ಗಂಡ ಗುಳೇ ಹೋಗಿದ್ದ, ಪ್ರಿಯಕರನೊಂದಿಗೆ ಸೇರಿ ಹೆಂಡತಿ ಮಾಡಿಕೊಂಡಿದ್ದೇನು ಗೊತ್ತಾ..? ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಗಂಡ ಗುಳೇ ಹೋಗಿದ್ದ, ಪ್ರಿಯಕರನೊಂದಿಗೆ ಸೇರಿ ಹೆಂಡತಿ ಮಾಡಿಕೊಂಡಿದ್ದೇನು ಗೊತ್ತಾ..? ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಮುದ್ದೇಬಿಹಾಳ: ಆಕೆಯ ವಯಸ್ಸು ಈಗಿನ್ನೂ 36, ಮದುವೆಯಾಗಿ 3 ಮಕ್ಕಳಿದ್ದಾರೆ, ಮತ್ತವನಿಗೆ 40 ವರ್ಷ ವಯಸ್ಸು ಆತನಿಗೂ ಮದುವೆಯಾಗಿ ಬರೋಬ್ಬರಿ 6 ಮಕ್ಕಳಿಗೆ ತಂದೆಯಾಗಿದ್ದಾನೆ. ಹೀಗಿದ್ರೂ ಇವರ ಕಳ್ಳಾಟ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ರೆ ಅವ್ರ ಕಳ್ಳಾಟ ಅನ್ನೋದು ಇವತ್ತು ನಡೆಯಬಾರದ ಘಟನೆಗೆ ಸಾಕ್ಷಿಯಾಗಿದೆ. ಎಂದೂ ಕೇಳರಿಯದ ಅಮಾನವೀಯ, ಮನಕಲುಕುವ ಘಟನೆ ನಡೆದುಹೋಗಿದೆ. ಆಕೆಯ ಹೆಸ್ರು ರೇಣುಕಾ.. ಅಂದಹಾಗೆ ಆಕೆಯ ಹೆಸ್ರು ರೇಣುಕಾ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಗ್ರಾಮದವಳು. ಮೂರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಆಕೆಯ ಪತಿ ಹೊಟ್ಟೆ ಪಾಡಿಗಾಗಿ ಕೇರಳಕ್ಕೆ ದುಡಿಯಲು ಹೋಗಿದ್ದಾನೆ. ಆ ಹೊತ್ತಲ್ಲೇ ರೇಣುಕಾಗೆ ಪರಿಚಯವಾಗಿದ್ದು ಪಕ್ಕದ ಊರಿನ ಕುಡುಕ ಬಸವರಾಜ್.. ಬಸವರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ರೇಣುಕಾ ಇವತ್ತು ಮಾಡಬಾರದ ಕೆಲಸ ಮಾಡಿ ಹೆಣವಾಗಿದ್ದಾಳೆ. ಅಯ್ಯೋ ಅದು ಭೀಕರ ದೃಷ್ಯ..! ನಡೆದ ಘಟನೆ ಇಷ್ಟೆ, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಇವತ್ತು ಇಬ್ಬರು ಪ್ರೇಮಿಗಳು ಭೇಟಿಯಾಗಿದ್ದಾರೆ. ಕೆಲ ಹೊತ್ತು ಇಬ್ಬರೂ ಅಲ್ಲಿಯೇ ಪ್ರಣಯದಾಟವನ್ನೂ...

ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ, ಪ್ರೇಮ, ಪ್ರಣಯ; ನಂತರ ನಡೆದದ್ದು ದುರಂತ ಅಂತ್ಯ..! ಬೆಚ್ಚಿ ಬೀಳಿಸುತ್ತಿದೆ ಪ್ರೇಮಿಗಳ ಡಬಲ್ ಮರ್ಡರ್..!

ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ, ಪ್ರೇಮ, ಪ್ರಣಯ; ನಂತರ ನಡೆದದ್ದು ದುರಂತ ಅಂತ್ಯ..! ಬೆಚ್ಚಿ ಬೀಳಿಸುತ್ತಿದೆ ಪ್ರೇಮಿಗಳ ಡಬಲ್ ಮರ್ಡರ್..!

ದೇವರಹಿಪ್ಪರಗಿ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೀತಾ..? ಇಂತಹದ್ದೊಂದು ಪ್ರಶ್ನೆ ಇವತ್ತು ಮಂಗಳವಾರ ಮದ್ಯಾಹ್ನ ನಡೆದಿರೋ ಭೀಕರ ಘಟನೆ ನೋಡಿದ್ರೆ ಎಂಥವರಿಗೂ ಅನ್ನಿಸದೇ ಇರಲ್ಲ. ಹೌದು, ಸಮಾನತೆ ಸಂದೇಶ ಸಾರಿದ ವಿಶ್ವಗುರು ಬಸವಣ್ಣನ ನಾಡಿನಲ್ಲಿ ಘನಘೋರ ಘಟನೆ ನಡೆದಿದೆ. ಅಪ್ರಾಪ್ತ ಯುವಕ ಹಾಗೂ ಅಪ್ರಾಪ್ತೆಯಾಗಿದ್ದ ಪ್ರೇಮಿಗಳಿಬ್ಬರ ಭೀಕರ ಡಬಲ್‌ ಮರ್ಡರ್ ನಡೆದಿದೆ. ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಘಟನೆ ನಡೆದಿದ್ದು ಬೆಚ್ಚಿ ಬೀಳಿಸಿದೆ. ಇಬ್ಬರೂ ಅಪ್ರಾಪ್ತರೇ..? ಸಲಾದಹಳ್ಳಿ ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ(19) ಹಾಗೂ ಪಕ್ಕದ ಖಾನಾಪುರ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆ ನಡೆದಿದೆ. ಬಸವರಾಜ ಹಾಗೂ ಅಪ್ರಾಪ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ರು. ಸಲಾದಹಳ್ಳಿ ಹಾಗೂ ಖಾನಾಪುರ ಅಕ್ಕಪಕ್ಕದ ಗ್ರಾಮಗಳು, ಹೀಗಾಗಿ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಅನ್ಯ ಕೋಮಿನವರಾಗಿದ್ದರಿಂದ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಇಂದು ಮದ್ಯಾಹ್ನ ಇಬ್ಬರೂ ಪ್ರೀತಿ ಪ್ರೇಮದ ಸಲ್ಲಾಪಕ್ಕೆ ಸೇರಿದ್ದ ಸಮಯದಲ್ಲೆ ಬಾಲಕಿಯ ತಂದೆ ನೋಡಿದ್ದಾನೆ. ಮರ್ಯಾದಾ ಹತ್ಯೆಯಾ..? ಅನ್ಯ ಕೋಮಿನ...

ಸಧ್ಯಕ್ಕೆ ಕಾಲೇಜು ಆರಂಭಕ್ಕೆ ಮಾತ್ರ ಚಿಂತನೆ, 1ರಿಂದ10 ನೇ ತರಗತಿ ಸಧ್ಯಕ್ಕಿಲ್ಲ: ಸಿಎಂ ಯಡಿಯೂರಪ್ಪ

