Home ಅಪಘಾತ

Category: ಅಪಘಾತ

Post
ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ನಸುಕಿನ ಜಾವ ಭೀಕರ ಅಪಘಾತವಾಗಿದೆ. ಲಾರಿ ಹಾಗೂ ಕಾರು ಮುಖಾಮುಕಿ ಡಿಕ್ಕಿಯಾದ ಪರಿಣಾಮ, ಇನ್ನೇನು ಮದುವೆ ಆಗಬೇಕೆಂಬ ಕನಸು ಹೊತ್ತಿದ್ದ ಜೋಡಿ ಸ್ಥಳದಲ್ಲೇ ದಾರುಣ ಸಾವು ಕಂಡಿದೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮನೋಹರ್ (38), ಪ್ರಿಯಾಂಕಾ(23) ಸಾವನ್ನಪ್ಪಿದ ದುರ್ದೈವಿಗಳು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿಯ NH4 ರಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬಾಂಬೆಗೆ ಹೊರಟಿದ್ದ ಇವರ, ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಬೆಂಗಳೂರು...

Post
ತಡಸ ಕತ್ರಿ ಸಮೀಪದ ನೀರಲಗಿ ಕ್ರಾಸ್ ಬಳಿ ಕಾರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ರಾ.ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ..!

ತಡಸ ಕತ್ರಿ ಸಮೀಪದ ನೀರಲಗಿ ಕ್ರಾಸ್ ಬಳಿ ಕಾರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ರಾ.ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ..!

 ಶಿಗ್ಗಾವಿ ತಾಲೂಕಿನ ತಡಸ ಸಮೀಪದ ರಾ.ಹೆದ್ದಾರಿ 4 ರ ನೀರಲಗಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ, ಅಪಘಾತದಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4 ನ್ನು ತಡೆದು ಪ್ರತಿಭಟನೆ ನಡೆಸ್ತಿದಾರೆ. ಎನ್ ಎಮ್ ತಡಸ್ ನೀರಲಗಿ ಗ್ರಾಮದ ಚಿದಾನಂದ ನಿಂಗಪ್ಪ ಶೆರೆವಾಡ (55) ವಿರೂಪಾಕ್ಷಪ್ಪ ಕಾಳೆ(60) ಸ್ಥಳದಲ್ಲೇ ಸಾವು ಕಂಡ ದುರ್ದೈವಿಗಳಾಗಿದ್ದಾರೆ. ತಮ್ಮ ಗ್ರಾಮದಿಂದ ಬೆಳಿಗ್ಗೆ ಶಿಗ್ಗಾವಿಗೆ ತೆರಳಲು...

Post
ಉಗ್ನಿಕೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.‌.!

ಉಗ್ನಿಕೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.‌.!

ಮುಂಡಗೋಡ ತಾಲೂಕಿನ ಉಗ್ನಿಕೇರಿಯ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ‌. ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ‌.   ರಾಮು ಮಾಕು ಕೊಕರೆ (23) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಷ ಸೇವಿಸಿ ನರಳುತ್ತಿದ್ದ ವೇಳೆ ತಕ್ಷಣವೇ ಕುಟುಂಬಸ್ಥರು 108 ಅಂಬ್ಯಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ ಅಂಬ್ಯಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ...

Post
ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!

ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!

ಮುಂಡಗೋಡ ಪಟ್ಟಣದ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತವಾಗಿದೆ‌. ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಬರೋಬ್ಬರಿ 7 ಆಕಳುಗಳು ಸಜೀವ ದಹನವಾಗಿ ಸುಟ್ಟು ಕರಕಲಾಗಿವೆ. ಆದ್ರೆ, ಬೆಂಕಿ ತಗುಲಿದ್ದು ಹೇಗೆ ಅಂತಾ ಇನ್ನು ಖಚಿತತೆ ಸಿಕ್ಕಿಲ್ಲ. ಹಳೂರಿನ ಮಂಜುನಾಥ್ ನಾಗೇಶ್ ಶೇಟ್ ಎಂಬುವವರಿಗೆ ಸೇರಿದ, ದನದ ಕೊಟ್ಟಿಗೆಯಲ್ಲಿ ದುರಂತ ಸಂಭವಿಸಿದೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಇಡೀ ದನದ ಕೊಟ್ಟಿಗೆ ಆಕಳುಗಳ ಸಮೇತವಾಗಿಯೇ ಸುಟ್ಟು ಕರಕಲಾಗಿದೆ. ದುರಂತ ಅಂದ್ರೆ ಘಟನೆ ನಡೆದಾಗ ರಾತ್ರಿ ಯಾರಿಗೂ ಗಮನಕ್ಕೆ ಬಂದಿಲ್ಲ, ಬೆಳಿಗ್ಗೆಯಷ್ಟೇ ಘಟನೆ...

Post
ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!

ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಬಳಿಮಿನಿ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ‌. ಲಾರಿಯಡಿ ಚಾಲಕ ಸಿಲುಕಿಕೊಂಡಿದ್ದು ಚಾಲಕನ ರಕ್ಷಣಾ ಕಾರ್ಯ ನಡಿತಿದೆ. ಜಿಯೋ ಟವರ್ ಕೆಲಸ ಮಾಡಲು ಮುಂಡಗೋಡಿಗೆ ಬಂದಿದ್ದ ಕೃಷ್ಣ ಸಿಂಗನಳ್ಳಿ ಹಾಗೂ ಚಾಲಕ ಶಶಿ, ಶಿರಸಿ ಕಡೆಗೆ ಹೋಗುತ್ತಿದ್ದಾಗ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಮಿನಿ ಲಾರಿ ಪಲ್ಟಿಯಾಗಿದೆ‌. ಇನ್ನು ಘಟನೆಯಲ್ಲಿ ಚಾಲಕ ಲಾರಿಯಡಿಯಲ್ಲೇ ಸಿಲುಕಿಕೊಂಡಿದ್ದು, ನರಳುತ್ತಿದ್ದಾನೆ. ಹೀಗಾಗಿ, ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಟ್ಟರ್ ಸಹಾಯದಿಂದ ಚಾಲಕನನ್ನು ಹೊರತೆಗೆಯುವ...

Post
ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಹಾನಗಲ್: ತುಂಬಿ ಹರಿಯುತ್ತಿರೋ ಧರ್ಮಾ ನದಿಯಲ್ಲಿ ಎಮ್ಮೆ ಮೈತೊಳೆಯುವಾಗ ಕಾಲುಜಾತಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯಮನಪ್ಪ ಬಂಡಿವಡ್ಡರ (24)ಮೃತ ಯುವಕನಾಗಿದ್ದಾನೆ. ಎಮ್ಮೆ ಮೇಯಿಸಲು ಜಮೀನಿಗೆ ತೆರಳಿದ್ದ ಮೃತ ಯಮನಪ್ಪ, ಮರಳಿ ವಾಪಸ್ಸು ಮನೆಗೆ ಬರುವಾಗ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯುವಾಗ ದುರಂತ ಸಂಭವಿಸಿದೆ. ಕಾಲು ಜಾರಿ ನದಿಗೆ ಬಿದ್ದಾಗ ಈಜು ಬಾರದೆ ಯುವಕ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಡೂರು ಪೋಲಿಸರ ಭೇಟಿ ನೀಡಿ...

Post
ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!

ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿದ್ದಾನೆ. ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ಭೀಕರವಾಗಿ ಕೊಂದು ಹಾಕಿದೆ. ಮರಗಡಿ ಗೌಳಿ ದಡ್ಡಿಯ ಜಿಮ್ಮು ವಾಘು ತೋರವತ್(58) ಕರಡಿ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಅಂದಹಾಗೆ, ನಿನ್ನೆ ಗುರುವಾರ ಈತ ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದ. ಆದ್ರೆ, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರಬೇಕಿದ್ದ ರೈತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಹುಡುಕಲು ಹೋಗಿದ್ದಾರೆ. ಈ ವೇಳೆ ಕರಡಿ ದಾಳಿಯಿಂದ...

