Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..!  ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..! ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಮುಂಡಗೋಡ ಪಟ್ಟಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೋಲ್ಡ್ ಸ್ಮಿತ್ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಭೂ ವ್ಯವಹಾರದಲ್ಲಿ ಆಗಿರೋ ದಗಲ್ಬಾಜಿಗೆ ಮನನೊಂದು ಸುಸೈಡ್ ಮಾಡಿಕೊಂಡಿದ್ದಾರೆ ಅಂತಾ ಮೃತನ ಪತ್ನಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಪರಿಣಾಮ ಹುಬ್ಬಳ್ಳಿಯ 6 ಜನರ ವಿರುದ್ಧ ಕೇಸು ದಾಖಲಾಗಿದೆ. ಜ್ಯುವೇಲ್ಲರಿ ಶಾಪ್ ಮಾಲೀಕ..! ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಜ್ಯುವೇಲ್ಲರಿ ಶಾಪ್ ನಡೆಸುತ್ತಿದ್ದ ಆಶ್ರಿತ್ ಮೋಹನ್ ವೇರ್ಣೇಕರ್(45) ಎಂಬುವವನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೂ ವ್ಯವಹಾರದಲ್ಲಿ ಮೋಸ..!...

Post
ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ್ ಶೇರಖಾನೆ ನೇಮಕ..!

ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ್ ಶೇರಖಾನೆ ನೇಮಕ..!

ಮುಂಡಗೋಡ : ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ ಶೇರಖಾನೆ ಅವರನ್ನು ನೇಮಕ ಮಾಡಲಾಗಿದೆ. ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಂಬಾ ಅವರು ಹಾಗೂ ಡಾ.ಬಿ.ಪುಷ್ಪ ಅಮರನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಇವರ ಆದೇಶದ ಮೇರೆಗೆ ಸಲ್ಮಾ ಕಿರಣ ಶೇರಖಾನೆ ಅವರನ್ನು ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಾತಿ ಮಾಡಲಾಗಿದೆ. ಅಖಿಲ ಭಾರತದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕಾಂಗ ಪಕ್ಷದ...

Post
ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ವಿಧಿವಶ..!

ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ವಿಧಿವಶ..!

ಕಾರವಾರ:ಮಾಜಿ ವಿಧಾನ ಪರಿಷತ್‌ ಸದಸ್ಯೆ ಶುಭಲತಾ ಅನ್ನೋಟಿಕರ್ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅನ್ನೋಟಿಕರ್ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು, ಫಲಕಾರಿಯಾಗದೆ ಇಂದು ಸಂಜೆ 5 ಘಂಟೆ 8 ನಿಮಿಷಕ್ಕೆ ವೇಳೆಗೆ ಶುಭಲತಾ ಅವರು ಮೃತಪಟ್ಟಿದ್ದಾರೆ. ಪತಿ ಶಾಸಕರಾಗಿದ್ದ ವಸಂತ್ ಅನ್ನೋಟಿಕರ್ ಹತ್ಯೆಯ ನಂತರ ಶುಭಲತಾ ಇಡೀ ಕುಟುಂಬದ ಜವಬ್ದಾರಿ ಹೊತ್ತಿದ್ದರು. ಕ್ಷೇತ್ರದಲ್ಲಿ ಅನ್ನೋಟಿಕರ್ ಅಭಿಮಾನಿಗಳ ಜೊತೆ ನಿಂತಿದ್ದ ಶುಭಲತಾರನ್ನ ವಿಧಾನ ಪರಿಷತ್‌...

Post
ಶಿರಸಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್..!

ಶಿರಸಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್..!

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ ಲೋಕಾಯುಕ್ತ ನ್ಯಾಯಾಲಯ ಒಂದು ವರ್ಷಗಳ ಕಠಿಣ ಸಜೆ ಹಾಗೂ ಐದು ಸಾವಿರ ರೂ ದಂಡ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆಯವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಅಂಗನವಾಡಿ ಕಾರ್ಯಕರ್ತೆ ಯಾಗಿ ಕೆಲಸ ಮಾಡುತ್ತಿದ್ದರು. ಜಿಪಂ...

Post
ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡಸಿ ಗಾಯಗೊಳಿಸಿದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆದಿದೆ. ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45)ಎಂಬವನೆ ಗಾಯಗೊಂಡ ರೈತನಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿನಿಂದ ಬಂದ ಕರಡಿಯೊಂದು ದಾಳಿ ನಡೆಸಿ ಹಿಂಬದಿ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ರೈತ ತೀವ್ರ ಚೀರಾಟ ನಡೆಸಿದಾಗ ಕರಡಿ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ರೈತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Post
ಮುಂಡಗೋಡ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ..!

ಮುಂಡಗೋಡ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ..!

