ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ಗ್ರಾಮದೇವಿ ದ್ಯಾಮವ್ವ ತಾಯಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. 108 ದಿನದ ಉಡಿತುಂಬುವ ಕಾರ್ಯಕ್ರಮವನ್ನು ಗ್ರಾಮಸ್ಥರು ಶೃದ್ದಾಪೂರ್ವಕವಾಗಿ ನೆರವೇರಿಸಿದ್ರು. ಈ ವೇಳೆ ದ್ಯಾಮವ್ವ ತಾಯಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬಲಾಯಿತು. ವಿಶೇಷವಾಗಿ ಪೂಜೆ ನೆರವೇರಿಸಿ ಪ್ರಸಾದ ಹಂಚಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಮುತ್ತೈದೆಯರು ಸೇರಿದಂತೆ ಹಲವರು ಭಾಗಿಯಾಗಿದ್ರು.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿದ್ದಪ್ಪ ಹಡಪದ್ ಗೆ ಟಿಕೆಟ್ ನೀಡುವಂತೆ ಒತ್ತಾಯ: ಸಚಿವ ಹೆಬ್ಬಾರ್ ರನ್ನು ಭೇಟಿ ಮಾಡಿದ ಹುನಗುಂದ ಮುಖಂಡರು..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮುಖಂಡರು ಹಾಗೂ ಗ್ರಾಮದ ನೂರಾರು ಜನ ಬಿಜೆಪಿ ಕಾರ್ಯಕರ್ತರು ಇಂದು ಯಲ್ಲಾಪುರಕ್ಕೆ ತೆರಳಿ, ಸಚಿವ ಶಿವರಾಮ್ ಹೆಬ್ಬಾರ್ ರವರನ್ನು ಭೇಟಿಯಾಗಿದ್ರು. ಮುಂಬರುವ ಜಿಲ್ಲಾಪಂಚಾಯತಿ ಚುನಾವಣೆಗೆ ಇಂದೂರು ಜಿ ಪಂ ಕ್ಷೇತ್ರದಿಂದ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ್ ರವರಿಗೇ ಅಭ್ಯರ್ಥಿಯನ್ನಾಗಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಿದ್ದಪ್ಪ ಹಡಪದ್ ರವರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಕಳೆದ ಎರಡು ಬಾರಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತಿದ್ದಾರೆ. ಇಂದೂರು ಕ್ಷೇತ್ರದಲ್ಲಿ ಸಿದ್ದಪ್ಪ ಹಡಪದ್ ಪರವಾಗಿ ಅನುಕಂಪ ಇದೆ. ಅದಕ್ಕಾಗಿ ಅವರಿಗೆ ಟಿಕೆಟ್ ನೀಡಬೇಕು ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮುಂಡಗೋಡ ಬಿಜೆಪಿಯಲ್ಲೀಗ “ಜಂಪಿಂಗ್” ಪರ್ವ ಶುರು..! ಒಳಗೊಳಗೇ ನಡೀತಿದೆ ಭಾರೀ ಮಸಲತ್ತು..!!
