ಸೊಂಟ ನೋವಿಗೆ ಪ್ಯಾರಾಲಿಸಿಸ್ ಇಂಜೆಕ್ಷನ್ ಕೊಟ್ಟ ವೈದ್ಯ ಮಹಾಶಯ..! ಕಾರವಾರದ ಹಳಗಾದಲ್ಲಿ ಪ್ಯಾರಾಲಿಸಿಸ್ ಇಂಜೆಕ್ಷನ್ ಪಡೆದ ಮಹಿಳೆ ಸಾವು..!

ಕಾರವಾರ : ಹಳಗಾದ ಪ್ಯಾರಾಲಿಸೀಸ್ ಇಂಜೆಕ್ಷನ್ ತೆಗೆದುಕೊಳ್ಳಲು ಹೋಗುವವರೇ ಹುಶಾರ್..! ಪ್ಯಾರಾಲಿಸೀಸ್ ಆಗದಂತೆ ಮುಂಜಾಗ್ರತೆಯಾಗಿ ಇಂಜೆಕ್ಷನ್ ತೆಗೆದುಕೊಂಡ ಮಹಿಳೆಯೋರ್ವಳು ಇವತ್ತು ಸಾವನ್ನಪ್ಪಿದ್ದಾಳೆ.

ಕೊಪ್ಪಳ ಮೂಲದ ಸ್ವಪ್ನ ರಾಯ್ಕರ್ (32) ಎಂಬುವ ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆ ಇಂದು ತನ್ನ ತಂದೆಗೆ ಪ್ಯಾರಾಲಿಸಿಸ್ ಚಿಕಿತ್ಸೆ ಕೊಡಿಸಲೆಂದು ಕೊಪ್ಪಳದಿಂದ ಕಾರವಾರದ ಹಳಗಾ ಗ್ರಾಮಕ್ಕೆ ಬಂದಿದ್ದಳು. ಈ ವೇಳೆ ತನಗೆ ಬ್ಯಾಕ್ ಪೇನ್, ಅಂದ್ರೆ ಸೊಂಟ ನೋವು ಬಾಧಿಸುತ್ತಿರೋ ಹಿನ್ನೆಲೆಯಲ್ಲಿ ವೈದ್ಯರಿಗೆ ಹೇಳಿದ್ದಾಳೆ.

ಮುಂಜಾಗ್ರತೆಗಾಗಿ..!
ಹೀಗಾಗಿ, ವೈದ್ಯರು ಪ್ಯಾರಾಲಿಸಿಸ್ ಬರದಂತೆ ಮುಂಜಾಗ್ರತೆಯಾಗಿ ಇಂಜೆಕ್ಷನ್ ತಕ್ಕೊಳ್ಳಿ ಅಂತಾ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯರು ಹೇಳಿದ ಕೂಡಲೇ ಮಹಿಳೆ ಪ್ಯಾರಾಲಿಸಿಸ್ ಗೆ ಸಂಬಂಧಿಸಿದ ಇಂಜೆಕ್ಷನ್ ಅದೇ ಆಸ್ಪತ್ರೆಯಲ್ಲಿ ವೈದ್ಯರ ಸೂಚನೆಯಂತೆ ಪಡೆದಿದ್ದಾಳೆ ಎನ್ನಲಾಗಿದೆ. ಯಾವಾಗ ಇ‌ಂಜೆಕ್ಷನ್ ಪಡೆದಳೋ ಕೆಲವೇ ಹೊತ್ತಲ್ಲಿ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಅದು ಸೆಂಟ್ ಇಗ್ನೇಸಿಯಸ್ ಆಸ್ಪತ್ರೆ..!
ಅಸಲು, ಈಕೆಗೆ ಪ್ಯಾರಾಲಿಸೀಸ್ ಬಾರದೆ ಇದ್ದರೂ ಸಹ ಮುಂದಿನ ದಿನದಲ್ಲಿ ಅದು ಬಾರದಿರಲಿ, ಎನ್ನುವ ಕಾರಣಕ್ಕೆ ಇಂಜೆಕ್ಷನ್ ತೆಗದುಕೊಂಡಿದ್ದಾಳೆ‌ ಎನ್ನಲಾಗಿದೆ. ಕಾರವಾರದ ಹಳಗಾ ಗ್ರಾಮದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ವೈದ್ಯರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಫೇಮಸ್ಸು..!
ಅಂದಹಾಗೆ, ಪ್ಯಾರಾಲಿಸೀಸ್ ಗೆ ಇಂಜೆಕ್ಷನ್ ಕೊಡುವ ಆಸ್ಪತ್ರೆ ಇದಾಗಿದ್ದು, ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಈ ಮಹಿಳೆಗೆ ಪ್ಯಾರಲಿಸೀಸ್‌ ಇಲ್ಲದೆ ಇರುವಾಗಲು ಅಲ್ಲಿನ ‌ವೈದ್ಯರು ಅದು ಹೇಗೆ ಆಕೆಗೆ ಇಂಜೆಕ್ಷನ್‌ ಕೊಟ್ಟರು..? ಇದೇ ಈಗ ಪ್ರಶ್ನೆಯಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!