ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ

ಧಾರವಾಡ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುವಾಗ ಭಯಾನಕ ದುರ್ಘಟನೆ ನಡೆದಿದೆ.

ರಸ್ತೆ ದಾಟಿ ಹೋಗುತ್ತಿದ್ದ ಬೈಕ್ ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಬ್ಲಾಕ್ ಕಲರ್ ಕಾರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಮಹಿಳೆ 10 ಅಡಿ ಹಾರಿ ಹೋಗಿ ಬಿದ್ದಿದ್ದಾಳೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!