ನೀಡಿದ ಕೂಡಲೇ ಕಾರ್ಯಾಚರಣೆಗೆ ವಿರಾಮ ನೀಡಲಾಯ್ತು. ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ಸೇರಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಒಟ್ನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಶಂಕರ್...

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ..!

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಮುಂಡಗೋಡಿನಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ರಮೇಶ ಗಂಗಪ್ಪಾ ಮುಗಳಕಟ್ಟಿ(26) ಮಂಜುನಾಥ ಸುಬಾಸ ಸೋಮನಕೊಪ್ಪ (32) ಎಂಬುವ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮುಂಡಗೋಡ ಪಟ್ಟಣದ ಕಲಾಲ್ ಓಣಿಯ ಪೀರಸಾಬ ಅಬ್ದುಲಖಾದರ ಬಂಗ್ಲೆವಾಲೆ ಎಂಬುವವರ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಲ್ಲಿಸಿದ್ದ, ಹೀರೋ ಸ್ಪ್ಲೆಂಡರ್ ಫ್ಲಸ್ ಬೈಕ್ ನ್ನು ದಿನಾಂಕ 16.05.2023 ರಂದು ಹಾಡಹಗಲೇ ಎತ್ತಂಗಡಿ ಮಾಡಿದ್ದರು. ಹೀಗಾಗಿ ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಮುಂಡಗೋಡ ಪೊಲೀಸರು, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ, ಜಯಕುಮಾರ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್. ರವರ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಎಸ್.ಸಿಮಾನಿ, ಪಿಎಸ್ಐ ಯಲ್ಲಾಲಿಂಗ ಕುನ್ನೂರು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಹೀಗಾಗಿ ಈ...

ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಕತೆ ಏನಾಯ್ತು..? ಎಸಿಎಫ್ ಸಾಹೇಬ್ರು ಆ ” ಚಕ್ಕಂಬಕ್ಕಳ” ಫಾರೆಸ್ಟರ್ ನ ರಕ್ಷಣೆಗೆ ನಿಂತ್ರಾ..?

ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಕತೆ ಏನಾಯ್ತು..? ಎಸಿಎಫ್ ಸಾಹೇಬ್ರು ಆ ” ಚಕ್ಕಂಬಕ್ಕಳ” ಫಾರೆಸ್ಟರ್ ನ ರಕ್ಷಣೆಗೆ ನಿಂತ್ರಾ..?

ಅಬ್ಬಬ್ಬಾ ಆ ಫಾರೆಸ್ಟರ್ ಅಂದ್ರೆ ಕಾತೂರು ಭಾಗದಲ್ಲಿ ಅದೇಂತದ್ದೋ ಅಂತೆ, ಕಂತೆ..! ಆತನ ಹಿಂದೆ ಸಿಕ್ಕಾಪಟ್ಟೆ ದೊಡ್ಡವರಿದ್ದಾರಂತೆ. ಹೀಗಾಗಿ, ಆತನ ಯಡವಟ್ಟುಗಳು, ದಂಧೆಗಳನ್ನೇಲ್ಲ ಕಣ್ಣಾರೆ ಕಂಡ್ರೂ ಏನೂ ಮಾಡದ ಸ್ಥಿತಿಯಲ್ಲಿ ಕುಳಿತಿದ್ದಾರಂತೆ ಮುಂಡಗೋಡಿನ ಎಸಿಎಫ್ ಸಾಹೇಬಾ..! ನಿಮಗೆ ನೆನಪಿರಬಹುದು, ಕಳೆದ 2022 ರ ಅಕ್ಟೋಬರ್ ತಿಂಗಳಲ್ಲೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಅದೊಂದು ಸುದ್ದಿ ಪ್ರಸಾರ ಮಾಡಿತ್ತು. ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದ್ದ ಸಂಗತಿಯದು. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ವರ್ಷದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಅದು. ಘಟನೆ ನಡೆದು ಒಂದೂವರೇ ವರ್ಷವಾದ್ರೂ ಘಟನೆ ಬಗ್ಗೆ ಯಾವೊಂದೂ ಕ್ರಮ ಕೈಗೊಳ್ಳದೇ ಇಡೀ ಕೇಸನ್ನೇ ಇಡಿ ಇಡಿಯಾಗಿ ತಿಪ್ಪೆ ಸಾರಿಸುವ ಹಂತದಲ್ಲಿದ್ದಾರೆ ಇಲ್ಲಿನ ಹಿರಿಯ ಅಧಿಕಾರಿಗಳು..! ಅಷ್ಟಕ್ಕೂ ನಡೆದದ್ದೇನು..? ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ...

