ಹಾನಗಲ್: ತುಂಬಿ ಹರಿಯುತ್ತಿರೋ ಧರ್ಮಾ ನದಿಯಲ್ಲಿ ಎಮ್ಮೆ ಮೈತೊಳೆಯುವಾಗ ಕಾಲುಜಾತಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಘಟನೆ ನಡೆದಿದ್ದು,
ಯಮನಪ್ಪ ಬಂಡಿವಡ್ಡರ (24)ಮೃತ ಯುವಕನಾಗಿದ್ದಾನೆ.

ಎಮ್ಮೆ ಮೇಯಿಸಲು ಜಮೀನಿಗೆ ತೆರಳಿದ್ದ ಮೃತ ಯಮನಪ್ಪ, ಮರಳಿ ವಾಪಸ್ಸು ಮನೆಗೆ ಬರುವಾಗ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯುವಾಗ ದುರಂತ ಸಂಭವಿಸಿದೆ.
ಕಾಲು ಜಾರಿ ನದಿಗೆ ಬಿದ್ದಾಗ ಈಜು ಬಾರದೆ ಯುವಕ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಡೂರು ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!