Post
ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ರೈತನೋರ್ವ ತನ್ನ ಎತ್ತು ಬದುಕಿಸಲು ಹೋಗಿ ಆತನೂ ವಿದ್ಯುತ್ ಗೆ ಬಲಿಯಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜೀವಗಳು ದುರಂತ ಸಾವು ಕಂಡಿವೆ. ಸನವಳ್ಳಿ ಗ್ರಾಮದ ಈರಪ್ಪ ಯಲ್ಲಪ್ಪ ಕೆರೆಹೊಲದವರ (65) ಎಂಬುವವರೇ ವಿದ್ಯುತ್ ಆಘಾತಕ್ಕೆ ಬಲಿಯಾದವರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಎತ್ತು ಒದ್ದಾಡುತ್ತಿತ್ತು. ಈ ವೇಳೆ ಇದನ್ನು ಕಂಡ ರೈತ ತನ್ನ ಎತ್ತು ರಕ್ಷಣೆ ಮಾಡಲು ದುಮುಕಿದ್ದಾನೆ. ಈ ವೇಳೆ...

Post
ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ಅಪಘಾತವಾಗಿದೆ‌. ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನಂದಿಕಟ್ಟಾ ಹೋಗುತ್ತಿದ್ದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಪರಿಣಾಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂದಿಕಟ್ಟಾ ಗ್ರಾಮದ ಹನುಮಂತ ಭೋವಿ ಮತ್ತು ಬಸವರಾಜ ಎಂಬುವವರೇ ಗಾಯಗೊಂಡವರಾಗಿದ್ದು. 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಮತ್ತು ಮಲ್ಲಪ್ಪ ಇವರು ಪ್ರಥಮ ಚಿಕಿತ್ಸೆ ನೀಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ಈ ಸಾವನ್ನು ನಿಜಕ್ಕೂ ಯಾರ್ ಅಂದ್ರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೆಲವೇ ದಿನಗಳ ಹಿಂದೆ ಲವಲವಿಕೆಯಿಂದ ಕಾರ್ಯ ನಿರ್ವಹಿಸ್ತಿದ್ದ ಅರಣ್ಯ ಅಧಿಕಾರಿಯೊಬ್ಬ ಹೀಗೆ ವಯಸ್ಸಲ್ಲದ ವಯಸ್ಸಲ್ಲಿ ಜೀವ ಕಳೆದುಕೊಂಡು ಬಿದ್ದಿದ್ದಾನೆ. ಹಾಗಿದ್ರೆ, ಇದನ್ನು ಆತನ ಹಣೆಬರಹ ಅನ್ನ ಬೇಕೋ..? ಅಥವಾ ನಿರ್ಲಜ್ಜ, ಅಮಾನುಷ ವ್ಯವಸ್ಥೆಯ, ಮದವೇರಿದ ಅಧಿಕಾರಿಗಳ ನಿರ್ಲಕ್ಷ ಅನ್ನಬೇಕೋ ಒಂದೂ ಅರ್ಥವಾಗ್ತಿಲ್ಲ. ಒಟ್ನಲ್ಲಿ ದಾಂಡೇಲಿಯ ಅವನೊಬ್ಬ ಅರಣ್ಯ ಅಧಿಕಾರಿ ಸದ್ಯ ಇಂತದ್ದೇ ವ್ಯವಸ್ಥೆಗೆ ತನ್ನ ಜೀವ ಬಲಿ ಕೊಟ್ನಾ..? ಅರ್ಥವೇ ಆಗ್ತಿಲ್ಲ. ಆತನ ಹೆಸ್ರು ಯೋಗೇಶ್..!...

error: Content is protected !!