ಮುಂಡಗೋಡ ಬಂಕಾಪುರ ರಸ್ತೆಯಲ್ಲಿ ಬೈಕ್ ಸ್ಕಿಡ್, ಮದುವೆಗೆ ಹೋಗಿದ್ದ ಮೂವರು ಯುವಕರಿಗೆ ಗಂಭೀರ ಗಾಯ..!

ಮುಂಡಗೋಡ ಬಂಕಾಪುರ ರಸ್ತೆಯಲ್ಲಿ ಬೈಕ್ ಸ್ಕಿಡ್, ಮದುವೆಗೆ ಹೋಗಿದ್ದ ಮೂವರು ಯುವಕರಿಗೆ ಗಂಭೀರ ಗಾಯ..!

 ಮುಂಡಗೋಡ ತಾಲೂಕಿನ ಬಂಕಾಪುರ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಬೈಕಗ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮದುವೆಗೆಂದು ಹೊರಟಿದ್ದವರಿಗೆ ಆಘಾತವಾಗಿದೆ. ಗಾಯಗೊಂಡವರನ್ನು ಮುಂಡಗೋಡ ಪಟ್ಟಣದ ಇಂದಿರಾನಗರದ ಇಜಾಜ್, ಜಿಲಾನಿ, ಹಾಗೂ ಮಲ್ಲಿಕ್ ಅಂತಾ ಗುರುತಿಸಲಾಗಿದೆ. ಮೂವರಿಗೂ ಗಂಭೀರ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ‌.

ನ್ಯಾಸರ್ಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಅಂದಾ ದರ್ಬಾರ್..? ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಯಾಕೆ ಅಂತಾ ಕೇಳಿದ್ರೆ ಹೀಗೆ ಮಾಡೋದಾ..?

ನ್ಯಾಸರ್ಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಅಂದಾ ದರ್ಬಾರ್..? ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಯಾಕೆ ಅಂತಾ ಕೇಳಿದ್ರೆ ಹೀಗೆ ಮಾಡೋದಾ..?

  ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿರೋ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಬೇಕಾಬಿಟ್ಟಿ ವರ್ತನೆಗೆ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ತಮಗಿಷ್ಟ ಬಂದಂತೆ ಹಣ ವಸೂಲಿ ಮಾಡುತ್ತಿರೋ ಕೆಲವು ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ದುರಂತ ಅಂದ್ರೆ, ಇಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲು ಹೋದ ಸಮಾಜಿಕ ಕಾರ್ಯಕರ್ತನಿಗೇ ಅವಾಚ್ಯವಾಗಿ ನಿಂದಿಸಿದ್ದಾರಂತೆ ಇಲ್ಲಿನ ಶಿಕ್ಷಕರು..! ಆಗಿದ್ದೇನು..? ಅಂದಹಾಗೆ, ನ್ಯಾಸರ್ಗಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಅಂತಾ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿಯವರನ್ನು ಕರೆದೊಯ್ದು ಹೀಗ್ಯಾಕೆ ಮಾಡ್ತಿದ್ದಿರಿ ಅಂತಾ ಕೇಳಿದ್ರೆ, ಅಲ್ಲಿರೋ ಶಿಕ್ಷಕನೊಬ್ಬ ಬಾಯಿಗೆ ಬಂದಂತೆ‌ ನಿಂದಿಸಿದ್ದಾನೆ ಅಂತಾ ಆರೋಪಿಸಲಾಗಿದೆ. ಹೀಗಾಗಿ, ಆಕ್ರೋಸಗೊಂಡ ಸಾಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿ, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಅರೆನಗ್ನ ಪ್ರತಿಭಟನೆ.‌! ಇನ್ನು ಶಿಕ್ಷಕರ ಬೇಜವಾಬ್ದಾರಿ ಖಂಡಿಸಿರೋ ಅಯ್ಯಪ್ಪ ಭಜಂತ್ರಿ, ಅವಾಚ್ಯವಾಗಿ ನಿಂದಿಸಿರೋ ಕಾರಣಕ್ಕೆ ಆಕ್ರೋಶಗೊಂಡು, ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ತಕ್ಷಣವೇ...

