Home Public First Newz

Author: Public First Newz (Public First Newz)

Post
ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ಯುವಕನೊರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಂದಹಾಗೆ, ಫಕ್ಕಿರಸ್ವಾಮಿ ಪಾಂಡು ರಾಣೋಜಿ ಎಂಬುವವನೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಅಂತಾ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಠಾಣೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Post
ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ  ಆರೋಪಿಯೂ ಸೇರಿ ಐವರು ಅಂದರ್..!

ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ ಆರೋಪಿಯೂ ಸೇರಿ ಐವರು ಅಂದರ್..!

 ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಸಿಕ್ಕಿದ್ದ ಮಹಿಳೆಯ ಶವ ಕೇಸ್ ಖುಲ್ಲಂ ಖುಲ್ಲಾ ಆದಂತಾಗಿದೆ. ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರಿನಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಹೆಣ ಎಸೆದು ಹೋಗಿದ್ದ ಹಂತಕರನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಸಲು, ಇಲ್ಲಿ ಖುದ್ದು ಪತಿಯ ಸಹೋದರನೇ ತನ್ನ ತಾಯಿ, ಸಹೋದರಿ, ದೊಡ್ಡಮ್ಮಳ ಜೊತೆ ಸೇರಿಕೊಂಡು ತಮ್ಮನ ಪತ್ನಿಯನ್ನ ಕೊಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಕೇಸಲ್ಲಿ ಈಗ ಮುಂಡಗೋಡ ತಾಲೂಕಿನ ಇಂದೂರಿನ ಓರ್ವ ಆರೋಪಿ ಸೇರಿ...

Post
ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಮಹಿಳೆಯ ಮರ್ಡರ್ ಗೂ ಮುಂಡಗೋಡ ತಾಲೂಕಿಗೂ ನಂಟಿನ ಗಂಟು ಬಿದ್ದಿದೆಯಂತೆ. ಮುಂಡಗೋಡ ಪಟ್ಟಣದಿಂದ ಕಲಘಟಗಿಗೆ ಹೋಗುವ ಮಾರ್ಗದಲ್ಲಿ ಜಸ್ಟ್ 10 ಕಿಮೀ ದಾಟಿದ್ರೆ ಸಿಗುವ ಊರಿನ ಚಾಲಕನೊಬ್ಬ ಮಹಿಳೆಯ ಮರ್ಡರ್ ಮಿಸ್ಟ್ರಿಯಲ್ಲಿ ತಗಲಾಕ್ಕೊಂಡಿದ್ದಾನಾ..? ಹಾಗಂತ ಅನುಮಾನ ಶುರುವಾಗಿದೆ. ಹೀಗಾಗಿ, ಮುಂಡಗೋಡ ಪೊಲೀಸರ ಸಹಕಾರದಲ್ಲಿ ಕುಮಟೆಯ ಖಾಕಿಗಳು ಆರೋಪಿಯ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೇನು ಕನ್ಪರ್ಮ ಅನ್ನೋ ಕಾರಣ ಸಿಕ್ರೆ ಆತನ ಅರೆಸ್ಟ್ ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ, ಆ ಚಾಲಕನ ಬಗ್ಗೆ...

Post
ಸೊಂಟ ನೋವಿಗೆ ಪ್ಯಾರಾಲಿಸಿಸ್ ಇಂಜೆಕ್ಷನ್ ಕೊಟ್ಟ ವೈದ್ಯ ಮಹಾಶಯ..! ಕಾರವಾರದ ಹಳಗಾದಲ್ಲಿ ಪ್ಯಾರಾಲಿಸಿಸ್ ಇಂಜೆಕ್ಷನ್ ಪಡೆದ ಮಹಿಳೆ ಸಾವು..!

ಸೊಂಟ ನೋವಿಗೆ ಪ್ಯಾರಾಲಿಸಿಸ್ ಇಂಜೆಕ್ಷನ್ ಕೊಟ್ಟ ವೈದ್ಯ ಮಹಾಶಯ..! ಕಾರವಾರದ ಹಳಗಾದಲ್ಲಿ ಪ್ಯಾರಾಲಿಸಿಸ್ ಇಂಜೆಕ್ಷನ್ ಪಡೆದ ಮಹಿಳೆ ಸಾವು..!