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸ್ಪೋಟಕ ಬದಲಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಕಳಾಹೀನವಾಗಿರೋ “ಕೈ” ಪಾಳಯಕ್ಕೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿಗಳೇ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಬಾತ್ಮಿ ಕ್ಷೇತ್ರದ ಬಿಜೆಪಿ ಪಾಲಿಗೆ ಖಂಡಿತ ಪೂರಕವಾಗಿಲ್ಲ. ಬದಲಾಗಿ ಇಲ್ಲಿನ ಬಿಜೆಪಿಗೆ “ಅದೇನೋ ಕಾದಿದೆ” ಅನ್ನೋ ಸ್ಪಷ್ಟ ಸೂಚನೆಗಳು ಕಾಣಸಿಗ್ತಿವೆ. ಆಂತರಿಕ ಕುದಿ… ನಿಜ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಇಡೀ ಕ್ಷೇತ್ರದಲ್ಲಿ ಆಂತರಿಕ ಬೆಗುದಿ ಅನ್ನೋದು ಬಹುಶಃ ಯಾರೂ ನಿರೀಕ್ಷಿಸದ ಮಟ್ಟಿಗೆ ಕುದಿಯುತ್ತಿದೆ. ಮತ್ತದೇ ಹಳಬರು, ಹೊಸಬರ ನಡುವೆ ಇನ್ನಿಲ್ಲದ ಪೀಕಲಾಟಗಳು ಚಾಲ್ತಿಯಲ್ಲಿವೆ. “ಸದ್ಯ ಬಿಜೆಪಿಯಲ್ಲಿ ಹಳಬರಿಗೆ ಅಷ್ಟಕ್ಕಷ್ಟೇ ರೀ, ನಮಗೇಲ್ಲ ಯಾರೂ ಮಾತಾಡಿಸಲ್ಲ” ಅನ್ನೋ ಕಾಮನ್ ಆಕ್ರೋಶಗಳು ಒಳಗೊಳಗೇ ಬೇಯುತ್ತಿವೆ. ಅದೇಲ್ಲ ಯಾವಾಗ ಸ್ಪೋಟಗೊಳ್ಳತ್ತೋ ಗೊತ್ತಿಲ್ಲ. ಆದ್ರೆ, ಸ್ಪೋಟಗೊಳಿಸಲು ಬೇಕಾದ ಎಲ್ಲಾ ತಯಾರಿ, ಆ ಅತೃಪ್ತರಿಂದ ವ್ಯವಸ್ಥಿತವಾಗೇ ಚಾಲ್ತಿ ಪಡೆದುಕೊಂಡಿದೆ. ಮುಂಡಗೋಡ ಬಿಜೆಪಿ ತಳಮಳ.. ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ...
ಈ ಊರಲ್ಲಿ ಮೊಹರಂ ದೇವರಿಗೆ ಹನುಮಪ್ಪನ ಹೂವಿನ ಪ್ರಸಾಧ ಬೇಕೇ ಬೇಕು..!
ಕೊಪ್ಪಳ: ಆ ಒಂದು ಗ್ರಾಮದ ಮೊಹರಂ ಹಬ್ಬಕ್ಕೆ ಇಡೀ ರಾಜ್ಯದ ಕೆಲ ಜಿಲ್ಲೆಗಳು ಸಾಕ್ಷಿಯಾಗುತ್ತವೆ. ಆ ಒಂದು ದೃಶ್ಯವನ್ನು ಕಣ್ಣತುಂಬಿಕೊಳ್ಳಲು ಗ್ರಾಮದ ಜನರು ಕಾತುರದಿಂದ ಕಾಯುತ್ತಾರೆ. ಆ ಗ್ರಾಮದ ಹನುಮಪ್ಪ ಹೂವು ಕೊಟ್ಟರೆ ಪೀರ್ ದೇವರು ಹೊತ್ತ ದೈವಭಕ್ತ ದರ್ಶನ ಪಡೆದು ಮುಂದೆ ಸಾಗುತ್ತಾರೆ. ನಂತರವೇ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಹೌದು, ಹೀಗೆ ಪೀರ್ ದೇವರು ಹೊತ್ತ ಮುಸ್ಲಿಂ ದೈವ ಭಕ್ತನಿಗೆ, ಹೂವು ಕೊಟ್ಟು ಆಶೀರ್ವಾದ ಮಾಡುತ್ತಿರುವ ಹನುಮಪ್ಪ ದೇವರು. ದೇವಸ್ಥಾನದೊಳಗೆ ಬಂದು ಭಕ್ತಿಪೂರಕವಾಗಿ ಹನುಮನ ದರ್ಶನ ಪಡೆಯುತ್ತಿರುವ ಪೀರ್ ದೇವರು ಹೊತ್ತ ದೈಭಕ್ತ. ಭಕ್ತಿಗೆ ಮೆಚ್ಚಿ ಹೂವುಕೊಡುತ್ತಿರುವ ಹನುಮಪ್ಪ ದೇವರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕವಲೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹೆಚ್ಚಾಗಿದ್ದಾರೆ. ಆದರೆ ಮೊಹರಂ ಹಬ್ಬಕ್ಕೆ ಈ ಕವಲೂರು ಗ್ರಾಮ ಭಾವೈಕ್ಯತೆಯನ್ನು ಇಡೀ ದೇಶ ತಿರುಗಿ ನೋಡುವಂತೆ ಮಾಡಿದೆ. ಯಾವುದೇ ಧರ್ಮ, ಜಾತಿ ಭೇದಭಾವ ಇಲ್ಲದೆ...
