ಧಾರವಾಡ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುವಾಗ ಭಯಾನಕ ದುರ್ಘಟನೆ ನಡೆದಿದೆ. ರಸ್ತೆ ದಾಟಿ ಹೋಗುತ್ತಿದ್ದ ಬೈಕ್ ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಬ್ಲಾಕ್ ಕಲರ್ ಕಾರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಮಹಿಳೆ 10 ಅಡಿ ಹಾರಿ ಹೋಗಿ ಬಿದ್ದಿದ್ದಾಳೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Author: Public First Newz (Public First Newz)
ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ
ಮುಂಡಗೋಡ ತಾಲೂಕಿನ ಇಂದೂರು ಬಳಿಯ ಷರೀಫ ದೇವಸ್ಥಾನದ ಬಳಿ ಅಪಘಾತವಾಗಿದೆ. ಟ್ರಾಕ್ಟರ್ ಹಾಗೂ ಬೈಕ್‌ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ದಂಪತಿಗೆ ಗಾಯವಾಗಿದೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾದ ಆಕಾಶ್ ವಾಸಪ್ಪ ಲಮಾಣಿ (22) ಸಂಗೀತಾ ಆಕಾಶ್ ಲಮಾಣಿ (20) ಗಾಯಗೊಂಡವರಾಗಿದ್ದಾರೆ. ಇಂದೂರು ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಮುಂಡಗೋಡ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ನಡುವೆ ಡಿಕ್ಕಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!
ಮುಂಡಗೋಡ: ತಾಲೂಕಿನ ಕಾತೂರಿನ ಸಭಾಭವನದಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಮುಂಡಗೋಡ ಜೆಎಮ್ ಎಫ್ ಸಿ ಕೋರ್ಟ್ ನ್ಯಾಯಧೀಶ ಕೇಶವ್ ಕೆ. ಕಾರ್ಯಕ್ರಮ ಉದ್ಘಾಟಿಸಿದ್ರು. ಪೊಲೀಸ್ ನಿರೀಕ್ಷಕ ಸಿದ್ದಪ್ಪ ಸಿಮಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ, ಮುಂಡಗೋಡ ಹಾಗೂ ವಕೀಲರ ಸಂಘ ಮುಂಡಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ...
ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!
ಇದು ಮುಂಡಗೋಡ ತಾಲೂಕಿನ ಪಾಲಿಗೆ ಅಚ್ಚರಿಯ ಸಂಗತಿ. ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರ ಖುರ್ಚಿಗೆ ಕುತ್ತು ಬಂದಿದೆಯಾ..? ಮಾರ್ಕೆಟಿಂಗ್ ಸೊಸೈಟಿಗೆ ರವಿಗೌಡ ಪಾಟೀಲರ ನಾಮನಿರ್ದೇಶನವೇ ಕಾನೂನು ಬಾಹಿರಾಗಿದೆ ಅಂತಾ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಆದೇಶ ನೀಡಿದೆ. 03.11.2020 ರಂದು ರವಿಗೌಡ ಪಾಟೀಲರನ್ನು ಸರ್ಕಾರದಿಂದಲೇ ನಾಮ ನಿರ್ದೇಶನಗೊಳಿಸಿದ್ದು ಕಾನೂನು ಬಾಹಿರ ಅಂತಾ ಸರ್ಕಾರದ ಆದೇಶವನ್ನು ಮಾನ್ಯ ಹೈಕೋರ್ಟ್ ವಿಭಾಗೀಯ ಪೀಠ ಕಿತ್ತು ಹಾಕಿದೆ. ಹೀಗಾಗಿ, ಸಚಿವ ಶಿವರಾಮ್ ಹೆಬ್ಬಾರ್ ರವರ ಪರಮಾಪ್ತ, ಬಿಜೆಪಿಯ ಪ್ರಭಾವಿ ಮುಖಂಡ...
ಉತ್ತರ ಕನ್ನಡ ಎಸ್ಪಿ ಸುಮನಾ ಪೆನ್ನೇಕರ್ ಎತ್ತಂಗಡಿ, ವರ್ಗಾವಣೆಗೊಳಿಸಿ ಸರ್ಕಾರ ಆದೇಶ..!
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಎತ್ತಂಗಡಿಯಾಗಿದ್ದಾರೆ. ಒಂದೇ ಒಂದು ವರ್ಷದ ಅವದಿಯಲ್ಲೇ ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿ ಮೇಡಂ ವರ್ಗಾವಣೆ ಮಾಡಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಂದಹಾಗೆ, ಪಬ್ಲಿಕ್ ಫಸ್ಟ್ ನ್ಯೂಸ್ ಕಳೆದ ಒಂದು ತಿಂಗಳ ಹಿಂದೆಯೇ ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ಎನ್. ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದಾರೆ. ಡಾ ಸುಮನಾ ಪೆನ್ನೇಕರ್ ಮೇಡಂ ಜಿಲ್ಲೆಗೆ ಎಂಟ್ರಿಯಾಗಿ ಬಂದಾಗಿನಿಂದ ಇಲ್ಲಿನ ಅಕ್ರಮಿಗಳು ಬಾಲ ಬಿಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅದೇಷ್ಟೋ...
ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
ಶಿಗ್ಗಾವಿ: ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕಾ ದಿನಗಳಲ್ಲಿ ನಾಡು ನುಡಿಯ ಹೆಮ್ಮೆಯ ಸಂಘತಿಗಳ ಕುರಿತು ತಿಳಿದುಕೊಂಡು ನಾಡಿನ ಕೀರ್ತಿ ಬೆಳಗಿದ ಮಹನಿಯರ ಆದರ್ಶಗಳನ್ನು ಪಾಲಿಸುತ್ತ ಹೋದಾಗ ಉತ್ತಮ ರಾಷ್ಟದ ಶಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಶಿಕ್ಷಣ ಪ್ರೇಮಿ ಶಿವಾನಂದ ದೊಡ್ಡಮನಿ ಹೇಳಿದರು. 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಶಿಗ್ಗಾವಿ ತಾಲೂಕ ಕುನ್ನೂರ ಪ್ಲಾಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ....
ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?
ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅನ್ನೋದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವಾಗಿ ವರ್ಷಗಳೇ ಕಳೆದು ಹೋಗಿದೆ. ಪ್ರತೀ ಚುನಾವಣೆ ಬಂದಾಗಲಷ್ಟೇ ಎಲ್ಲೆಲ್ಲಿಂದಲೋ ಬಂದು ಬ್ಯಾನರು, ಪ್ಲೆಕ್ಸು ಕಟ್ಟುವ ನಾಯಕರುಗಳು ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾಗುವ ಚಾಳಿ “ಸಂಪ್ರದಾಯ” ಆದಂತೆ ಆಗಿದೆ. ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರೋ ಈ ಸಂದರ್ಭದಲ್ಲೂ ಮತ್ತದೇ ಸಂಪ್ರದಾಯ ಶುರುವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರಸಕ್ತ ಮುಂಡಗೋಡ ಜೆಡಿಎಸ್ ನಲ್ಲಿ ನಡೆಯುತ್ತಿರೋ ವಿದ್ಯಮಾನಗಳು ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗ್ತಿದೆ. ಅವ್ರು ಸಂತೋಷ ರಾಯ್ಕರ್ ಹೆಚ್ಚೂ...
ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ನಂದೀಪುರ ಬಳಿ ಭೀಕರ ಅಪಘಾತವಾಗಿದೆ. ರಾಂಗ್ ಸೈಡ್ ಬಂದ ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಯೂ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಕಾರು, ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಹಾವೇರಿ ಮೂಲದ ಓರ್ವ ಮಹಿಳೆ ಹಾಗೂ ಪುರುಷನಿಗೆ ಗಂಭೀರ ಗಾಯವಾಗಿದೆ. ಹಾಗೆಯೇ ಮತ್ತೊಂದು ಬೈಕಿನಲ್ಲಿದ್ದ ವ್ಯಕ್ತಿಗೂ ಗಾಯವಾಗಿದೆ. ಎಣ್ಣೆ ಏಟಲ್ಲಿ..?...
ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ
ಮುಂಡಗೋಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕದ ವತಿಯಿಂದ ಇಲ್ಲಿನ ಶಿವಾಜಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಲಾಯಿತು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ್ರು. ವಿವಿಧ ರಾಜ್ಯದೆಡೆಯಿಂದ ಬಂದ ಪ್ರತಿಯೊಬ್ಬರೂ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕಿದೆ ಇಲ್ಲಿ ದೊರಕುವ ಶಾಂತಿ ಸಂಹಿತೆ ದೇಶದ ಇತರೆ ಕಡೆ ಕಾಣಸಿಗುವುದಿಲ್ಲ ಎಂದ ಅವರು, ತಾಲೂಕಿಗೆ ನೂತನವಾಗಿ ಆಗಮಿಸಿರುವ ಪ್ರವೀಣ ಶೆಟ್ಟಿ ಬಣದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ನ್ಯಾಯಕ್ಕಾಗಿ...
ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ
ಮುಂಡಗೋಡ ತಾಲೂಕಿನ ಬಾಚಣಕಿಯ ಹಿರಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್(70) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರು ಎಳೆದಿರೋ ಬರಮಪ್ಪ ಜನಾನುರಾಗಿಯಾಗಿದ್ದರು. ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಬರಮಪ್ಪ, ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಇನ್ನು ಬರಮಪ್ಪ ಏಗಪ್ಪನವರ್ ನಿಧನಕ್ಕೆ ತಾಲೂಕಿನ ಜೈನ ಸಮಾಜ ಕಂಬನಿ ಮಿಡಿದಿದೆ.