ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?

ಬೆಂಗಳೂರು: ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಮೌನ ಮುರಿದಿದ್ದಾರೆ.

ಜುಲೈ 25 ರಂದು ವರಿಷ್ಟರು ನೀಡುವ ತೀರ್ಮಾನಕ್ಕೆ ನಾನು ಬದ್ದನಾಗಿ ನಡೆದುಕೊಳ್ಳುತ್ತೇನೆ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಒಂದು ಸಂದೇಶ ಬರುತ್ತೆ ಆ ಸಂದೇಶದ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಅಂತಾ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಪಕ್ಷ ಸಂಘಟನೆಯಲ್ಲಿ ತೊಡಗುವೆ..
ಇನ್ನು, ಬಹುತೇಕ ರಾಜೀನಾಮೆ ನೀಡುವ ಕುರಿತು ಪರೋಕ್ಷವಾಗಿ ಹೇಳಿರೋ ಸಿಎಂ ಯಡಿಯೂರಪ್ಪ, ಜುಲೈ 26 ರಿಂದ ನಾನು ವರಿಷ್ಟರ ಸೂಚನೆಯಂತೆ ಕೆಲಸ ಶುರು ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ಕೊಡುತ್ತೇನೆ ಅಂತಾ ತಿಳಿಸಿದ್ರು.

ಪ್ರತಿಭಟನೆ ಮಾಡಬೇಡಿ..!
75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಆದ್ರೂ ಬಿಜೆಪಿ ನಂಗೆ ಎಲ್ಲವನ್ನೂ ಕೊಟ್ಟಿದೆ. 75 ವರ್ಷವಾದ್ರೂ ನನ್ನನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದಾರೆ. ಹೀಗಾಗಿ, ಯಾರೂ ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡಬೇಡಿ. ಯಾರೂ ನನ್ನ ಪರವಾಗಿ ಹೇಳಿಕೆ ನೀಡಬೇಡಿ ಅಂತಾ ಯಡಿಯೂರಪ್ಪ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಒಟ್ನಲ್ಲಿ, ರಾಜ್ಯ ರಾಜಕೀಯದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ ಸಿಎಂ ಯಡಿಯೂರಪ್ಪರ ಈ ಮಾತು ಮತ್ತಷ್ಟು ಕುತೂಹಲಕ್ಕ ಕಾರಣವಾಗಿದೆ.

 

error: Content is protected !!