ಸಧ್ಯಕ್ಕೆ ಕಾಲೇಜು ಆರಂಭಕ್ಕೆ ಮಾತ್ರ ಚಿಂತನೆ, 1ರಿಂದ10 ನೇ ತರಗತಿ ಸಧ್ಯಕ್ಕಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು:ರಾಜ್ಯದಲ್ಲಿ ಸಧ್ಯಕ್ಕೆ ಕಾಲೇಜುಗಳನ್ನು ಮಾತ್ರ ಆರಂಭಿಸಲು ಚಿಂತನೆ ನಡೆಸಲಾಗಿದ್ದು, 18 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಿದ ನಂತರ ಕಾಲೇಜುಗಳು ಆರಂಭವಾಗಲಿದೆ. ಆದರೆ, 18 ವರ್ಷದ ಕೆಳಿಗಿನ ಮಕ್ಕಳಿಗೆ ಲಸಿಕೆ ಬಾರದಿರುವುದರಿಂದ 10ನೇ ತರಗತಿಯವರೆಗೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಡಾ.ದೇವಿ ಪ್ರಸಾದ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸ್ವೀಕರಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ತಜ್ಞರ ಸಮಿತಿ ಹಲವಾರು ಸಲಹೆಗಳನ್ನು ನೀಡಿದೆ. 3ನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಮಕ್ಕಳ ತೀವ್ರ ನಿಗಾ ಘಟಕ, ಮಕ್ಕಳ ಆಸ್ಪತ್ರೆ ಸ್ಥಾಪನೆ ಕುರಿತು ಸಲಹೆ ನೀಡಿದೆ. ಪರಿಣಿತರ ಸಲಹೆ ಪಡೆದು ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಹೇಳಿದೆ. ವೈದ್ಯಕೀಯ ಸಂಘಟನೆಗಳ, ಕಾರ್ಪೋರೇಟ್ ಸಂಸ್ಥೆಗಳ, ಸಾರ್ವಜನಿಕರ ಸಹಯೋಗ ಪಡೆಯುವಂತೆ ತಿಳಿಸಿದೆ. ಅಪೌಷ್ಠಿಕತೆ ನಿವಾರಣೆ ಮತ್ತು ಆಸ್ಪತ್ರೆಗಳಿಗೆ ಮನೋವೈದ್ಯರ ಸೇವೆ ಪಡೆಯಲು ಸಲಹೆ ನೀಡಿದೆ....

ಮಂತ್ರಾಲಯ “ಗುರುರಾಯರ” ದರ್ಶನಕ್ಕೆ ಅವಕಾಶ: 52 ದಿನಗಳ ಬಳಿಕ ತೆರೆದ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ..!

ಮಂತ್ರಾಲಯ: ಕೊರೋನಾ‌ ಮಹಾಮಾರಿಯಿಂದಾಗಿ ಇಷ್ಟೂ ದಿನ ಬಂದ್ ಆಗಿದ್ದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಇಂದು ತೆರೆದಿದೆ. ದೇಶದ ಮೂಲೆ ಮೂಲೆಯಲ್ಲೂ ರಾಯರಿಗೆ ಕೋಟ್ಯಂತರ ಭಕ್ತರಿದ್ದು, ಸದ್ಯ ರಾಯರ ದರ್ಶನಕ್ಕೆ ಅವಕಾಶ ಸಿಕ್ಕಿದ್ದೇ ತಡ ಮಂತ್ರಾಲಯದ ಕಡೆ ಭಕ್ತರ ದಂಡೇ ಆಗಮಿಸುತ್ತಿದೆ. ಲಾಕ್ ಡೌನ್ ಎಫೆಕ್ಟ್.. ಕೊರೊನಾ ಮಹಾಮಾರಿಯಿಂದಾಗಿ ತಲ್ಲಣಿಸಿದ್ದ ಕ್ಷೇತ್ರಗಳು ಈಗ ಚೇತರಿಸಿಕೊಳ್ಳುತ್ತಿವೆ. ಪ್ರಮುಖವಾಗಿ ಆಂಧ್ರಪ್ರದೇಶದಲ್ಲಿ ಮಿತಿಮೀರಿದ್ದ ಕೋವಿಡ್ ನಿಂದಾಗಿ ಅಲ್ಲಿಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಹೇರಲಾಗಿತ್ತು‌. ಇದ್ರಿಂದಾಗಿ ಮೇ1 ನೇ ತಾರೀಖಿನಿಂದ ಕರ್ನೂಲು ಜಿಲ್ಲೆಯ ಮಂತ್ರಾಲಯ ಮಂಡಲದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಸಂಪೂರ್ಣ ಬಂದ್ ಮಾಡಲಾಗಿತ್ತು. ಸದ್ಯ ಅಲ್ಲಿಯ ರಾಜ್ಯ ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ಇಂದು ರಾಯರ ದೇವಸ್ಥಾನದ ಒಳಗೆ ಭಕ್ತರು ಬರುವುದು, ಪೂಜಾ ಕೈಂಕರ್ಯ ಸಲ್ಲಿಸುವುದಕ್ಕೆ ಮಠದ ಆಡಳಿತ ಮಂಡಳಿ ತೀರ್ಮಾನಿಸಿದೆ. ಕೋವಿಡ್ ನಿಯಮ ಪಾಲಿಸಲೇಬೇಕು..! ರಾಯರಿಗೆ ದೇಶ ಹಾಗೂ ವಿದೇಶದಲ್ಲಿ ಅಪಾರ ಭಕ್ತಗಣ ಇದೆ. ಇದ್ರಿಂದ ಕೋವಿಡ್ ನಿಯಮ ಪಾಲಿಸುವುದಾದ್ರೆ...

ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ. ದಂಡ..!

ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ. ದಂಡ..!

ಬೆಂಗಳೂರು: ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್ (ನೈಸ್) ವಿರುದ್ಧ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನ್ಯಾಯಾಲಯ 2 ಕೋಟಿ ರೂ. ದಂಡ ವಿಧಿಸಿದೆ. ನೈಸ್ ಕಂಪನಿಗೆ ಆದ ಮಾನನಷ್ಟಕ್ಕೆ 2 ಕೋಟಿ ರೂ. ನೀಡುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ ಆದೇಶಿಸಿದೆ. ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸದರ್ಶನ ನೀಡುವಾಗ ದೇವೇಗೌಡ ನೈಸ್ ಕಂಪನಿ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ, ನೈಸ್ ಕಂಪನಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದ ದೇವೇಗೌಡರಿಗೆ ನೈಸ್ ಕಂಪನಿಗೆ 2 ಕೋಟಿ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ಶಿಗ್ಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 40 ಕ್ವಿಂಟಾಲ್ ಅಕ್ಕಿ ವಶ..!

ಶಿಗ್ಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 40 ಕ್ವಿಂಟಾಲ್ ಅಕ್ಕಿ ವಶ..!

ಶಿಗ್ಗಾವಿ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 40 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾದ ಘಟನೆ ಶಿಗ್ಗಾವಿ ಪಟ್ಟಣದಲ್ಲಿ ನಡದಿದೆ. ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಗೋಡಾನ್ ಮೇಲೆಯೇ ದಾಳಿ ನಡೆಸಿರೋ ಪೊಲೀಸರು, 86 ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ತುಂಬಿಡಲಾಗಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಹನುಮಂತಪ್ಪ ಬಡ್ನಿ ಎಂಬುವವರಿಗೆ ಸೇರಿದ ಮನೆಯಲ್ಲಿ, 40 ಕ್ವಿಂಟಲ್ 95 ಕೇಜಿ ಅಕ್ಕಿ ದೊರೆತಿದೆ. ಖಚಿತ ಮಾಹಿತಿ ಮೇರೆಗೆ ಶಿಗ್ಗಾವಿ ಪೊಲೀಸರು ದಾಳಿ ಮಾಡಿದ್ದು, ಅಕ್ಕಿ ಸೇರಿದಂತೆ ಒಂದು ಟಾಟಾ ಎಸ್ ವಾಹನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಮಧುಗಿರಿ ಮೋದಿ”ಗೆ ಇದೇಂಥಾ ಸ್ಥಿತಿ..? ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ಯಾಕೆ ಹಿಂದೂ ಹೋರಾಟಗಾರ..?

