ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರ್ಲಿ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಜಾನುವಾರು ಪ್ರದರ್ಶನದಲ್ಲಿ ಉತ್ತಮ ಜಾನುವಾರುಗಳಿಗೆ ಬಹುಮಾನ ನೀಡಲಾಯಿತು. ಇನ್ನು ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ, ಲಸಿಕೆ ಹಾಕಿಸಬೇಕು. ಜಾನುವಾರುಗಳ ಆರೋಗ್ಯ ಕಾಪಾಡಲು ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಜಾನುವಾರುಗಳಿಗೆ ಕಿವಿಓಲೆ(ಗುರುತಿನ ಸಂಖ್ಯೆ) ಹಾಕಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಜಾನುವಾರುಗಳ ಸಂತತಿ ಹೆಚ್ಚಾದರೆ, ರೈತರಿಗೆ ಅನುಕೂಲವಾಗುತ್ತದೆʼ ಅಂತಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.
ಪಶುವೈದ್ಯರಾದ ಡಾ.ಜಯಚಂದ್ರ ಕೆಂಪಶಿ, ಡಾ. ಪ್ರಸನ್ನ ಹೆಗಡೆ ರೈತರಿಗೆ ಮಾರ್ಗದರ್ಶನ ನೀಡಿದ್ರು. ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿಗಳಾದ ಸುರೇಶ್ ಡೋರಿ, ಮುತ್ತುರಾಜ ತಟ್ಟಿ, ಸಂತೋಷ ಅಡೂರು, ಮಹಮ್ಮದ್ ರಫೀಕ್ ಮರಗಡಿ, ಫಕ್ಕಿರೇಶ್ ನೆಗೋನಿ ಉಪಸ್ಥಿತರಿದ್ದರು.