ಕಾರವಾರ : ಹಳಗಾದ ಪ್ಯಾರಾಲಿಸೀಸ್ ಇಂಜೆಕ್ಷನ್ ತೆಗೆದುಕೊಳ್ಳಲು ಹೋಗುವವರೇ ಹುಶಾರ್..! ಪ್ಯಾರಾಲಿಸೀಸ್ ಆಗದಂತೆ ಮುಂಜಾಗ್ರತೆಯಾಗಿ ಇಂಜೆಕ್ಷನ್ ತೆಗೆದುಕೊಂಡ ಮಹಿಳೆಯೋರ್ವಳು ಇವತ್ತು ಸಾವನ್ನಪ್ಪಿದ್ದಾಳೆ. ಕೊಪ್ಪಳ ಮೂಲದ ಸ್ವಪ್ನ ರಾಯ್ಕರ್ (32) ಎಂಬುವ ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆ ಇಂದು ತನ್ನ ತಂದೆಗೆ ಪ್ಯಾರಾಲಿಸಿಸ್ ಚಿಕಿತ್ಸೆ ಕೊಡಿಸಲೆಂದು ಕೊಪ್ಪಳದಿಂದ ಕಾರವಾರದ ಹಳಗಾ ಗ್ರಾಮಕ್ಕೆ ಬಂದಿದ್ದಳು. ಈ ವೇಳೆ ತನಗೆ ಬ್ಯಾಕ್ ಪೇನ್, ಅಂದ್ರೆ ಸೊಂಟ ನೋವು ಬಾಧಿಸುತ್ತಿರೋ ಹಿನ್ನೆಲೆಯಲ್ಲಿ ವೈದ್ಯರಿಗೆ ಹೇಳಿದ್ದಾಳೆ. ಮುಂಜಾಗ್ರತೆಗಾಗಿ..! ಹೀಗಾಗಿ, ವೈದ್ಯರು ಪ್ಯಾರಾಲಿಸಿಸ್ ಬರದಂತೆ ಮುಂಜಾಗ್ರತೆಯಾಗಿ ಇಂಜೆಕ್ಷನ್...

Post
ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸರಾಜ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಸೇರಿ ಮೂವರನ್ನು ಕಣಕ್ಕಿಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾಜು೯ನ ಖಗೆ೯ ಅವರು ಅಭ್ಯಥಿ೯ಗಳ ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ತಿಂಗಳಾಂತ್ಯದಲ್ಲಿ ನಡೆಯಲಿರುವ ಮೇಲ್ಮನೆ ಸದಸ್ಯತನಕ್ಕಾಗಿ ಚುನಾವಣೆ ನಡೆಯಲಿದ್ದು, ಶಾಸಕರಿಂದ ಮತದಾನ ನಡೆಯಲಿದೆ, ಹೀಗಾಗಿ ಬಹುತೇಕ ಕಾಂಗ್ರೆಸ್ ಅಭ್ಯಥಿ೯ಗಳಿಗೆ ಸುಲಭದ ಜಯ ಸಿಗುವ ಸಾಧ್ಯತೆ ಇದೆ.

Post
ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಗುರುತು ಸಿಕ್ಕರೆ  ಕರೆಮಾಡಿ ಮಾಹಿತಿ ನೀಡಿ..!

ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಗುರುತು ಸಿಕ್ಕರೆ ಕರೆಮಾಡಿ ಮಾಹಿತಿ ನೀಡಿ..!

ಕುಮಟಾ: ತಾಲೂಕಿನ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅಂದಾಜು, 26 ರಿಂದ 30 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯ ಕೈ ಮೇಲೆ ಟ್ಯಾಟೂಗಳು ಇವೆ. ಬಹುಶಃ ಕೊಲೆ ‌ಮಾಡಿ ಬೀಸಾಡಿರೋ ಶಂಕೆ ಇದೆ. ಸದ್ಯ ಕುಮಟಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಮಹಿಳೆಯ ಗುರುತು ಪತ್ತೆಗೆ ಇಳಿದಿದ್ದಾರೆ. ತಮಗೇನಾದ್ರೂ ಈ ಮಹಿಳೆಯ ಗುರುತು ಸಿಕ್ಕರೆ ತಕ್ಷಣವೇ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಿದ್ದಾರೆ. ಕುಮಟಾ ಪೋಲಿಸ್ ಠಾಣೆಯ...

Post
ಕುನ್ನೂರಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಸಾವು, ನ್ಯಾಯ ಕೊಡಿಸುವಂತೆ ಮಾಜಿ ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡ ಹೆತ್ತವರು, ಕರುಣೆನೇ ಇಲ್ವಾ ವ್ಯವಸ್ಥೆಗೆ..?

ಕುನ್ನೂರಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಸಾವು, ನ್ಯಾಯ ಕೊಡಿಸುವಂತೆ ಮಾಜಿ ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡ ಹೆತ್ತವರು, ಕರುಣೆನೇ ಇಲ್ವಾ ವ್ಯವಸ್ಥೆಗೆ..?

