ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ರೈತನೋರ್ವ ತನ್ನ ಎತ್ತು ಬದುಕಿಸಲು ಹೋಗಿ ಆತನೂ ವಿದ್ಯುತ್ ಗೆ ಬಲಿಯಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜೀವಗಳು ದುರಂತ ಸಾವು ಕಂಡಿವೆ.
ಸನವಳ್ಳಿ ಗ್ರಾಮದ ಈರಪ್ಪ ಯಲ್ಲಪ್ಪ ಕೆರೆಹೊಲದವರ (65) ಎಂಬುವವರೇ ವಿದ್ಯುತ್ ಆಘಾತಕ್ಕೆ ಬಲಿಯಾದವರು.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಎತ್ತು ಒದ್ದಾಡುತ್ತಿತ್ತು. ಈ ವೇಳೆ ಇದನ್ನು ಕಂಡ ರೈತ ತನ್ನ ಎತ್ತು ರಕ್ಷಣೆ ಮಾಡಲು ದುಮುಕಿದ್ದಾನೆ. ಈ ವೇಳೆ ವಿದ್ಯುತ್ ರೈತನಿಗೂ ಆಕ್ರಮಿಸಿ ಆತನೂ ಕೂಡ ಸಾವು ಕಂಡಿದ್ದಾನೆ ಅಂತಾ ಹೇಳಲಾಗ್ತಿದೆ.
ಸದ್ಯ ಮುಂಡಗೋಡ ಪೊಲೀಸರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.