ಮೊಹರಂ ನಲ್ಲಿ ದೇವರಿಗೆ ವಿದ್ಯುತ್ ತಾಗಿ ಇಬ್ಬರ ದಾರುಣ ಸಾವು..!
ರಾಯಚೂರು: ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡದಲ್ಲಿ ಇಬ್ಬರ ಸಾವು ಕಂಡ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ನಡೆದಿದೆ. ಹಸೇನಸಾಬ್ ಮುಲ್ಲಾ (55), ಹುಲಿಗೆಮ್ಮ (25) ಮೃತ ದುರ್ದೈವಿಗಳು. ಇಂದು ಬೆಳಗಿನ ಜಾವ 5:30 ಕ್ಕೆ ಘಟನೆ ನಡೆದಿದ್ದು, ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ಅವಘಡ ಸಂಭವಿಸಿದೆ. ಹುಸೇನ್ ಪಾಶಾ ದೇವರು ದಾದನ್ ದೊಡ್ಡಿ ದರ್ಗಾಕ್ಕೆ ಭೇಟಿ ನೀಡುವ ವೇಳೆ ದೇವರು ಮೇನ್ ವೈಯರ್ ಗೆ ತಾಗಿದೆ. ಪರಿಣಾಮ ದೇವರನ್ನು ಹಿಡಿದ ವ್ಯಕ್ತಿ ಮತ್ತು ದರ್ಶನಕ್ಕೆಂದು ಹೋಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಇನ್ನು ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದು ಉತ್ತರ ಕನ್ನಡದ ಹೆಮ್ಮೆ..! ಪ್ರತಿಷ್ಠಿತ ನಾಸಾಗೆ ಕನ್ನಡ ಕುವರನ ಆಯ್ಕೆ..!!
ಸಿದ್ದಾಪುರ: ಹಂಟ್ಸ್ವಿಲ್ ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ NASA ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 135000 ಅಮೇರಿಕನ್ ಡಾಲರ್ ಅನ್ನು ಸ್ಟೈಫಂಡ್ , ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ಮತ್ತು ಸಂಶೋಧನೆಯನ್ನು ಮುಂದುವರೆಸಲು ನೀಡಲಾಗುವುದು ಎಂದು ವಿಶ್ವವಿದ್ಯಾನಿಯಲದ ಅಧಿಕೃತ ವೆಬ್ಸೈಟ್ ತನ್ನ ನ್ಯೂಸ್ ಲೆಟರ್ನಲ್ಲಿ ತಿಳಿಸಿದೆ. ಎರಡನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಹೆಗಡೆ, ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಮತ್ತು ಯುಎಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್ನಲ್ಲಿ ಪದವಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ, ಬಾಹ್ಯಾಕಾಶ ಹವಾಮಾನದ ಕುರಿತು ತಮ್ಮ ಸಂಶೋಧನೆಯನ್ನು ಮುಂದುವರಿಸಲು ಈ ಅನುದಾನವನ್ನು ನೀಡಲಾಗಿದೆ. ಹೆಗಡೆಯವರ ಸಂಶೋದನಾ...
ಮೊಹರಂನಲ್ಲಿ ದೇವರು ಹೊತ್ತ ಯುವಕ ಬೆಂಕಿ ಹಾಯುವಾಗ ಬೆಂಕಿಯಲ್ಲೇ ಬಿದ್ದ..!
ಕೊಪ್ಪಳ: ಮೊಹರಂ ಹಬ್ಬದ ವೇಳೆ ಅವಾಂತರವಾಗಿದೆ. ಅಲಾಯಿ ಕುಂಡದ ಬೆಂಕಿಯಲ್ಲಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದಾನೆ. ಬೆಂಕಿ ಹಾಯುವಾಗ ಕಾಲು ಜಾರಿ ಬೆಂಕಿಯಲ್ಲಿ ಯುವಕ ಬಿದ್ದಿದ್ದಾನೆ. ತಕ್ಷಣವೇ ಎದ್ನೊ ಬಿದ್ನೋ ಅಂತಾ ಓಡಿದ್ದಾನೆ. ಅಂದಹಾಗೆ, ಇದು ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ನಡೆದಿರೋ ಘಟನೆ, ಘಟನೆ ನಡೆದ ಬಳಿಕ ಸ್ಥಳೀಯರು ಆಸ್ಪತ್ರೆಯಲ್ಲಿ ಯವಕನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾಗೆ, ಅಗ್ನಿಕುಂಡದಲ್ಲಿ ಯುವಕ ಬೀಳುವ ವಿಡಿಯೋ ವೈರಲ್ ಆಗಿದೆ. ಮೊಹರಂ ಹಬ್ಬದಲ್ಲಿ ದೇವರು ಹೊತ್ತವರು ಅಗ್ನಿಯನ್ನು ಹಾಯುವುದು ಸಂಪ್ರದಾಯ. ಇದೇ ವೇಳೆ ಯುವಕನೂ ಸಹ ಬೆಂಕಿ ಹಾಯುವಾಗ ಘಟನೆ ನಡೆದಿದೆ.