 ಶಿಗ್ಗಾವಿ: ತಾಲೂಕಿನ ಮಡ್ಲಿಯಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ಮಾಜಿ ಸಿಎಂ ಬೊಮ್ಮಾಯಿ ಕಾಲು ಬಿದ್ದ ಬಡ ‌ದಂಪತಿ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ನಿರ್ದಯಿ, ನಿರ್ಲಜ್ಯ ವ್ಯವಸ್ಥೆಯಲ್ಲಿ ಪಾಪ, ಆ ಬಡ ಪೋಷಕರ ಆಕ್ರಂಧನ ಮಾತ್ರ ಉಳ್ಳವರಿಗೆ ಮೋಜಿನಂತಾಗಿ ಕಂಡಿತಾ..? ಆ ನೋವು, ಸಂಕಟ, ಛೇ..! ಅಂದಹಾಗೆ, ಅದು 2019 ರ, ಡಿಸೆಂಬರ್ 8 ರಂದು ಶಿಗ್ಗಾವಿ ತಾಲೂಕು ಕುನ್ನೂರಿನ ಕಸ್ತೂರಬಾ ವಸತಿ ನಿಲಯದಲ್ಲಿ ಅದೊಬ್ಬ ವಿದ್ಯಾರ್ಥಿನಿಯ ಶವ...

Post
ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!

ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!

 ರಾಣೇಬೆನ್ನೂರು: ಸದ್ಯ ಜೊತೆಗಿದ್ದ ತಂದೆ ತಾಯಿಗಳನ್ನೇ ಸಾಕಿ ಸಲಹುವುದು ಮಕ್ಕಳಿಗೆ ಬೇಡವಾಗಿದೆ. ಜೀವಂತವಾಗಿದ್ದ ಹೆತ್ತವರನ್ನೇ ವೃದ್ದಾಶ್ರಮಗಳಿಗೆ ಬಿಟ್ಟು ಬಂದು ಲಲ್ಲೆ ಹೊಡೆಯುವ ಅದೇಷ್ಟೋ ಮಕ್ಕಳು ನಮ್ಮ ನಡುವೆ ಇದ್ದಾರೆ. ಇದರ ನಡುವೆ ಎಂದೋ ದಿವಂಗತರಾಗಿ ಹೋದ ತಂದೆ, ತಾಯಿ, ಅಜ್ಜ ಅಜ್ಜಿ ಸೇರಿದಂತೆ ಪೂರ್ವಿಕರನ್ನೇಲ್ಲ ಇಲ್ಲೊಬ್ಬ ಹೃದಯವಂತ ವ್ಯಕ್ತಿ, ಮೂರ್ತಿ ಮಾಡಿಟ್ಟು ನಿತ್ಯವೂ ಪೂಜೆ ಮಾಡ್ತಿದಾರೆ ಅನ್ನೋದು ಅಚ್ಚರಿಯಾದ್ರೂ ಸತ್ಯ. ಹೌದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಹೀಗೊಬ್ಬ ಹೃದಯವಂತ ತನ್ನ ಹಿರಿಯರ...

Post
ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹ ಪರಮೇಶ್ವರ ಭಟ್ (56) ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಂಶುಪಾಲರು ತಡರಾತ್ರಿ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. ಮೂಲತಃ ಯಲ್ಲಾಪುರ ಪಟ್ಟಣದವರಾಗಿದ್ದ ನರಸಿಂಹ ಪರಮೇಶ್ವರ ಭಟ್, ಕಳೆದ 13 ವರ್ಷಗಳಿಂದ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರದಲ್ಲಿ ಕಳೆದ ಫೆಬ್ರುವರಿಯಲ್ಲಿ ಮುಂಡಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಅಲ್ದೇ ಫೆ. 7...

Post
ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಜಪ್ತಿ..!

ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಜಪ್ತಿ..!

ರಾಮನಗರ: ಜೋಯಿಡಾ ತಹಶೀಲ್ದಾರ್ ಹಾಗೂ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 23 ಟಿಪ್ಪರ್ ನಷ್ಟು ಮರಳು ಜಪ್ತಿ ಪಡಿಸಿಕೊಂಡಿದ್ದು ಅಕ್ರಮಿಗಳ ಹೆಡೆಮುರಿ ಕಟ್ಟಿದ್ದಾರೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಗಾಂವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 23 ಟಿಪ್ಪರ್ ನಷ್ಟು, ಅಂದಾಜು 3 ಲಕ್ಷ 30 ಸಾವಿರ ರೂಪಾಯಿ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಜೋಯಿಡಾ ತಹಶೀಲ್ದಾರ್ ಬಸವರಾಜ ತೆರನಹಳ್ಳಿ ಮಾರ್ಗದರ್ಶನದಲ್ಲಿ ರಾಮನಗರ...

error: Content is protected !!