“ಮಧುಗಿರಿ ಮೋದಿ”ಗೆ ಇದೇಂಥಾ ಸ್ಥಿತಿ..? ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ಯಾಕೆ ಹಿಂದೂ ಹೋರಾಟಗಾರ..?

ತುಮಕೂರು: ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್ ಧರ್ಮಸೇನೆ ಹೆಸರಿನ ಸಂಘಟನೆ ಮೂಲಕ, ಬ್ರಷ್ಟಾಚಾರ, ಭಯೋತ್ಪಾದನೆ, ಲವ್ ಜಿಹಾದ್, ಅತ್ಯಾಚಾರ, ಗೋಹತ್ಯೆಯ ವಿರುದ್ಧ ಹೋರಾಟ ಮಾಡುತ್ತಿದ್ದ ಆ ವ್ಯಕ್ತಿ ಇಂದು ರಾಜ್ಯಪಾಲರಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೌದು, ಮಧುಗಿರಿ ಮೋದಿ ಅಂತಲೇ ಹೆಸರಾಗಿರೋ ತುಮಕೂರು ಜಿಲ್ಲೆಯ ಅತುಲ್ ಕುಮಾರ್ ಹೀಗೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದೆಲ್ಲೆಡೆ ಕೇಸ್..! ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್ ಧರ್ಮಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರೂ ಆಗಿರೋ ಅತುಲ್ ಕುಮಾರ್ ವಿರುದ್ಧ ರಾಜ್ಯದಲ್ಲಿ ಹಲವೆಡೆ ಪ್ರಕರಣ ದಾಖಲಾಗಿವೆ. ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಲವ್ ಜಿಹಾದ್, ಗೋಹತ್ಯೆಯ ವಿರುದ್ಧ ಹೋರಾಟ ಮಾಡುವ ಅತುಲ್, ಈಗ ತುಮಕೂರು ಪೊಲೀಸರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಕಿರುಕುಳ ಕೊಟ್ರಾ ಪೊಲೀಸರು..? ತುಮಕೂರು ಜಿಲ್ಲಾ ಪೋಲಿಸರಿಂದ ಪದೇ ಪದೇ ವಿಚಾರಣೆ ನೆಪದಲ್ಲಿ ಮಾನಸಿಕ ಕಿರುಕುಳ ಮಾಡಲಾಗುತ್ತಿದೆ. ಅನೇಕ ಬಾರಿ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದು ಪ್ರಕರಣ ದಾಖಲು ಮಾಡುತ್ತಿದ್ದಾರೆ ಅಂತಾ ಅತುಲ್ ಆರೋಪಿಸುತ್ತಿದ್ದಾರೆ. ಆರ್ಥಿಕ ಸ್ಥಿತಿ...

ಆ ನಾಯಿ ಮರಿಗೆ ಮರುಜನ್ಮ ಕೊಟ್ಟಿದ್ದೇ ರೋಚಕ: ಮಾನವೀಯತೆ ಅಂದ್ರೆ ಇದೇ ಅಲ್ವಾ..!

ಆ ನಾಯಿ ಮರಿಗೆ ಮರುಜನ್ಮ ಕೊಟ್ಟಿದ್ದೇ ರೋಚಕ: ಮಾನವೀಯತೆ ಅಂದ್ರೆ ಇದೇ ಅಲ್ವಾ..!