ಮುಂಡಗೋಡಿನಲ್ಲಿ ಅಕ್ಟೊಬರ್ 16 ರಂದು ನಡೆಯುತ್ತಿರೋ ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಎಸ್. ಪಕ್ಕೀರಪ್ಪ ಆಯ್ಕೆಯಾಗಿದ್ದಾರೆ. ಹೀಗಾಗಿ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಕಾರ್ಯಕಾರಿ ಸಮಿತಿಯಿಂದ ಅಧಿಕೃತ ಅಹ್ವಾನ ನೀಡಲಾಯಿತು. ತಾಲೂಕಾ ಕಸಾಪ ಅಧ್ಯಕ್ಷ ವಸಂತ ಕೋಣಸಾಲಿ ತಮ್ಮ ಸದಸ್ಯರುಗಳೊಂದಿಗೆ ಸೇರಿ ಎಸ್. ಪಕ್ಕೀರಪ್ಪ ರವರಿಗೆ ಸನ್ಮಾನಿಸಿ ಆಮಂತ್ರಣ ಕೋರಿದ್ರು. ಈ ವೇಳೆ ಎಸ್.ಬಿ.ಹೂಗಾರ, ಸುಭಾಸ್ ವಡ್ಡರ್, ಸಂಗಪ್ಪ ಕೋಳೂರು, ಶ್ರೀಮತಿ ಶಾರದಾ ರಾಠೋಡ, ಎಸ್. ಕೆ. ಬೋರಕರ, ಮಾಜಿ ಸಮ್ಮೇಳನ ಸರ್ವಾಧ್ಯಕ್ಷರು ಹಾಗೂ ಪತ್ರಕರ್ತರಾದ...

Post
ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರ : ಮನೆಯಲ್ಲಿದ್ದ ಪತಿ ಹಾಗೂ ಪತ್ನಿಯ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ‌ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಣಕೋಣ ಸಾಂತೇರಿ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ನಡೆದಿದೆ‌. ಘಟನೆಯಲ್ಲಿ ವಿನಾಯಕ ನಾಯ್ಕ(58) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ‌ ಇನ್ನೂ ಆತನ ಪತ್ನಿ ವಿಶಾಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದಾಳೆ. ಇವರಿಬ್ಬರೂ ಪುಣೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇತ್ತಿಚೇಗೆ ಹಣಕೋಣದ ಸಾಂತೇರಿ ದೇವರ ಜಾತ್ರೆಗಾಗಿ ಊರಿಗೆ ಬಂದಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ‌. ಇಂದು ಬೆಳಿಗ್ಗಿನ ಜಾವ 5ಗಂಟೆ...

Post
ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ..!

ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ..!

 ಮುಂಡಗೋಡ ತಾಲೂಕಿನ ಇಂದೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಆಯ್ಕೆಯಾಗಿದ್ದಾರೆ. ಅಸಲು, ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ ಆಗಿರೋದು ವಿಶೇಷ. ಶಶಿಧರ್ ಪರವಾಪುರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಂದಹಾಗೆ, 16 ಸದಸ್ಯ ಬಲದ ಇಂದೂರು ಗ್ರಾಮ ಪಂಚಾಯತಿಯಲ್ಲಿ ನಾಲ್ಕನೇ ಅವಧಿಗೆ ಫಕ್ಕಿರೇಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗ್ತಿದಾರೆ. ವಿಚಿತ್ರ ಅಂದ್ರೆ ಈ ಹಿಂದೆ ಇದೇ ಗ್ರಾಮ ಪಂಚಾಯತಿಯಲ್ಲಿ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಬೆಂಬಲಿತರು ಕೇವಲ ನಾಲ್ಕೇ ಸದಸ್ಯ ಬಲಕ್ಕೆ...

Post
ನಿರಂತರ ಮಳೆ: ಕಲಕೇರಿಯಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಗೆ ಗಾಯ..!ಕಿಮ್ಸ್ ಗೆ ರವಾನೆ.‌!

ನಿರಂತರ ಮಳೆ: ಕಲಕೇರಿಯಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಗೆ ಗಾಯ..!ಕಿಮ್ಸ್ ಗೆ ರವಾನೆ.‌!

ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ.. ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದ ಅಟೆಲ್ ಸಾಬ್ ಅತ್ತಾರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ನಿರಂತರ ಮಳೆಯ ಕಾರಣಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಪಕ್ಕದ ಮನೆಯ ಸಾತವ್ವ ಭೀಮಣ್ಣ ಬೆಂಗಳೂರ (50) ಎಂಬುವ ಮಹಿಳೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಸದ್ಯ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ...

Post
ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಶಿಧರ್.!

ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಶಿಧರ್.!

ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶಶಿಧರ್ ಪರವಾಪುರ ರಾಜೀನಾಮೆ ನೀಡಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಶಶಿಧರ್ ಮುಂದಿನ 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಿಸುವ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆ, ಕಳೆದ ಒಂದು ವರ್ಷದಿಂದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಶಿಧರ್ ಕಾರ್ಯನಿರ್ವಹಿಸಿದ್ದರು. ಒಳಗಿನ ಒಪ್ಪಂದದಂತೆ, ಒಂದು ವರ್ಷದ ನಂತರ ಅಧಿಕಾರ ಬಿಟ್ಟುಕೊಡುವ ಮಾತಾಗಿತ್ತು. ಹೀಗಾಗಿ, ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ರಾಜೀನಾಮೆ ನೀಡಿದ್ದಾರೆ....

error: Content is protected !!