Home BIG BREAKING

Category: BIG BREAKING

Post
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಅವಾಂತರಗಳು ಚಾಲ್ತಿಯಲ್ಲಿವೆ. ಅದ್ರಲ್ಲೂ, ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಹೀಗಾಗಿ, ಕರಾವಳಿ ಭಾಗದ ಎರಡು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯ ಕಾರಣಕ್ಕಾಗಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹೊನ್ನಾವರ, ಕುಮಟಾ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 9 ರಂದು ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

Post
ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!

ಹಿರೇಕೆರೂರಿನ, ಮಾಜಿ ಸಚಿವ ಬಿಸಿ ಪಾಟೀಲ್‌ ಅಳಿಯ ಪ್ರತಾಪಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರ್ ನಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಾಪಕುಮಾರನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು * ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ. * ದಾವಣಗೆರೆ ತಾಲೂಕಿನ ಕತ್ತಲಗೇರಿ ಗ್ರಾಮದ ನಿವಾಸಿ. * ಕಳೆದ...

Post
ಶಿಗ್ಗಾವಿ “ಕೈ” ಟಿಕೆಟ್ ಗಾಗಿ ನಿಲ್ಲದ ರಂಪಾಟ, ಇಂದು ಮತ್ತೆ ಉಸ್ತುವಾರಿಗಳ ಜತೆ ಹೈ ವೋಲ್ಟೇಜ್ ಮೀಟಿಂಗ್

ಶಿಗ್ಗಾವಿ “ಕೈ” ಟಿಕೆಟ್ ಗಾಗಿ ನಿಲ್ಲದ ರಂಪಾಟ, ಇಂದು ಮತ್ತೆ ಉಸ್ತುವಾರಿಗಳ ಜತೆ ಹೈ ವೋಲ್ಟೇಜ್ ಮೀಟಿಂಗ್

 ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ನಲ್ಲಿ ಬಣಗಳ ತಿಕ್ಕಾಟ ಮಿತಿ ಮೀರಿದೆ. ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರ ಬಹುತೇಕ ಕಗ್ಗಂಟಾಗಿದೆ. ಹೀಗಾಗಿ, ಇಂದು ಟಿಕೆಟ್ ಹಂಚಿಕೆ ಉಸ್ತುವಾರಿ ಸಮಿತಿ ಶಿಗ್ಗಾವಿಗೆ ಬಂದಿಳಿಯಲಿದೆ. ಸಚಿವ ಈಶ್ವರ ಖಂಡ್ರೆ ನೇತೃತ್ವದ ಸಮಿತಿಯಿಂದ ಶಿಗ್ಗಾವಿಯಲ್ಲಿ ಬಡಿದಾಟದ ಬಣಗಳ ಜೊತೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಿಕ್ಕಿಯಾಗಿದೆ. ಪೊಲೀಸ್ ಬಂದೋಬಸ್ತ್..! ಅಸಲು, ಎರಡು ದಿನಗಳ ಹಿಂದಷ್ಟೇ ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಸಚಿವ ಸತೀಶ್ ಜಾರಕೀಹೊಳಿ ನೇತೃತ್ವದಲ್ಲಿ ಸಭೆಯೊಂದು ನಡೆದಿತ್ತು. ಆ ವೇಳೆ ಇಲ್ಲಿನ...

Post
ಜಾಗ್ರತೆಯಿರಲಿ..! ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿ..!?

ಜಾಗ್ರತೆಯಿರಲಿ..! ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿ..!?

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಗೆ ಮೊದಲ ಬಲಿಯಾಗಿದೆ. ಅಂಕೋಲದ ಬಾವಿಕೇರಿಯ ನಿವಾಸಿ ಹರೇ ರಾಮ್ ಗೋಪಾಲ್ ಭಟ್ (32) ಡೆಂಗ್ಯೂ ನಿಂದ? ಸಾವನ್ನಪ್ಪಿದ್ದಾರೆ. ಒಂದು ವಾರದ ಹಿಂದೆ ಡೆಂಗ್ಯೂ ನಿಂದ ಬಳಲಿ, ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಹರೇ ರಾಮ್ ಭಟ್, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ 119 ಜನರಲ್ಲಿ ಡೆಂಗ್ಯು ಪತ್ತೆ‌ಯಾಗಿದೆ.

