ಮುಂಡಗೋಡ: “ಸಿಎಂ ರಾಜೀನಾಮೆ ನೀಡ್ತಿದಾರೆ, ಹೀಗಾಗಿ ನಾನೂ ಈಗ ಮಾಜಿ ಸಚಿವನಾಗಿಬಿಟ್ಟೆ..! ಹೀಗಂತ ಸಚಿವ ಶಿವರಾಂ ಹೆಬ್ಬಾರ್ ಬೇಸರದ ನುಡಿ ಹಂಚಿಕೊಂಡ್ರು.
“ಪಬ್ಲಿಕ್ ಫಸ್ಟ್ ನ್ಯೂಸ್” ಜೊತೆ ಎಕ್ಸ್ ಕ್ಲೂಸಿವ್ ಆಗಿ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್ ಭಾವುಕರಾದಂತೆ ಕಂಡ್ರು, ರಾಜ್ಯ ರಾಜಕೀಯದಲ್ಲಿ ಇಂದು ನಡೆದ ಮಹತ್ತರ ಬೆಳವಣಿಗೆ ಕುರಿತು ಬಹುಶಃ ಸಚಿವ ಶಿವರಾಮ್ ಹೆಬ್ಬಾರ್ ರವರಿಗೂ ಬೇಸರವಾಗಿರೋದು ಅವ್ರ ಮಾತುಗಳಲ್ಲಿ ಕಂಡು ಬಂತು.
ಮುಂದೇನು..?
ಸಿಎಂ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಯಡಿಯೂರಪ್ಪರ ರಾಜೀನಾಮೆ ಅಂಗೀಕರಿಸಿಯೂ ಆಗಿದೆ. ಸಿಎಂ ರಾಜೀನಾಮೆ ಬಳಿಕ ಬಹುತೇಕ ಸಚಿವ ಸಂಪುಟ ವಿಸರ್ಜನೆ ಆಗತ್ತೆ. ಹೊಸ ಸಿಎಂ ಆಯ್ಕೆಯಾಗಿ ಮತ್ತೆ ನೂತನ ಸಚಿವ ಸಂಪುಟ ರಚನೆಯಾಗತ್ತೆ. ಹೀಗಾಗಿ, ಸಿಎಂ ರಾಜೀನಾಮೆ ಬಳಿಕ ನಾವು ಹೇಗೆ ಸಚಿವರಾಗಿ ಉಳಿಯೋಕೆ ಸಾಧ್ಯ ಅಂದ್ರು ಹೆಬ್ಬಾರ್.
ಸಮಾವೇಶಕ್ಕೆ ಹಾಜರಾಗಿಲ್ಲ ಸಚಿವ್ರು..
ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಇಂದಿಗೆ ಎರಡು ವರ್ಷ ಪೂರೈಸಿದೆ. ಹೀಗಾಗಿ, ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಜಿಪಿ 2 ವರ್ಷಗಳ ಸಾಧನಾ ಸಮಾವೇಶ ನಡೆದಿತ್ತು. ಆದ್ರೆ ಸಚಿವ ಶಿವರಾಮ್ ಹೆಬ್ಬಾರ್ ಮಾತ್ರ ಯಲ್ಲಾಪುರ ಕ್ಷೇತ್ರದ ಪ್ರವಾಹ ಪೀಡಿತ ಸ್ಥಳಗಳಲ್ಲಿ ಪರಿಹಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ರು. ಯಾಕೆ ಸರ್ ಸಾಧನಾ ಸಮಾವೇಶದಲ್ಲಿ ಭಾಗಿಯಾಗಲಿಲ್ಲ..? ಅಂತಾ ಕೇಳಲಾದ ಪ್ರಶ್ನೆಗೆ ಅದ್ಯಾಕೋ ಗೊತ್ತಿಲ್ಲ ಹೆಬ್ಬಾರ್ ಸಾಹೇಬ್ರು ಉತ್ತರಿಸಲಿಲ್ಲ.
ನಿನ್ನೇನೆ ಮಾಹಿತಿಯಿತ್ತಾ..?
ಅಂದಹಾಗೆ ಇವತ್ತು ಸಾಧನಾ ಸಮಾವೇಶದಲ್ಲೇ ಸಿಎಂ ಯಡಿಯೂರಪ್ಪ ತಮ್ಮ ಪದತ್ಯಾಗ ಮಾಡ್ತಾರೆ ಅನ್ನೋ ಮಾಹಿತಿ ಸಚಿವ ಹೆಬ್ಬಾರ್ ರವರಿಗೂ ತಿಳಿದಿತ್ತಾ..? ಹೀಗಾಗಿನೇ ಹೆಬ್ಬಾರ್ ಸಾಹೇಬ್ರು ತಮ್ಮದೇ ಸರ್ಕಾರದ ಸಾಧನಾ ಸಮಾವೇಶಕ್ಕೆ ಹಾಜರಾಗದೇ ಕ್ಷೇತ್ರದಲ್ಲೇ ಉಳಿದ್ರಾ..? ಹಾಗಂತ, ಯಾರಿಗೂ ಗೊತ್ತಿಲ್ಲ.
ವಲಸಿಗರಿಗೆ ಬಿಎಸ್ ವೈ ಅಭಯ..!
ಇನ್ನು, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ನನ್ನ ರಾಜೀನಾಮೆಯಿಂದ ವಲಸಿಗರಿಗೆ ಯಾವ ಅಬಧ್ರತೆಯೂ ಇಲ್ಲ. ನೂತನವಾಗಿ ಅದು ಯಾರೇ ಮುಖ್ಯಮಂತ್ರಿ ಆದ್ರೂ, ಸರ್ಕಾರದ ರಚನೆಗೆ ಸಹಕರಿಸಿದ್ದ ವಲಸಿಗರಿಗೆ ಯಥಾ ಸ್ಥಿತಿಯಲ್ಲಿ ಸ್ಥಾನಮಾನ ಸಿಗಲಿದೆ ಅಂತಾ ತಿಳಿಸಿದ್ದಾರೆ.