“ಲಿಂಗಾಯತ” ಶಾಸಕರಿಗೆ ಸಿಎಂ ಸ್ಥಾನ ಪಕ್ಕಾ..! ಆ ಇಬ್ಬರಲ್ಲಿದೆ ತೀವ್ರ ಪೈಪೋಟಿ..!!

ಯಸ್, ಬಿಜೆಪಿ ಹೈಕಮಾಂಡ್ ಬಯಸಿದಂತೆ ಎಲ್ಲವೂ ಆಗಿ ಹೋಗಿದೆ. ಸಿಎಂ ಆಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದ್ರ ಜೊತೆ ಈಗ ಯಡಿಯೂರಪ್ಪ ಸಚಿವ ಸಂಪುಟ ಮಾಜಿಯಾಗಿದೆ.

ಹಾಗಾದ್ರೆ ಯಾರು ಮುಂದಿನ ಸಿಎಂ..?
ಈ ಕುತೂಹಲ ಸದ್ಯ ಇಡೀ ರಾಜ್ಯದ ಜನರಲ್ಲಿದೆ. ಬಹುಶಃ ಅಂದುಕೊಂಡಂತೆ ಆದ್ರೆ ಗುರುವಾರ ಅಥವಾ ಶುಕ್ರವಾರ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸೋದು ಪಕ್ಕಾ ಎನ್ನುವಂತಾಗಿದೆ.

ಆ ಇಬ್ಬರ ನಡುವೆಯಷ್ಟೇ ಪೈಪೋಟಿ..!
ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಬಾಗಲಕೋಟೆ ಬೀಳಗಿ ಶಾಸಕ ಮುರುಗೇಶ್ ನಿರಾಣಿ ನಡುವೆ ಸಿಎಂ ಪಟ್ಟಕ್ಕಾಗಿ ಹಾಣಹಣಿ ನಡೆಯುತ್ತಿದೆ ಎನ್ನಲಾಗ್ತಿದೆ‌. ಆದ್ರೆ, ಇಬ್ಬರ ನಡುವೆ ಯಾರು ಹಿತವರು ಅನ್ನೋದನ್ನ ಹೈಕಮಾಂಡ್ ಅಳೆದು ತೂಗಿ ತೀರ್ಮಾನಿಸಲಾಗ್ತಿದೆ ಅನ್ನೋ ಮಾಹಿತಿ ಇದೆ.

ಅರವಿಂದ್ ಬೆಲ್ಲದ್

ಹೊಸ ಮುಖಕ್ಕೆ ಆದ್ಯತೆ..?
ಅಂದಹಾಗೆ, ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಪಕ್ಕಾ ಪ್ಲಾನ್ ಮೂಲಕವೇ ಹೊಸ ಸಿಎಂ ಆಯ್ಕೆ ಮಾಡಲು ಸನ್ನಧ್ದವಾಗಿದೆ. ಬಹುತೇಕ ಲಿಂಗಾಯತ ಶಾಸಕರಿಗೇ ಸಿಎಂ ಸ್ಥಾನ ಪಕ್ಕಾ ಎನ್ನುವಂತಾಗಿದ್ದು, ಗೋವಾ, ಮಹಾರಾಷ್ಟ್ರ ಮಾದರಿಯಲ್ಲೇ ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡೋ ಸಾಧ್ಯತೆಗಳೇ ಹೆಚ್ಚಿವೆ. ಹೀಗಾಗಿ, ಕ್ಲೀನ್ ಇಮೇಜ್ ಹೊಂದಿರೋ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ, ಪಂಚಮಸಾಲಿ ಲಿಂಗಾಯತ ಸಮುದಾಯದ ಅರವಿಂದ್ ಬೆಲ್ಲದ್ ಗೆ ಈ ಸಾರಿ ಸಿಎಂ ಪಟ್ಟ ಒಲಿಯತ್ತಾ..? ಅಂತಹದ್ದೊಂದು ಚರ್ಚೆ ಹೈಕಮಾಂಡ್ ಅಂಗಳದಲ್ಲಿದೆ.

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ..?
ಇ‌ನ್ನು, ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಮುನ್ನಲೆಗೆ ಬಂದಿರೋ ಮತ್ತೊಂದು ಹೆಸರು ಅಂದ್ರೆ ಅದು ಮುರುಗೇಶ್ ನಿರಾಣಿ. ಹೈಕಮಾಂಡ್ ಜೊತೆ ನಿಕಟ ಬಾಂದವ್ಯ ಹೊಂದಿರೋ ನಿರಾಣಿ ಯಡಿಯೂರಪ್ಪನವರಿಗೂ ಪರಮಾಪ್ತ, ಇನ್ನು, ಅಮಿತ್ ಶಾ ಜೊತೆಗೂ ಉತ್ತಮ ಬಾಂದವ್ಯ ಹೊಂದಿರೋ ನಿರಾಣಿಗೆ ಈ ಬಾರಿ ಸಿಎಂ ಪಟ್ಟ ಗ್ಯಾರಂಟಿನಾ..? ಕೆಲವೇ ಗಂಟೆಗಳಲ್ಲಿ ಪಕ್ಕಾ ಆಗಲಿದೆ.

ಸಚಿವ ಸಂಪುಟದಲ್ಲೂ ಚೇಂಜ್..?
ಇನ್ನೇನು ನೂತನ ಸಿಎಂ ಆಯ್ಕೆ ನಡೆದು ಪ್ರಮಾಣ ವಚನ ಸ್ವೀಕರಿಸಿದ ನಂತರ ಅದ್ರ ಜೊತೆಗೆ ನೂತನವಾಗೇ ಸಚಿವ ಸಂಪುಟ ರಚನೆಯಾಗತ್ತೆ. ಆದ್ರೆ ಈ ಬಾರಿಯ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಹೆಚ್ಚು ಆದ್ಯತೆ ನೀಡಲಾಗತ್ತೆ ಅನ್ನೋ ಮಾತು ಕೇಳಿ ಬಂದಿದೆ. ಹಿರಿಯ ಮುಖಂಡರಿಗೆ ಪಕ್ಷದ ಸಂಘಟನೆಗೆ ಬಿಟ್ಟು, ಹೊಸ ಹೊಸ ಮುಖಗಳಿಗೆ ಅಧಿಕಾರದಲ್ಲಿ ಕೂರಿಸೋ ಪ್ಲಾನ್ ಈಗಾಗಲೇ ಹೈಕಮಾಂಡ್ ಮಾಡಿ ಆಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

error: Content is protected !!