ಇಂದೂರಿನಲ್ಲಿ ನೇಣಿಗೆ ಶರಣಾದ 17 ವರ್ಷದ ಯುವತಿ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ 17 ವರ್ಷದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ.ಇಂದು ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎನ್ನಲಾಗಿದೆ.

ರೂಪಾ ಬಸವರಾಜ್ ಹಳಿಯಾಳ (17) ಎಂಬ ಯುವತಿಯೇ ನೇಣಿಗೆ ಶರಣಾಗಿದ್ದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

error: Content is protected !!