ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಚರ್ಮ ರೋಗದಿಂದ ಬಳಲುತ್ತಿದ್ದ ಆಕಳಿಗೆ ಇಲ್ಲಿನ ಯುವಕರ ಬಳಗ ಚಿಕಿತ್ಸೆ ನೀಡಿ ಮಾನವೀಯತೆ ತೋರಿದೆ.

ತೀವ್ರವಾದ ಚರ್ಮರೋಗದಿಂದ ಬಳಲುತ್ತಿದ್ದ ಆಕಳು ಪರದಾಡುತ್ತಿತ್ತು. ಇದನ್ನು ಕಂಡ ಯುವಕರ ಪಡೆ ತಕ್ಷಣವೇ ಆಕಳನ್ನು ಹಿಡಿದು ಕಟ್ಟಿ, ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರ ಕರೆಗೆ ಓಗೋಟ್ಟು ತಕ್ಷಣವೇ ಹಾಜರಾದ ಪಶು ವೈದ್ಯ ಅವಿನಾಶ್ ಪೂಜಾರ್ ಕರ್ತವ್ಯ ಪ್ರಜ್ಞೆ ತೋರಿದ್ದಾರೆ.

ಕಳೆದ ವಾರವಷ್ಟೇ ಅನಾರೋಗ್ಯದಿಂದ ಬಳಲಿ ನಿತ್ರಾಣಗೊಂಡಿದ್ದ ಆಕಳ ಕರುವಿಗೆ ಚಿಕಿತ್ಸೆ ನೀಡಿದ್ದ ಇದೇ ಯುವಕರ ತಂಡ ಕರುವನ್ನು ಬದುಕಿಸಲು ಹರಸಾಹಸ ಪಟ್ಟಿತ್ತು. ಹೀಗಾಗಿ, ಮುಂಡಗೋಡಿನ ಯುವಕರ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ‌.

error: Content is protected !!