ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಮಹಿಳೆಯ ಮರ್ಡರ್ ಗೂ ಮುಂಡಗೋಡ ತಾಲೂಕಿಗೂ ನಂಟಿನ ಗಂಟು ಬಿದ್ದಿದೆಯಂತೆ. ಮುಂಡಗೋಡ ಪಟ್ಟಣದಿಂದ ಕಲಘಟಗಿಗೆ ಹೋಗುವ ಮಾರ್ಗದಲ್ಲಿ ಜಸ್ಟ್ 10 ಕಿಮೀ ದಾಟಿದ್ರೆ ಸಿಗುವ ಊರಿನ ಚಾಲಕನೊಬ್ಬ ಮಹಿಳೆಯ ಮರ್ಡರ್ ಮಿಸ್ಟ್ರಿಯಲ್ಲಿ ತಗಲಾಕ್ಕೊಂಡಿದ್ದಾನಾ..? ಹಾಗಂತ ಅನುಮಾನ ಶುರುವಾಗಿದೆ. ಹೀಗಾಗಿ, ಮುಂಡಗೋಡ ಪೊಲೀಸರ ಸಹಕಾರದಲ್ಲಿ ಕುಮಟೆಯ ಖಾಕಿಗಳು ಆರೋಪಿಯ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೇನು ಕನ್ಪರ್ಮ ಅನ್ನೋ ಕಾರಣ ಸಿಕ್ರೆ ಆತನ ಅರೆಸ್ಟ್ ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ, ಆ ಚಾಲಕನ ಬಗ್ಗೆ ಅದು ಹೇಗಪ್ಪ ತಗಲಾಕ್ಕೊಂಡ ಅಂತಾ ಆ ಗ್ರಾಮದ ಮಂದಿ ತಲೆ ಕೆರೆದುಕೊಳ್ತಿದಾರಂತೆ‌.

ಅದು ದೇವಿಮನೆ ಘಟ್ಟ..!
ಅಸಲು, ಜೂನ್ 17 ರಂದು ಕುಮಟಾದ ಕತಗಾಲ್ ಸಮೀಪದ ದೇವಿಮನೆ ಘಟ್ಟದಲ್ಲಿ ಅದೊಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಂದಾಜು ಮೂವತ್ತರ ಆಸುಪಾಸಿನ ನೀಲಿ ಬಣ್ಣದ ಚೂಡಿ ತೊಟ್ಟಿದ್ದ ಆ ಮಹಿಳೆ ಹೆಣವಾಗಿ ಸಿಕ್ಕಿದ್ದಳು. ಹೀಗಾಗಿ, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ರು. ಸತ್ಯ ಅಂದ್ರೆ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆಕೆಯ ಸುಳಿವು ಸಿಕ್ಕು ಆಗಿತ್ತು. ಜೊತೆ ಜೊತೆಗೆ ಆರೋಪಿಗಳ ಸುಳಿವನ್ನೂ ಪತ್ತೆ ಮಾಡಿರೋ ಕುಮಟಾದ ದಕ್ಷ ಪೊಲೀಸರಿಗೆ ಬಹುತೇಕ ಮರ್ಡರ್ ನ ಅಸಲೀಯತ್ತು ಬಟಾ ಬಯಲು ಆದಂತಾಗಿತ್ತು ಎನ್ನಲಾಗಿದೆ.

ಶಿಗ್ಗಾವಿಯ ಚಿಕ್ಕಮಲ್ಲೂರಿನವಳಾ..?
ಅಂದಹಾಗೆ, ದೇವಿಮನೆ ಘಟ್ಟದಲ್ಲಿ ಶವವಾಗಿ ಸಿಕ್ಕ ಮಹಿಳೆಯ ಹೆಸರು ಯಲ್ಲಮ್ಮ (ತನುಜಾ).. ಈಕೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೆಣ್ಣು ಮಗಳು ಅನ್ನೊ ಮಾಹಿತಿ ಇದೆ. ಅಂದಹಾಗೆ, ನೀವು ಶಿಗ್ಗಾವಿಯಿಂದ ಸವಣೂರಿಗೆ ಹೋಗುವ ಮಾರ್ಗದಲ್ಲಿ ಕೇವಲ ನಾಲ್ಕು ಕಿಮಿ ಕ್ರಮಿಸಿದ್ರೆ ಸಾಕು, ಅಲ್ಲಿ ಹನುಮರಹಳ್ಳಿ, ಕಂಕಣವಾಡ ದಾಟಿದ್ರೆ ಸಿಗುವ ಗ್ರಾಮವೇ ಈ ಚಿಕ್ಕ ಮಲ್ಲೂರು. ಮಾಹಿತಿಯ ಪ್ರಕಾರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೀಣಾ ಅನ್ನೋ ಮಹಿಳೆಯನ್ನ ಸುಮಾರು ಮೂರ್ನಾಲ್ಕು ಜನ ತನ್ನ ಕುಟುಂಬದವರೇ ಸೇರಿ ಕತೆ ಮುಗಿಸಿದ್ದಾರೆ ಅನ್ನೋ ಅನುಮಾನ ಪೊಲೀಸರಿಗಿದೆ. ಅಲ್ದೆ, ಹಾಗೆ ಕೊಂದು ಹೆಣವಾಗಿಸಿದ ನಂತರ ಮಹಿಳೆಯ ಶವವನ್ನು ಹೇಗಾದ್ರೂ ಸರಿ ಯಾರ ಕಣ್ಣಿಗೂ ಬೀಳದಂತೆ ದೂರ ಸಾಗಿಸುವ ಸಂಚು ನಡೆದಿದೆ‌.

