Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಕೂರ್ಲಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ..!

ಕೂರ್ಲಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ..!

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರ್ಲಿ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಜಾನುವಾರು ಪ್ರದರ್ಶನದಲ್ಲಿ ಉತ್ತಮ ಜಾನುವಾರುಗಳಿಗೆ ಬಹುಮಾನ ನೀಡಲಾಯಿತು. ಇನ್ನು ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ, ಲಸಿಕೆ ಹಾಕಿಸಬೇಕು. ಜಾನುವಾರುಗಳ ಆರೋಗ್ಯ ಕಾಪಾಡಲು ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಜಾನುವಾರುಗಳಿಗೆ ಕಿವಿಓಲೆ(ಗುರುತಿನ ಸಂಖ್ಯೆ) ಹಾಕಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಜಾನುವಾರುಗಳ ಸಂತತಿ ಹೆಚ್ಚಾದರೆ, ರೈತರಿಗೆ ಅನುಕೂಲವಾಗುತ್ತದೆʼ ಅಂತಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು....

Post
ಅಗಡಿ ಚೆಕ್ ಪೊಸ್ಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಒದ್ದಾಡಿದ ಸವಾರ, ಆಸ್ಪತ್ರೆಗೆ ರವಾನೆ..!

ಅಗಡಿ ಚೆಕ್ ಪೊಸ್ಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಒದ್ದಾಡಿದ ಸವಾರ, ಆಸ್ಪತ್ರೆಗೆ ರವಾನೆ..!

ಮುಂಡಗೋಡ; ತಾಲೂಕಿನ ಕಲಘಟಗಿ ರಸ್ತೆಯ ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟ‌ನೆ ನಡೆದಿದೆ. ಕಲಘಟಗಿ ತಾಲೂಕಿನ ಬೆಂಡ್ಲಗಟ್ಟಿ ಗ್ರಾಮದವನು ಅಂತಾ ಹೇಳಲಾಗಿರೋ ವ್ಯಕ್ತಿ ಬೈಕ್ ನಿಂದ ಬಿದ್ದು ಒದ್ದಾಡುತ್ತಿದ್ದಾನೆ. ಈ ವೇಳೆ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕಾಲ್ ಮಾಡಿ ಗಾಯಾಳು ವ್ಯಕ್ತಿಯ ಚಿಕಿತ್ಸೆಗೆ ರವಾನಿಸಲು ರೆಡಿಯಾಗಿದ್ದಾರೆ. ಆದ್ರೆ ಇದೇ ವೇಳೆ ಪೊಲೀಸರ ವಾಹನ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆ.

Post
ಮುಂಡಗೋಡ ಯುವಕರ ಮಾನವೀಯ ಕಾರ್ಯ..!

ಮುಂಡಗೋಡ ಯುವಕರ ಮಾನವೀಯ ಕಾರ್ಯ..!

ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಚರ್ಮ ರೋಗದಿಂದ ಬಳಲುತ್ತಿದ್ದ ಆಕಳಿಗೆ ಇಲ್ಲಿನ ಯುವಕರ ಬಳಗ ಚಿಕಿತ್ಸೆ ನೀಡಿ ಮಾನವೀಯತೆ ತೋರಿದೆ. ತೀವ್ರವಾದ ಚರ್ಮರೋಗದಿಂದ ಬಳಲುತ್ತಿದ್ದ ಆಕಳು ಪರದಾಡುತ್ತಿತ್ತು. ಇದನ್ನು ಕಂಡ ಯುವಕರ ಪಡೆ ತಕ್ಷಣವೇ ಆಕಳನ್ನು ಹಿಡಿದು ಕಟ್ಟಿ, ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರ ಕರೆಗೆ ಓಗೋಟ್ಟು ತಕ್ಷಣವೇ ಹಾಜರಾದ ಪಶು ವೈದ್ಯ ಅವಿನಾಶ್ ಪೂಜಾರ್ ಕರ್ತವ್ಯ ಪ್ರಜ್ಞೆ ತೋರಿದ್ದಾರೆ. ಕಳೆದ ವಾರವಷ್ಟೇ ಅನಾರೋಗ್ಯದಿಂದ ಬಳಲಿ ನಿತ್ರಾಣಗೊಂಡಿದ್ದ ಆಕಳ ಕರುವಿಗೆ ಚಿಕಿತ್ಸೆ ನೀಡಿದ್ದ ಇದೇ...

Post
ಇಂದೂರಿನಲ್ಲಿ ನೇಣಿಗೆ ಶರಣಾದ 17 ವರ್ಷದ ಯುವತಿ..!

ಇಂದೂರಿನಲ್ಲಿ ನೇಣಿಗೆ ಶರಣಾದ 17 ವರ್ಷದ ಯುವತಿ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ 17 ವರ್ಷದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ.ಇಂದು ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎನ್ನಲಾಗಿದೆ. ರೂಪಾ ಬಸವರಾಜ್ ಹಳಿಯಾಳ (17) ಎಂಬ ಯುವತಿಯೇ ನೇಣಿಗೆ ಶರಣಾಗಿದ್ದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

Post
ಇಂದಿರಾನಗರ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರರು, ಇಬ್ಬರು ಗಂಭೀರ..!

ಇಂದಿರಾನಗರ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರರು, ಇಬ್ಬರು ಗಂಭೀರ..!