ಮುಂಡಗೋಡ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರ ಕೈಚಳಕ, ಪೊಲೀಸರು ದೌಡು..!
ಮುಂಡಗೋಡ: ಪಟ್ಟಣದ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ತಡರಾತ್ರಿ ಅಂಗಡಿಯ ಮೇಲ್ಚಾವಣಿಯ ಹೆಂಚು ತೆರೆದು ಒಳನುಗ್ಗಿ ಕಳ್ಳತನ ಮಾಡಿರೋ ಖದೀಮರು ವೈನ್ ಶಾಪ್ ನಲ್ಲಿದ್ದ ಹಣ ಸೇರಿದಂತೆ ಮದ್ಯದ ಬಾಟಲ್ ಗಳನ್ನೂ ಕದ್ದೋಯ್ದಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಳ್ಳತನವಾದ ಹಣವೆಷ್ಟು..? ಯಾವ್ಯಾವ ವಸ್ತುಗಳನ್ನು ಎಗರಿಸಲಾಗಿದೆ ಅನ್ನೋ ಬಗ್ಗೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ಕಳ್ಳತನದ ಅಸಲೀ ಮಾಹಿತಿಗಳು ಹೊರಬರಲಿದೆ.
ಬಾಚಣಕಿ ತಾಪಂ ಕ್ಷೇತ್ರಕ್ಕೆ ಮೊನ್ಸಿ ಥಾಮಸ್ ಗೆ “ಕೈ” ಬಲ..? ತೆರೆಮರೆಯಲ್ಲೇ ನಡೀತಿದೆ ಕಸರತ್ತು..!
ಮುಂಡಗೋಡ: ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆ ಕಾವು ಮತ್ತೆ ಏರ ತೊಡಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತುದಿಗಾಲಲ್ಲಿ ನಿಂತಿದೆ ಅನ್ನೋ ಸಂಗತಿ ಹೊರಬೀಳುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮತ್ತೆ ಒಳಗೊಳಗೆ ಚುನಾವಣೆಯ ಪೀಕಲಾಟಗಳು ಶುರುವಾಗಿವೆ. ಅದರ ಭಾಗವಾಗಿ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬಾಚಣಕಿ ತಾಪಂ ಕ್ಷೇತ್ರದಲ್ಲಿ ಟಿಕೆಟ್ ಹಂಬಲಗಳು ಎರಡೂ ಕ್ಷೇತ್ರದಲ್ಲಿ ಚಾಲ್ತಿ ಪಡೆದುಕೊಂಡಿವೆ. ಕಾಂಗ್ರೆಸ್ ಗೆ ಮೊನ್ಸಿ..! ಬಾಚಣಕಿ ತಾಪಂ ಕ್ಷೇತ್ರ ಬಾಚಣಕಿ, ನ್ಯಾಸರ್ಗಿ, ಅರಷಿಣಗೇರಿ, ಮಜ್ಜಿಗೇರಿ ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಈಗಾಗಲೇ ಸಾಮಾನ್ಯ ಮೀಸಲಾತಿ ಘೋಷಣೆಯಾಗಿದೆ. ಹೀಗಾಗಿ, ಕಾಂಗ್ರೆಸ್ ನಲ್ಲಿ ಒಂದಿಷ್ಟು ರೋಚಕ ಅನ್ನುವಷ್ಟು ಟಿಕೆಟ್ ಸೆಣಸಾಟಗಳು ಶುರುವಾಗಿವೆ. ಅರಷಿಣಗೇರಿಯ ಮೊನ್ಸಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಸರತ್ತು ಶುರುವಿಟ್ಟಿದ್ದಾರೆ. ಯಾರು ಈ ಮೊನ್ಸಿ..? ಇದು 10 ವರ್ಷಗಳ ಹಿಂದಿನ ಮಾತು, ಇಂದೂರು ಜಿಲ್ಲಾವಪಂಚಾಯತಿ ಕ್ಷೇತ್ರದಲ್ಲಿ ಜನತಾ ಪರಿವಾರದ ಒಂದಿಷ್ಟು ಗಟ್ಟಿ ನಾಯಕರು ಇದ್ದರು. ಹುನಗುಂದದ ಆರ್.ಸಿ.ಅಂಗಡಿ, ಇಂದೂರಿನ ಎಸ್.ಎನ್....