Post
ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಅಪರಾಧಿ ಅಲ್ಲ: ದರ್ಶನ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್

ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಅಪರಾಧಿ ಅಲ್ಲ: ದರ್ಶನ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್

ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ದರ್ಶನ್ ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆ. ದರ್ಶನ್ ಬಗ್ಗೆ ಪೋಸ್ಟ್ ಹಾಕಿದ ಮಾಜಿ ಸಂಸದೆ ಸುಮಲತಾ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಘಟನೆ ಬಗ್ಗೆ ಸುದೀರ್ಘ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿರುವ ಸುಮಲತಾ ಅಂಬರೀಶ್, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ...

Post
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅರ್ಭಟ, ಹಲವು ಶಾಲೆಗಳಿಗೆ ರಜೆ ಘೋಷಣೆ..! ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅರ್ಭಟ, ಹಲವು ಶಾಲೆಗಳಿಗೆ ರಜೆ ಘೋಷಣೆ..! ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ..!

 ಉತ್ತರ ಕನ್ನಡದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಪರಿಣಾಮ, ಹೊನ್ನಾವರ ತಾಲೂಕಿನ ಗುಂಡಬಾಳ ನದಿಯ ನೆರೆ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಅಧಿಕಗೊಳ್ಳುತ್ತಿದೆ. ಹೀಗಾಗಿ, ಹೊನ್ನಾವರ ತಾಲೂಕಿನ ಕೆಲವು ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ. ಹೊನ್ನಾವರ ತಾಲೂಕಿನ ಜನತಾ ವಿದ್ಯಾಲಯ ಅನಿಲಗೋಡ್, ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ, ಗುಂಡ ಬಾಳ ನಂ-2, ಗುಂಡಿ ಬೈಲ್ ನಂ 2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ ವಲ್ಕಿ, ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ...

Post
ಶಿಗ್ಗಾವಿಯಲ್ಲಿ ಕೈ ಟಿಕೆಟ್ ಗಾಗಿ ಜೋರಾದ ಕಿತ್ತಾಟ, ಐಬಿಯಲ್ಲಿ ಜಾರಕಿಹೊಳಿ ಆಗಮನಕ್ಕೂ ಮುನ್ನವೇ ಕಿತ್ತಾಡಿಕೊಳ್ತಿದಾರೆ ಕೈ ಮುಖಂಡರು..!

ಶಿಗ್ಗಾವಿಯಲ್ಲಿ ಕೈ ಟಿಕೆಟ್ ಗಾಗಿ ಜೋರಾದ ಕಿತ್ತಾಟ, ಐಬಿಯಲ್ಲಿ ಜಾರಕಿಹೊಳಿ ಆಗಮನಕ್ಕೂ ಮುನ್ನವೇ ಕಿತ್ತಾಡಿಕೊಳ್ತಿದಾರೆ ಕೈ ಮುಖಂಡರು..!

 ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೈ ಟಿಕೆಟ್ ಗಾಗಿ ಇಡೀ ಕ್ಷೇತ್ರದ ಕಾಂಗ್ರೆಸ್ ಪಾಳಯ ಬಹುತೇಕ ಇಬ್ಬಾಗವಾದಂತಾಗಿದೆ. ಅದ್ಯಾವುದೋ ಕಾಣದ ಕೈ ಇಲ್ಲಿನ ಕಾಂಗ್ರೆಸ್ ಗೆ ಕೂಸು ಹುಟ್ಟೊಕೆ ಮುಂಚೆಯೇ ಕುಲಾಯಿ ಹೊಲಿಸೋ ಮೂಡ್ ಕ್ರಿಯೇಟ್ ಮಾಡಿ ಮಜಾ ತಕ್ಕೊತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಅಂದಹಾಗೆ, ಇವತ್ತು ಸಚಿವ ಸತೀಶ ಜಾರಕೀಹೊಳಿ ಶಿಗ್ಗಾವಿಗೆ ಆಗಮಿಸುತ್ತಿದ್ದಾರೆ. ಆದ್ರೆ, ಅದಕ್ಕೂ ಮೊದಲು ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿಯೇ ನಡೆದು ಹೋಗಿದೆ. ಜಾರಕಿಹೋಳಿ ಸಾಹೇಬರ...

Post
ಲಂಚಕ್ಕಾಗಿ ಕೈಚಾಚಿದ್ದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ..!

ಲಂಚಕ್ಕಾಗಿ ಕೈಚಾಚಿದ್ದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ..!

ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಖಾತಾ ಬದಲಾವಣೆಗಾಗಿ ವ್ಯಕ್ತಿ ಓರ್ವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಪಂಚಾಯತದಲ್ಲಿ ನಡೆದಿದೆ. ಪಟ್ಟಣ ಪಂಚಾಯತ ಅಧಿಕಾರಿ ಪ್ರವೀಣ ಕುಮಾರ ಎಂಬುವವರು ಚಂದ್ರಹಾಸ ಎಂಬುವವರ ಬಳಿ ಜಮೀನಿಗೆ ಸಂಬಂಧಿಸಿ A ಖಾತಾ ಬದಲಾವಣೆಗಾಗಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೊದಲ ಹಂತವಾಗಿ ಚಂದ್ರಹಾಸ ಅವರು ಇಂದು 60ಸಾವಿರ ನಗದು ಕೊಡುತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಯ ವೇಳೆ...

Post
ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಡಾ. ವಿಷ್ಣುವರ್ಧನ್ ವರ್ಗ, ನೂತನ ಎಸ್ಪಿ ಯಾರು ಗೊತ್ತಾ..?

ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಡಾ. ವಿಷ್ಣುವರ್ಧನ್ ವರ್ಗ, ನೂತನ ಎಸ್ಪಿ ಯಾರು ಗೊತ್ತಾ..?

ಕಾರವಾರ: ಉತ್ತರ ಕನ್ನಡದ ಎಸ್ಪಿ ಡಾ.ವಿಷ್ಣುವರ್ಧನ್ ವರ್ಗವಾಗಿದ್ದಾರೆ. ನೂತನ ಎಸ್ಪಿಯಾಗಿ ನಾರಾಯಣ್ ಎಂ. ಅವರನ್ನು ಸರ್ಕಾರ ನೇಮಕ ಮಾಡಿದೆ‌. ಅಂದಹಾಗೆ, ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದ್ರಲ್ಲಿ, ಉತ್ತರಕನ್ನಡ ಎಸ್ಪಿ ಆಗಿದ್ದ ಡಾ. ವಿಷ್ಣುವರ್ಧನ್ ಅವರನ್ನ ಸಹ ವರ್ಗಾವಣೆ ಮಾಡಲಾಗಿದೆ.   ಉತ್ತರಕನ್ನಡ ಹಾಲಿ ಎಸ್ಪಿ ಆಗಿದ್ದ ವಿಷ್ಣುವರ್ಧನ್ ಅವರನ್ನ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ನಾರಾಯಣ್ ಎಂ ಅವರನ್ನ ನೇಮಕ ಮಾಡಲಾಗಿದೆ. ಇನ್ನು, ನಾರಾಯಣ್ ಎಂ. ರವರು...

Post
ಅಂದರ್ ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ: ಇಸ್ಪೀಟು ಆಡುತ್ತಿದ್ದ ಏಳೇಂಟು ಜನ ನೀರು ಪಾಲು..? ಓರ್ವನ ಶವ ಪತ್ತೆ, ಉಳಿದವರು ನಾಪತ್ತೆ..!

ಅಂದರ್ ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ: ಇಸ್ಪೀಟು ಆಡುತ್ತಿದ್ದ ಏಳೇಂಟು ಜನ ನೀರು ಪಾಲು..? ಓರ್ವನ ಶವ ಪತ್ತೆ, ಉಳಿದವರು ನಾಪತ್ತೆ..!

ವಿಜಯಪುರ: ಅಂದರಬಾಹರ್( ಇಸ್ಪೀಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ಪರಿಣಾಮ, ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಬರೋಬ್ಬರಿ 7 ರಿಂದ 8 ಜನರು ನೀರು ಪಾಲಾಗಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ. ಪೊಲೀಸರ ದಾಳಿಗೆ ಹೆದರಿ ಎಸ್ಕೇಪ್ ಆಗಲು ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ತೆರಳುತ್ತಿದ್ದಾಗ, ತೆಪ್ಪ ಮುಗುಚಿ ಬಿದ್ದು ಏಳೆಂಟು ಜನರು ನೀರುಪಾಲು ಆಗಿದ್ದಾರೆ ಎನ್ನಲಾಗಿದೆ. ಅದರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೊಲಾರ್ ಮೂಲದ ಪುಂಡಲೀಕ ಯಂಕಂಚಿ(35) ಅಂತಾ ಗುರುತಿಸಲಾಗಿದೆ....

error: Content is protected !!