ಮುಂಡಗೋಡ: ತಾಲೂಕಿನ ಇಂದಿರಾನಗರ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ‌. ಮುಂಡಗೋಡ ಗಾಂಧಿ ನಗರದ ದುರ್ಗಪ್ಪ ಕೊರವರ್(25) ಎಂದು ಗುರುತಿಸಲಾಗಿದೆ‌. ಮತ್ತೋರ್ವ ಓಣಿಕೇರಿ ಗ್ರಾಮದವನು ಅಂತಾ ಮಾಹಿತಿ ಲಭ್ಯವಾಗಿದೆ. ಅಪಘಾತ ನಡೆದ ಕೆಲವೇ ಹೊತ್ತಲ್ಲಿ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Post
108 ಅಂಬ್ಯುಲೆನ್ಸ್ ನಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಡ್ಡಿಗೇರಿ ಮಹಿಳೆ..!

108 ಅಂಬ್ಯುಲೆನ್ಸ್ ನಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಡ್ಡಿಗೇರಿ ಮಹಿಳೆ..!

ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಡ್ಡಿಗೇರಿಯ ಸೋನುಬಾಯಿ ಜುಮ್ಮು ತೋರವತ್ ಎಂಬ ಮಹಿಳೆಯೇ ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಗೆ ಅಂತಾ ಸೋಮವಾರ ರಾತ್ರಿ ಮುಂಡಗೋಡ ತಾಲೂಕಾಸ್ಪತ್ರೆಗೆ 108 ಅಂಬ್ಯಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿಮದ್ಯೆ ಹೆರಿಗೆ ನೋವು ತೀವ್ರವಾಗಿದೆ. ಹೀಗಾಗಿ ಅಂಬ್ಯುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲಾಗಿದೆ. 108 ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ, ಚಾಲಕ ಪ್ರಕಾಶ್ ಬಾಗೇವಾಡಿ, ಆಶಾ ಕಾರ್ಯಕರ್ತೆ...

Post
ಇಂದೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ, ಸುಟ್ಟು ಕರಕಲಾದ ಭತ್ತದ ಬಣವಿ..!

ಇಂದೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ, ಸುಟ್ಟು ಕರಕಲಾದ ಭತ್ತದ ಬಣವಿ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಆಕಸ್ಮಿಕವಾಗಿ ಭತ್ತದ ಬಣ್ಣವಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ಭತ್ತ ಸುಟ್ಟು ಕರಕಲಾದ ಘಟನೆ ನಡೆದಿದೆ. ಚಂದ್ರಶೇಖರ್ ಅರ್ಕಸಾಲಿ ಎಂಬುವ ರೈತರಿಗೆ ಸೇರಿದ ಒಂದೂವರೇ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಬಣವಿಗೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಧಗ ಧಗನೆ ಹೊತ್ತಿ ಉರಿದಿದೆ. ಆಗ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಆಗಬಹುದಾದ ಮತ್ತಷ್ಟು ಹಾನಿಯನ್ನು ತಪ್ಪಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ ಭತ್ತ...

Post
ಅಂಬೇಡ್ಕರರಿಗೆ ಅವಮಾನ ಹಿನ್ನೆಲೆ: ಮುಂಡಗೋಡಿನಲ್ಲಿ ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಆಕ್ರೋಶ..!

ಅಂಬೇಡ್ಕರರಿಗೆ ಅವಮಾನ ಹಿನ್ನೆಲೆ: ಮುಂಡಗೋಡಿನಲ್ಲಿ ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಆಕ್ರೋಶ..!

ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಇಂದು ಸಿಡಿದೆದ್ದಿದ್ದವು. ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಡಾ.ಅಂಬೇಡ್ಕರರಿಗೆ ಅವಮಾನ ಮಾಡಿರೋ ಹಿನ್ನೆಲೆಯಲ್ಲಿ ಆ ನ್ಯಾಯಾಧೀಶರನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಾ ರವರ ಪ್ರತಿಕೃತಿ ದಹಿಸಿ ಆಕ್ರೊಶ ಹೊರಹಾಕಿದ್ರು. ಈ ವೇಳೆ ದಲಿತ ಸಂಘಟನೆಗಳು ತಾಲೂಕಿನ ಬಹುತೇಕ ಎಲ್ಲಾ ಮುಖಂಡರು ಹಾಜರಿದ್ದರು.

Post
ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..!

ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..!

ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..! ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ಶಾಶ್ವತ ರಸ್ತೆಯ ಸಮಸ್ಯೆ ಎದುರಾಗಿದೆ. ಹೀಗಾಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಗ್ರಾಮದ ರೈತರು ಮನವಿ ಸಲ್ಲಿಸಿರೊ ಹಿನ್ನೆಲೆಯಲ್ಲಿ, ಇಂದು ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ರು. ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ರೈತರೊಂದಿಗೆ ಚರ್ಚಿಸಿದ್ರು. ಸದ್ಯ ಕಬ್ಬಿನ ಕಟಾವು ಮಾಡಿ ಕಬ್ಬು ಸಾಗಿಸಲು ರಸ್ತೆಯ ಸಮಸ್ಯೆ...

Post
ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..!

ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..!

ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..! ಮುಂಡಗೋಡ: ಪಟ್ಟಣದ ಶಿವಾಜಿ ವೃತ್ತದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಅಸ್ವಸ್ಥಗೊಂಡು ಬಿದ್ದು ಒದ್ದಾಡುತ್ತಿದ್ದ ಆಕಳ ಕರುವನ್ನು ಯುವಕರು ಆರೈಕೆ‌ ಮಾಡಿದ್ದಾರೆ. ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಕರುವಿಗೆ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ತನ್ನ ಕಂದನಿಗೆ ತೀವ್ರ ಅನಾರೋಗ್ಯವಾಗಿದೆ ಅಂದು ಅರಿತ ಆಕಳು ಕರುವಿಗಾಗಿ ಗೋಳಾಡುತ್ತಿದ್ದ ದೃಷ್ಯ ಕಂಡು ಬಂತು.. ಈ ವೇಳೆ ಯುವಕರ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

error: Content is protected !!