ಹುಲಿ ವೇಷದ ಕಂದಾಚಾರದಲ್ಲಿ ಪುಟ್ಟ ಕಂದಮ್ಮಗಳ ಶೋಷಣೆ ಎಷ್ಟು ಸರಿ..? ಅಧಿಕಾರಿಗಳೇ ಒಂದಿಷ್ಟು ಗಮನಹರಿಸಿ..!
ಮುಂಡಗೋಡ: “ಮೊಹರಂ” ಇದು ಬಹುತೇಕ ಹಿಂದು ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲ್ಪಡೋ ಹಬ್ಬ. ಈ ಹಬ್ಬ ಬಂತು ಅಂದ್ರೆ ಸಾಕು ತಾಲೂಕಿನಲ್ಲಿ ಕೆಲವು ಮೂಢ ನಂಬಿಕೆಗಳೂ ಕೂಡ ಜೊತೆ ಜೊತೆಯಾಗೇ ಜಾರಿಯಾಗುತ್ತಿವೆ. ಪ್ರತೀ ವರ್ಷವೂ ಈ ಹಬ್ಬದಲ್ಲಿ ಅದೊಂದು ಪದ್ದತಿ ನಿಜಕ್ಕೂ ಪ್ರಜ್ಞಾವಂತರಿಗೆ ಒಂದಿಷ್ಟು ಆತಂಕ ಮೂಡಿಸಿದೆ. ಹುಲಿವೇಷ..! ಅಸಲು, ಮೊಹರಂ ಬಂತು ಅಂದ್ರೆ ತಾಲೂಕಿನಲ್ಲಿ ಅದೊಂದು ಪದ್ದತಿ ಇವತ್ತಿಗೂ ಜಾರಿಯಲ್ಲಿದೆ. ಪಂಜಾಗಳಿಗೆ ಹರಕೆ ಹೊರುವ ಭಕ್ತರು ಹರಕೆ ಈಡೇರಿದ ಮೇಲೆ ಹುಲಿವೇಷ ಹಾಕುತ್ತಾರೆ. ಮೈಗೇಲ್ಲ ಬಣ್ಣದಿಂದ ಹುಲಿಯ ಚಿತ್ತಾರ ಬಿಡಿಸಿಕೊಂಡು ತಾಲೂಕಿನ ಪ್ರತೀ ಗ್ರಾಮಗಳ ಮನೆ ಮನೆಗಳಿಗೂ ತೆರಳುತ್ತಾರೆ. ಹಾಗೂ ಹಾಗೆ ಮನೆಗಳಿಗೆ ತೆರಳಿದ್ದಾಗ ಮನೆಯವರು ನೀಡುವ ದವಸ ಧಾನ್ಯ, ಹಣ ಇತ್ಯಾದಿಗಳನ್ನು ಶೇಖರಿಸಿಕೊಳ್ಳುತ್ತಾರೆ ನಂತರ ಅದರಿಂದಲೇ ದೇವರಿಗೆ ಹರಕೆ ತೀರಿಸೋ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಂತ, ನಾವು ಅಂತಹ ನಂಬಿಕೆಗಳು, ಸಂಪ್ರದಾಯಗಳಿಗೆ ವಿರೋಧಿಸುವುದಿಲ್ಲ. ಬದಲಾಗಿ, ಗೌರವಿಸ್ತಿವಿ. ಆದ್ರೆ ಅಂತಹ ನಂಬಿಕೆ ಅನ್ನೋದು ತಾಲೂಕಿನಲ್ಲಿ ಕೆಲವು ಮುಗ್ದ ಮಕ್ಕಳ ಜೀವ...