ಯಸ್, ಬಿಜೆಪಿ ಹೈಕಮಾಂಡ್ ಬಯಸಿದಂತೆ ಎಲ್ಲವೂ ಆಗಿ ಹೋಗಿದೆ. ಸಿಎಂ ಆಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದ್ರ ಜೊತೆ ಈಗ ಯಡಿಯೂರಪ್ಪ ಸಚಿವ ಸಂಪುಟ ಮಾಜಿಯಾಗಿದೆ. ಹಾಗಾದ್ರೆ ಯಾರು ಮುಂದಿನ ಸಿಎಂ..? ಈ ಕುತೂಹಲ ಸದ್ಯ ಇಡೀ ರಾಜ್ಯದ ಜನರಲ್ಲಿದೆ. ಬಹುಶಃ ಅಂದುಕೊಂಡಂತೆ ಆದ್ರೆ ಗುರುವಾರ ಅಥವಾ ಶುಕ್ರವಾರ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸೋದು ಪಕ್ಕಾ ಎನ್ನುವಂತಾಗಿದೆ. ಆ ಇಬ್ಬರ ನಡುವೆಯಷ್ಟೇ ಪೈಪೋಟಿ..! ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಬಾಗಲಕೋಟೆ ಬೀಳಗಿ ಶಾಸಕ ಮುರುಗೇಶ್ ನಿರಾಣಿ ನಡುವೆ ಸಿಎಂ ಪಟ್ಟಕ್ಕಾಗಿ ಹಾಣಹಣಿ ನಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಇಬ್ಬರ ನಡುವೆ ಯಾರು ಹಿತವರು ಅನ್ನೋದನ್ನ ಹೈಕಮಾಂಡ್ ಅಳೆದು ತೂಗಿ ತೀರ್ಮಾನಿಸಲಾಗ್ತಿದೆ ಅನ್ನೋ ಮಾಹಿತಿ ಇದೆ. ಹೊಸ ಮುಖಕ್ಕೆ ಆದ್ಯತೆ..? ಅಂದಹಾಗೆ, ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಪಕ್ಕಾ ಪ್ಲಾನ್ ಮೂಲಕವೇ ಹೊಸ ಸಿಎಂ ಆಯ್ಕೆ ಮಾಡಲು ಸನ್ನಧ್ದವಾಗಿದೆ. ಬಹುತೇಕ ಲಿಂಗಾಯತ ಶಾಸಕರಿಗೇ...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ನಾನೀಗ ಮಾಜೀ ಸಚಿವನಾಗಿಬಿಟ್ಟೆ..! ಪಬ್ಲಿಕ್ ಫಸ್ಟ್ ಗೆ ಹೆಬ್ಬಾರ್ ಫಸ್ಟ್ ರಿಯಾಕ್ಷನ್..!!
ಮುಂಡಗೋಡ: “ಸಿಎಂ ರಾಜೀನಾಮೆ ನೀಡ್ತಿದಾರೆ, ಹೀಗಾಗಿ ನಾನೂ ಈಗ ಮಾಜಿ ಸಚಿವನಾಗಿಬಿಟ್ಟೆ..! ಹೀಗಂತ ಸಚಿವ ಶಿವರಾಂ ಹೆಬ್ಬಾರ್ ಬೇಸರದ ನುಡಿ ಹಂಚಿಕೊಂಡ್ರು. “ಪಬ್ಲಿಕ್ ಫಸ್ಟ್ ನ್ಯೂಸ್” ಜೊತೆ ಎಕ್ಸ್ ಕ್ಲೂಸಿವ್ ಆಗಿ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್ ಭಾವುಕರಾದಂತೆ ಕಂಡ್ರು, ರಾಜ್ಯ ರಾಜಕೀಯದಲ್ಲಿ ಇಂದು ನಡೆದ ಮಹತ್ತರ ಬೆಳವಣಿಗೆ ಕುರಿತು ಬಹುಶಃ ಸಚಿವ ಶಿವರಾಮ್ ಹೆಬ್ಬಾರ್ ರವರಿಗೂ ಬೇಸರವಾಗಿರೋದು ಅವ್ರ ಮಾತುಗಳಲ್ಲಿ ಕಂಡು ಬಂತು. ಮುಂದೇನು..? ಸಿಎಂ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಯಡಿಯೂರಪ್ಪರ ರಾಜೀನಾಮೆ ಅಂಗೀಕರಿಸಿಯೂ ಆಗಿದೆ. ಸಿಎಂ ರಾಜೀನಾಮೆ ಬಳಿಕ ಬಹುತೇಕ ಸಚಿವ ಸಂಪುಟ ವಿಸರ್ಜನೆ ಆಗತ್ತೆ. ಹೊಸ ಸಿಎಂ ಆಯ್ಕೆಯಾಗಿ ಮತ್ತೆ ನೂತನ ಸಚಿವ ಸಂಪುಟ ರಚನೆಯಾಗತ್ತೆ. ಹೀಗಾಗಿ, ಸಿಎಂ ರಾಜೀನಾಮೆ ಬಳಿಕ ನಾವು ಹೇಗೆ ಸಚಿವರಾಗಿ ಉಳಿಯೋಕೆ ಸಾಧ್ಯ ಅಂದ್ರು ಹೆಬ್ಬಾರ್. ಸಮಾವೇಶಕ್ಕೆ ಹಾಜರಾಗಿಲ್ಲ ಸಚಿವ್ರು.. ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಇಂದಿಗೆ ಎರಡು ವರ್ಷ...
ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಶಿಸಿದ ಸಿಎಂ ಯಡಿಯೂರಪ್ಪ..!
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರೋ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಷರಶಃ ಕಣ್ಣೀರಾಗುತ್ತಲೇ ವಿದಾಯ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಕಾರ್ಯಕ್ರಮ ಮುಗಿದ ಬಳಿಕ, ರಾಜ್ಯಪಾಲರ ಬಳಿಗೆ ಹೋಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಿನಿ ಅಂತಾ ಭಾವುಕರಾಗೇ ಘೋಷಣೆ ಮಾಡಿದ್ರು..
ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ ಹೇಗ್ ಮಾಡಿದ್ರು ಗೊತ್ತಾ..?
ಚಿಕ್ಕೋಡಿ: ತಾಲೂಕಿನಲ್ಲಿ ಮಳೆ ನಿಂತ್ರು, ಪ್ರವಾಹದ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ.. ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನು ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗ್ತಿದ್ದ ಅದೇ ಗ್ರಾಮದ ಯುವಕ ಕುಮಾರ್ ಕಾಂಬಳೆಯನ್ನು ರಕ್ಷಿಸಲಾಗಿದೆ. ಸ್ಥಳೀಯರೇ ಹಗ್ಗ ಹಾಕಿ ಕುಮಾರ್ನನ್ನ ರಕ್ಷಿಸಿದ್ದಾರೆ. ಪರಶುರಾಮ್ ಕಾಂಬಳೆ ಹಾಗೂ ಸ್ಥಳೀಯರು ಪ್ರಾಣ ಪಣಕ್ಕಿಟ್ಟು ಕುಮಾರ್ ಎಂಬ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಹುಲಿ ಗಡ್ಡಿಯಿಂದ ಹುಲಗಬಾಳಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ, ಪ್ರವಾಹ ದಾಟಲು ಹೋಗಿದ್ದ. ಹೀಗಾಗಿ, ಪ್ರವಾಹ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗ್ತಿದ್ದ. ಆದ್ರೆ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಯುವಕನ ರಕ್ಷಣೆ ಮಾಡಿದ್ದಾರೆ.
ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!
