ಮುಂಡಗೋಡ ತಾಲೂಕಿನ ಕಾತೂರು ಬಳಿಮಿನಿ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಲಾರಿಯಡಿ ಚಾಲಕ ಸಿಲುಕಿಕೊಂಡಿದ್ದು ಚಾಲಕನ ರಕ್ಷಣಾ ಕಾರ್ಯ ನಡಿತಿದೆ.
ಜಿಯೋ ಟವರ್ ಕೆಲಸ ಮಾಡಲು ಮುಂಡಗೋಡಿಗೆ ಬಂದಿದ್ದ ಕೃಷ್ಣ ಸಿಂಗನಳ್ಳಿ ಹಾಗೂ ಚಾಲಕ ಶಶಿ, ಶಿರಸಿ ಕಡೆಗೆ ಹೋಗುತ್ತಿದ್ದಾಗ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಮಿನಿ ಲಾರಿ ಪಲ್ಟಿಯಾಗಿದೆ.
ಇನ್ನು ಘಟನೆಯಲ್ಲಿ ಚಾಲಕ ಲಾರಿಯಡಿಯಲ್ಲೇ ಸಿಲುಕಿಕೊಂಡಿದ್ದು, ನರಳುತ್ತಿದ್ದಾನೆ. ಹೀಗಾಗಿ, ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಟ್ಟರ್ ಸಹಾಯದಿಂದ ಚಾಲಕನನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕಟ್ಟರ್ ನಿಂದ ಕಾರ್ಯಾಚರಣೆ ಮಾಡುವ ವೇಳೆ ಯುವಕನೊಬ್ಬನಿಗೆ ಕಟ್ಟರ್ ತಾಗಿ ಗಾಯವಾಗಿದೆ.
108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.