ದಲಿತರಿಗೆ ಸ್ಮಶಾನ ಭೂಮಿ ನೀಡಲು ಆಗ್ರಹ, ಹಿರೇಹರಕುಣಿ ಗ್ರಾಮದ ದಲಿತರಿಂದ ಪ್ರತಿಭಟನೆ..!

ದಲಿತರಿಗೆ ಸ್ಮಶಾನ ಭೂಮಿ ನೀಡಲು ಆಗ್ರಹ, ಹಿರೇಹರಕುಣಿ ಗ್ರಾಮದ ದಲಿತರಿಂದ ಪ್ರತಿಭಟನೆ..!

 ಧಾರವಾಡ: ಕುಂದಗೋಳ ತಾಲೂಕಿನ ಹಿರೇಹರಕುಣಿ ದಲಿತರಿಗೆ ಸ್ಮಶಾನ ಭೂಮಿ ನೀಡಲು ಅಗ್ರಹಿಸಿ ಹಿರೇಹರಕುಣಿ ಗ್ರಾಮದ ದಲಿತ ಕುಟುಂಬಳಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಈ ಹಿಂದಿನ ರುದ್ರಭೂಮಿಯಲ್ಲಿ ದಲಿತರಿಗೆ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡುತ್ತಿಲ್ಲ. ಬೇರೆ ಸಮುದಾಯದ ಮುಖಂಡರು ದಲಿತರ ಅಂತ್ಯಕ್ರಿಯೆ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದಾಗಿ ದಲಿತ ಕುಟುಂಬಗಳು ಸ್ಮಶಾನ ಭೂಮಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ಈ ಕೂಡಲೇ ರಾಜ್ಯ ಸರ್ಕಾರ ಡಿಸಿಯವರೆಗೆ ಸೂಕ್ತ ನಿರ್ದೇಶನ ನೀಡಿ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು ಅಂತಾ ಆಗ್ರಹಿಸಿರೋ ದಲಿತ ಸಮುದಾಯದವರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದಾರೆ. ಸ್ಮಶಾನ ಭೂಮಿ ಸಿಗದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಲಾರಿ- ಕಾರು ನಡುವೆ ಭೀಕರ ಅಪಘಾತ, ಎರಡು ಮಕ್ಕಳೂ ಸೇರಿ 6 ಜನ ಸ್ಥಳದಲ್ಲೇ ಸಾವು..!

ಲಾರಿ- ಕಾರು ನಡುವೆ ಭೀಕರ ಅಪಘಾತ, ಎರಡು ಮಕ್ಕಳೂ ಸೇರಿ 6 ಜನ ಸ್ಥಳದಲ್ಲೇ ಸಾವು..!

ಕೊಪ್ಪಳದ ಕುಷ್ಟಗಿ ಬಳಿ ಭೀಕರ ಅಪಘಾತಾಗಿದೆ. ಪರಿಣಾಮ ಸ್ಥಳದಲ್ಲೇ 6 ಜನ ಸಾವು ಕಂಡಿದ್ದಾರೆ. ಕುಷ್ಟಗಿಯ ಕಲಕೇರಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಇಂಡಿಕಾ ಲಾರಿ ಮಧ್ಯೆ ಅಪಘಾತವಾಗಿದೆ. ಇಂಡಿಕಾ ಕಾರಿನಲ್ಲಿದ್ದ ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 6 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮೃತರಿಗೆ ತಲಾ 2 ಲಕ್ಷ ಪರಿಹಾರ..! ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಸಂಭವಿಸಿದ ಕಾರು-ಲಾರಿ ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

error: Content is protected !!