ಮುಂಡಗೋಡ: ಮಾನಸಿಕ ಖಿನ್ನತೆಗೆ ಒಳಗಾದ ಯುವಕನೊಬ್ಬ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಮಿತ್ ಬಸವರಾಜ್ ಲೋಹಾರ್ (20) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಳೆ ಸಿಎಂ ಉತ್ತರ ಕನ್ನಡ ಜಿಲ್ಲಾ ಪ್ರವಾಸ..! ಪ್ರವಾಹದ ಸ್ಥಿತಿ ವೀಕ್ಷಿಸಲಿರೋ ಯಡಿಯೂರಪ್ಪ
ಬೆಳಗಾವಿ: ನಾಳೆ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲು ಯಡಿಯೂರಪ್ಪ ನಾಳೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ 2 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅವರು ಉತ್ತರ ಕನ್ನಡ ಜಿಲ್ಲೆಗೆ ತೆರಳುವರು. ಕಾರನಾರ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು. ಇಂದು ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಹೈಕಮಾಂಡ್ ಸಂದೇಶ ಬರಲಿದೆ ಎಂದು ಕಾಯುತ್ತಿರುವ ಯಡಿಯೂರಪ್ಪ ನಾಳೆಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಘೋಷಿಸುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ನಾನು ಸಂತೃಪ್ತನಾಗಿದ್ದೇನೆ. ರಾಜ್ಯದಲ್ಲಿ ಯಾರಿಗೂ ಸಿಗದ ಅವಕಾಶ, ಸ್ಥಾನ ಮಾನ ನನಗೆ ಸಿಕ್ಕಿದೆ. ನಾವೆಲ್ಲರೂ ಹೈಕಮಾಂಡ್ ಮಾತನ್ನು ಕೇಳಬೇಕಾಗುತ್ತದೆ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ನಾಯಕತ್ವ “ಬದಲೀ” ಆಟದಲ್ಲಿ, ಸೇಫ್ ಆಗ್ತಾರಾ ಹೆಬ್ಬಾರ್..?
ಯಲ್ಲಾಪುರ ಕ್ಷೇತ್ರಕ್ಕೂ ತಾಗತ್ತಾ ಸಿಎಂ ಬದಲಾವಣೆ ಬಿಸಿ..? ಇಂತಹದ್ದೊಂದು ಆತಂಕ ಈಗಾಗಲೇ ಬಹುತೇಕ ವಲಸಿಗ ಸಚಿವರುಗಳ ಕ್ಷೇತ್ರದಲ್ಲಿ ಒಳಗೊಳಗೇ ಹೊಗೆಯಾಡ್ತಿದೆ. ಅದ್ರಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಆತಂಕ ಬಹುಶಃ ಒಳಗೊಳಗೇ ತಲ್ಲಣಗೊಳಿಸಿದೆಯಾ.? ಹೌದು, ಅನ್ನುತ್ತಿವೆ ಬಲ್ಲ ಮೂಲಗಳು. ಬದಲಾವಣೆ ಪಕ್ಕಾ..! ಸಿಎಂ ಯಡಿಯೂರಪ್ಪ ಈಗಷ್ಟೇ ರಾಜೀನಾಮೆ ನೀಡುವ ಸುಳಿವು ನೀಡಿ ಆಗಿದೆ. ಹೈಕಮಾಂಡ್ ಹೇಗ್ ಹೇಳತ್ತೋ ಹಾಗೆ ಕೇಳ್ಕೊಂಡು ಇರ್ತಿನಿ ಅನ್ನೋ ಸಂದೇಶ ರವಾನಿಸಿಯೂ ಆಗಿದೆ. ಜುಲೈ 25 ಕ್ಕೆ ಹೈಕಮಾಂಡ್ ನಾಯಕರಿಂದ ಬರೋ ಅದೇಶಕ್ಕಾಗಿ ಎಲ್ರೂ ಕಾಯ್ತಿವಿ, ಆ ಆದೇಶ ಅದೇನೇ ಬಂದ್ರೂ ಅದ್ರಂತೆ ನಡ್ಕೋತಿವಿ ಅನ್ನೋ ಸ್ಪಷ್ಟ ಸಂದೇಶ ಯಡಿಯೂರಪ್ಪನವರೂ ರವಾನಿಸಿದ್ದಾರೆ. ಇದ್ರೊಂದಿಗೆ ಜುಲೈ 25 ರ ಆದೇಶ ಅದೇನಾಗತ್ತೊ ಅನ್ನೋ ಹಲವು ಆಯಾಮಗಳ ಲೆಕ್ಕಾಚಾರ ಗರಿಗೆದರಿದೆ. ಒಟ್ನಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಕಾ ಅನ್ನಲಾಗ್ತಿದೆ. ವಲಸಿಗರ ಚಿಂತೆ..! ಯಾವಾಗ, ಯಡಿಯೂರಪ್ಪನವರ ಖುರ್ಚಿ ಬದಲಾಗತ್ತೆ ಅನ್ನೋ ಸ್ಪಷ್ಟ ಸಂದೇಶ ರಾಜ್ಯ ರಾಜಕೀಯ ಅಂಗಳದಲ್ಲಿ ಚರ್ಚೆಯಾಗತೊಡಗಿತೋ, ಅದ್ರ ಜೊತೆ...
ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?
ಬೆಂಗಳೂರು: ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಜುಲೈ 25 ರಂದು ವರಿಷ್ಟರು ನೀಡುವ ತೀರ್ಮಾನಕ್ಕೆ ನಾನು ಬದ್ದನಾಗಿ ನಡೆದುಕೊಳ್ಳುತ್ತೇನೆ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಒಂದು ಸಂದೇಶ ಬರುತ್ತೆ ಆ ಸಂದೇಶದ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಅಂತಾ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗುವೆ.. ಇನ್ನು, ಬಹುತೇಕ ರಾಜೀನಾಮೆ ನೀಡುವ ಕುರಿತು ಪರೋಕ್ಷವಾಗಿ ಹೇಳಿರೋ ಸಿಎಂ ಯಡಿಯೂರಪ್ಪ, ಜುಲೈ 26 ರಿಂದ ನಾನು ವರಿಷ್ಟರ ಸೂಚನೆಯಂತೆ ಕೆಲಸ ಶುರು ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ಕೊಡುತ್ತೇನೆ ಅಂತಾ ತಿಳಿಸಿದ್ರು. ಪ್ರತಿಭಟನೆ ಮಾಡಬೇಡಿ..! 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಆದ್ರೂ ಬಿಜೆಪಿ ನಂಗೆ ಎಲ್ಲವನ್ನೂ ಕೊಟ್ಟಿದೆ. 75 ವರ್ಷವಾದ್ರೂ ನನ್ನನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದಾರೆ. ಹೀಗಾಗಿ, ಯಾರೂ ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡಬೇಡಿ....
ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!
ಹುಬ್ಬಳ್ಳಿ: ಲಾರಿ ಹಾಗೂ ಆಟೋ ಮದ್ಯೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ, ಹುಬ್ಬಳ್ಳಿಯ ಹೊರಹೊಲಯದ ಗಬ್ಬೂರು ಬೈಪಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ವರೂರಿಗೆ ಹೊರಟಿದ್ದ ಆಟೋಗೆ, ಎದುರಿನಿಂದ ಬಂದ ಲಾರಿಯಿಂದ ಡಿಕ್ಕಿಯಾಗಿದೆ. ಹೀಗಾಗಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆದ್ರೆ, ಸಾವಿಗೀಡಾದ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೋಡಿಮಠದ ಶ್ರೀಗಳು ನುಡಿದ್ರು ಭಯಾನಕ ಭವಿಷ್ಯ..!
ಶಿರಸಿ: ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಸದ್ಯದ ರಾಜಕೀಯ ವಿಪ್ಲವಗಳ ಮದ್ಯೆ ಕೋಡಿಮಠದ ಶ್ರೀಗಳ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಸುಖಾಂತ್ಯ..! ರಾಜ್ಯದಲ್ಲಿ ಎದ್ದಿರೋ ರಾಜಕೀಯ ವಿಪ್ಲವ ಸದ್ಯದಲ್ಲೇ ಸುಖಾಂತ್ಯ ಕಾಣಲಿದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನೇರಲಕಟ್ಟೆ (ಈಚಲಬೆಟ್ಟ) ಗ್ರಾಮದಲ್ಲಿರೋ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಕೋಡಿಮಠದ ಶ್ರೀಗಳು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡೋ ಸ್ವಾತಂತ್ರ್ಯವಿದೆ. ಅದಕ್ಕೆ ಸ್ವಾಮೀಜಿಗಳು ಹೊರತಾಗಿಲ್ಲ’ ಅಂತ ಪರೋಕ್ಷವಾಗಿ ವೀರಶೈವ ಸ್ವಾಮೀಜಿಗಳ ನಡೆ ಸಮರ್ಥಿಸಿದರು. ಧರ್ಮಸಂಕಟ..! ‘ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು...