Home ಅಪಘಾತ

Category: ಅಪಘಾತ

Post
ಹಳಿಯಾಳ ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಇಬ್ಬರು ಯುವಕರ ದಾರುಣ ಸಾವು..!

ಹಳಿಯಾಳ ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಇಬ್ಬರು ಯುವಕರ ದಾರುಣ ಸಾವು..!

ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಯುವಕ ಮಂಜುನಾಥ ಇಂಗಳಗಿ (23) ಎನ್ನುವಾತ ಕಾಳಗಿನಕೊಪ್ಪ ಗ್ರಾಮದಿಂದ ಮುರ್ಕವಾಡಕ್ಕೆ ತೆರಳುವ ರಸ್ತೆ ಮಧ್ಯೆ ಬೆಳಗಿನ ಜಾವ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಪ್ರಾಣ ಬಿಟ್ಟಿದ್ದು, ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ. ಎರಡನೇ ಘಟನೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯ ಅನತಿ ದೂರದಲ್ಲಿರುವ ಕಾರ್ಮೆಲ್ ಶಾಲೆಗೆ ತೆರಳುವ ತಿರುವಿನಲ್ಲಿಯ ರಾಜ್ಯ...

Post
ದಾವಣಗೇರೆ ಸಮೀಪ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, 7 ಜನರಿಗೆ ಗಂಭೀರ ಗಾಯ..!

ದಾವಣಗೇರೆ ಸಮೀಪ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, 7 ಜನರಿಗೆ ಗಂಭೀರ ಗಾಯ..!

ದಾವಣಗೆರೆ ನಗರ ಹೊರಭಾಗದ ರಾ.ಹೆದ್ದಾರಿ 48 ರಲ್ಲಿ ಭೀಕರ ಅಪಘಾತವಾಗಿದೆ. ಕಾರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿರುವ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಜನರಿಗೆ ಗಂಭೀರ ಗಾಯವಾಗಿದೆ. ಓವರ್ ಟೇಕ್ ಮಾಡುತ್ತಿದ್ಧಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿದೆ. ಪರಿಣಾಮ ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಹಾವೇರಿ ರಾಣೆಬೆನ್ನೂರು ಮೂಲದ ಅರುಣಕುಮಾರ್ ಶೆಟ್ಟರ್ ಹಾಗೂ ವಿಜಯಕ್ಕ ಶೆಟ್ಟರ್ ಮೃತ ದುರ್ದೈವಿಗಳು. ಇನ್ನುಳಿದಂತೆ...

Post
ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಉಮ್ಮಚಗಿ ರಸ್ತೆಯ ಅಟ್ಟಣಗಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ತಾಯಿ‌ ಮಗನಿಗೆ ಗಂಭೀರ ಗಾಯವಾಗಿದೆ. ಹಿಂದಿನಿಂದ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಅಟ್ಟಣಗಿ ಗ್ರಾಮದ ಶಿವಪುತ್ರ ರಾಮಣ್ಣ ಹೋತ್ನಳ್ಳಿ (45) ಹಾಗೂ ಆತನ ತಾಯಿ ದೇವಕ್ಕ ರಾಮಣ್ಣ ಹೋತ್ನಳ್ಳಿ(70) ಗಾಯಗೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಚಾಲಕ ಕೆಂಚೇಶ್ ತಕ್ಷಣ...

Post
ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!

ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!

ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಹಸಿಮೇವು ತಿಂದು ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಮೇವು ತಿಂದ ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುನಗುಂದ ಗ್ರಾಮದ ಬಸವರಾಜ್ ಗುರುಸಿದ್ದಪ್ಪ ಚಬ್ಬಿ ಎಂಬುವವರಿಗೆ ಸೇರಿದ ಸುಮಾರು 37 ಸಾವಿರ ರೂ. ಮೌಲ್ಯದ ಆಕಳು ಮತ್ತು ಕರು ದಾರುಣ ಸಾವು ಕಂಡಿದ್ದು ಆಘಾತ ತಂದಿದೆ. ಇನ್ನು ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಸಾವಿಗೆ ಕಾರಣವೇನು ಅಂತ ಪರಿಶೀಲನೆ ನಡೆಸಿದ್ದಾರೆ.

Post
ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

 ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್‍ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್‍ಯಾಕ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು...

Post
ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ  ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಮುಂಡಗೋಡ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಬಿದ್ದು ತೀವ್ರ ಗಾಯಗೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕಿ ಮೃತಪಟ್ಟಿದ್ದಾಳೆ. ಕಳೆದ ಶನಿವಾರ ನಡೆದಿದ್ದ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ,ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ(49) ಸುಟ್ಟು ಗಾಯಗೊಂಡು ಸದ್ಯ ಮೃತಪಟ್ಟಿರೋ ಮಹಿಳೆಯಾಗಿದ್ದಾಳೆ. ಕಳೆದ ಶನಿವಾರ ಬಿಸಿಯೂಟದ ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ ಬಡಿಸಲು ಅಣಿಯಾಗಿದ್ದಳು....

Post
ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೋಲಾ ಶಾಲೆಯ ಬಳಿ ಸರಣಿ ಅಪಘಾತವಾಗಿದೆ. ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಸಿದ್ದಪ್ಪ ಯಮುನಪ್ಪ ನಾಯ್ಕರ್ (45), ಎಂಬುವವನೇ ಗಂಭೀರ ಗಾಯಗೊಂಡಿ ವ್ಯಕ್ತಿಯಾಗಿದ್ದಾನೆ. ಮುಂಡಗೋಡಿನಿಂದ ಬೈಕ್ ಮೇಲೆ ಶಿರಸಿ ಮಾರ್ಗವಾಗಿ ಚಿಟಗೇರಿಗೆ ಹೋಗುತ್ತಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ಮತ್ತೊಂದು ಬೈಕಿಗೆ ಗುದ್ದಿ, ಆ ನಂತರ ಕಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ‌. ಹೀಗಾಗಿ, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಇನ್ನು, ಮಾಹಿತಿ ತಿಳಿದು 108...

Post
ಇಂದಿರಾನಗರ ಬಳಿ ಬೈಕಿಗೆ ಕಾರ್ ಡಿಕ್ಕಿ, ಕೊಪ್ಪ ಗ್ರಾಮದ ಬೈಕ್ ಸವಾರನಿಗೆ ಗಾಯ..!

ಇಂದಿರಾನಗರ ಬಳಿ ಬೈಕಿಗೆ ಕಾರ್ ಡಿಕ್ಕಿ, ಕೊಪ್ಪ ಗ್ರಾಮದ ಬೈಕ್ ಸವಾರನಿಗೆ ಗಾಯ..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಇಂದಿರಾನಗರ ಬಳಿ ಕಾರು ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನಿಗೆ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಪಾದದ ಮಾಂಸ ಹೊರ ಬಿದ್ದಿದೆ. ಹೀಗಾಗಿ, ಸದ್ಯ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ಕೊಪ್ಪ (ಇಂದೂರು) ಗ್ರಾಮದ ಬಸವರಾಜ್ ಹಡಪದ ಎಂಬುವವನೇ ಗಾಯಗೊಂಡಿರೋ ಬೈಕ್ ಸವಾರನಾಗಿದ್ದಾನೆ. ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಹೋಗುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿಯಾಗಿದೆ. ಹೀಗಾಗಿ, ಕಾರಿನ ಮುಂಬಾಗ ಕೂಡ...

Post
ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಕುಮಟಾ : ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ದಾರುಣ ಸಾವು ಕಂಡಿದ್ದಾರೆ. ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮೀಪ‌ ಘಟನೆ ನಡೆದಿದ್ದು, ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ‌ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ...

Post
ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

 ಬೆಳಗಾವಿ: ಕರೆಂಟ್ ಶಾಕ್ ಹೊಡೆದು ಮೂವರು ಸ್ಥಳದಲ್ಲಿ ಸಾವು ಕಂಡ ದಾರುಣ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲಿ ಸಾವು ಕಂಡಿದ್ದಾರೆ. ಈರಪ್ಪ ರಾಠೋಡ, ಶಾಂತವ್ವ ರಾಠೋಡ, 3 ನೇ ತರಗತಿ ಓದುತ್ತಿದ್ದ ಅನ್ನಪೂರ್ಣಾ ರಾಠೋಡ ಮೃತಪಟ್ಟ ದುರ್ದೈವಿಗಳು. ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದ ರಾಠೋಡ ಕುಟುಂಬ, ಏಕಕಾಲದಲ್ಲಿ ಮೂವರಿಗೆ ಕರೆಂಟ್ ಶಾಕ್ ಹೊಡೆದು ದುರ್ಘಟನೆ ನಡೆದಿದೆ. ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ...

error: Content is protected !!