ಶವ ಸಾಗಿಸಿದ್ದು ಕ್ರೂಸರ್ ಚಾಲಕ..?
ನಿಜವೆಂದ್ರೆ, ಚಿಕ್ಕಮಲ್ಲೂರಿನ ಮಹಿಳೆಯನ್ನು ಕೊಂದು ಮುಗಿಸಿದ್ದ ಕುಟುಂಬ, ಇನ್ನೇನು ಸತ್ತೇ ಹೋಗಿದ್ದ  ಯಲ್ಲಮ್ಮ ಶವವನ್ನು ಸಾಗಿಸಲು ನೇರವಾಗಿ ಮುಂಡಗೋಡ ತಾಲೂಕಿನ ಅದೊಂದು ಗ್ರಾಮದ ಹುಡುಗನಿಗೆ ಆತನ‌ ಪತ್ನಿಯಿಂದಲೇ ಕರೆ ಮಾಡಿಸಿದ್ದಾರೆ ಅನ್ನೋ ಮಾಹಿತಿ ಇದೆ. ಹೀಗಾಗಿ, ತನ್ನಿಂದ ದೂರವಾಗಿದ್ದ ಹೆಂಡ್ತಿ ಪ್ರೀತಿಯಿಂದ ಕರೀತಿದಾಳೆ ಅಂತಾ ತನ್ನ ಕ್ರೂಸರ್ ಒಯ್ದ ಚಾಲಕ ಶವವನ್ನು ಸಾಗಿಸಲು ಸಹಾಯ ಮಾಡಿದ್ನಾ..? ದೇವಿಮನೆ ಘಟ್ಟದಲ್ಲಿ ಕ್ರೂಸರ್ ಮೂಲಕವೇ ಶವ ಬೀಸಾಕಿ ಬಂದ್ನಾ..? ಇದೇಲ್ಲ ಅನುಮಾನಗಳು ಪೊಲೀಸರ ತಲೆ ಹೊಕ್ಕಿವೆ‌.

ಕಠಿಣ ಕೇಸ್‌.!
ಅಸಲು, ಇದೊಂದು ಪ್ರೀ ಪ್ಲ್ಯಾನ್ಡ್ ಮರ್ಡರ್ ಅಂತಾ ಅವತ್ತೇ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಫಿಲ್ಡಿಗೆ ಇಳಿದಿದ್ದ ಕುಮಟಾ ಪೊಲೀಸರಿಗೆ ಮಹಿಳೆಯ ಸಾವಿನ ಸುತ್ತದ ಅನುಮಾನದ ಹುತ್ತ ಬೇಧಿಸೋದು ತುಸು ಕಷ್ಟವೇ ಆಗಿತ್ತು. ಆದ್ರೂ ಕುಮಟಾದ ದಕ್ಷ ಪಿಐ ತಿಮ್ಮಪ್ಪ ನಾಯ್ಕ್ ಹಾಗೂ ಪಿಎಸ್ ಐ ಹೇಮಂತ್ ತಮ್ಮ ಪಡೆಯೊಂದಿಗೆ ಫಿಲ್ಡಿಗೆ ಇಳಿದು ಆರೋಪಿಗಳನ್ನ ಹೆಡೆಮುರಿ ಕಟ್ಟುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ‌ ಅನ್ನೋ ಮಾಹಿತಿ ಇದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ. ದುರಂತ ಅಂದ್ರೆ, ದೇವಿಮನೆಯ ದಟ್ಟ ಘಟ್ಟದಲ್ಲಿ ಸತ್ತು ಬಿದ್ದಿದ್ದ ಮಹಿಳೆಯ ಕೊಲೆಯ ಹಿಂದೆ ಮುಂಡಗೋಡ ತಾಲೂಕಿನ ಅವನೊಬ್ಬ ಚಾಲಕನ ನಂಟು ಇರೋ ಅನುಮಾನ ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ, ನಿನ್ನೆ ರಾತ್ರಿಯಿಂದಲೇ ಆ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮುಂಡಗೋಡಿಗೆ ಬಂದಿದ್ದ ಕುಮಟಾ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ, ಆರೋಪಿಯ ಅಸಲೀತನದ ವರ್ಕೌಟ್ ಮಾಡ್ತಿದಾರಂತೆ.

ಕೆಲವೇ ಹೊತ್ತಲ್ಲಿ..!
ಈ ಕೇಸಲ್ಲಿ, ಕುಮಟಾ ಪೊಲೀಸರು ಅಂದುಕೊಂಡಂತೆ ಆದ್ರೆ ಇನ್ನೇನು ಕೆಲವೇ ಹೊತ್ತಲ್ಲಿ ಆರೋಪಿಗಳ ಹೆಡೆಮುರಿ ಕಟ್ಟೋದು ಕನ್ಪರ್ಮ್ ಅನ್ನೋ ಮಾಹಿತಿ ಇದೆ. ಅದೇನೇ ಆದ್ರೂ ಮುಂಡಗೋಡ ತಾಲೂಕಿನ ಆ ಚಾಲಕನ ಹುಂಬತನವೋ ಅಥವಾ ಯಾರದ್ದೋ ಸಂಚಿನ ಪ್ರತಿಫಲವೋ ಗೊತ್ತಿಲ್ಲ, ಕೊಲೆ ಪ್ರಕರಣದಲ್ಲಿ ಪಿಕ್ಸ್ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದೇನಾಗತ್ತೋ ಕಾಯಬೇಕಿದೆ.

error: Content is protected !!