ಉಡುಪಿ: ಕಾಲಿಗೆ ಚಕ್ರ ಸಿಕ್ಕಿಸಿಕೊಂಡು ಓಡಾಡುವ ನಾಯಿ ಮರಿಯ ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸಂತೋಷದ ಹಿಂದಿನ ಸಂಕಟದ ಕಥೆ ರೋಚಕ ವಾಗಿದೆ. ತನ್ನ ಹಿಂದಿನ ಎರಡು ಕಾಲುಗಳನ್ನು ಮುರಿದುಕೊಂಡಿದ್ದ ಈ ನಾಯಿಮರಿಗೆ ಮರುಜೀವ ಸಿಕ್ಕಿದ್ದೇ ಒಂದು ಆಸಕ್ತಿಯ ವಿಚಾರ.ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ, ಹೊಸಂಗಡಿ ಕೆಪಿಸಿಎಲ್ ಘಟಕದ ಆವರಣದಲ್ಲಿ ಪುಟ್ಟ ನಾಯಿಮರಿಯೊಂದು ಘಾಸಿಕೊಂಡು ಬಿದ್ದಿತ್ತು. ಬೈಕ್ ಚಕ್ರದಲ್ಲಿ ಸಿಲುಕಿ ಕಾಲು ನುಜ್ಜು ಗುಜ್ಜು‌.! ಯಾರೋ ಬೈಕ್ ಹಾಯಿಸಿದ ಪರಿಣಾಮ ನಾಯಿಮರಿಯ ಹಿಂಬದಿಯ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿತ್ತು. ಅಸಹಾಯಕ ಸ್ಥಿತಿಯಲ್ಲಿ ಅಲ್ಲೇ ರಸ್ತೆ ಬದಿಯಲ್ಲಿ 15ದಿನಗಳಿಂದ ಬಿದ್ದುಕೊಂಡಿತ್ತು. ಸ್ಥಳೀಯ ನಿವಾಸಿ ಹಾಗೂ ಕೆಪಿಸಿಎಲ್ ನಲ್ಲಿ ಉದ್ಯೋಗ ಮಾಡುವ ಕೆ.ರಾಮಸ್ವಾಮಿ ಹಾಗೂ ವೀಣಾ ದಂಪತಿ ಪುತ್ರಿಯಾದ ಪ್ರಿಯಾ ಎಂ.ಆರ್ ಈ ಅಸಹಾಯಕ ನಾಯಿಯನ್ನು ಗಮನಿಸಿದ್ದಾರೆ. ಪಕ್ಕಕ್ಕೆ ಹೋದ ಆಕೆ ನಾಯಿಯ ಸ್ಥಿತಿ ನೋಡಿ ಮಮ್ಮಲ ಮರುಗಿದ್ದಾರೆ. ಹಿಂದೆ ಹಿಂದೆ ಬಂದಿತ್ತು..! ಈ‌ ಮರಿ ಕುಂಟು ಕಾಲಿನಲ್ಲೇ ಅವರನ್ನು ಹಿಂಬಾಲಿಸಿಕೊಂಡು...

ಯೋಗ ದಿನಾಚರಣೆ; ಸೋಂದಾ ಸ್ವರ್ಣವಲ್ಲಿ ಶ್ರೀಗಳ ಯೋಗಾಶೀರ್ವಚನ..!

ಯೋಗ ದಿನಾಚರಣೆ; ಸೋಂದಾ ಸ್ವರ್ಣವಲ್ಲಿ ಶ್ರೀಗಳ ಯೋಗಾಶೀರ್ವಚನ..!

ಶಿರಸಿ: ಜೀವನದ ಸಮತೆ ಪಡೆಯೋಕೆ ಯೋಗಾನುಷ್ಠಾನ ಮಹತ್ವದ್ದು ಅಂತ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ರು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶಿರಸಿಯ ಸೋಂದಾದಲ್ಲಿ ಯೋಗಾನುಷ್ಠಾನ ನಡೆಸಿದ ಶ್ರೀಗಳು ಆಶೀರ್ವಚನ ನುಡಿದರು. ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಆಗದು. ಯೋಗ ದಿನಾಚರಣೆಯ ಮರು ದಿನ ಯೋಗ ಮಾಡದೇ ಇದ್ದವರೂ ಇದ್ದಾರೆ. ಇದಾಗದೇ ಜೀವನದಲ್ಲಿ ನಿರಂತರ ಯೋಗ ಅನುಷ್ಠಾನ ಮಾಡಬೇಕು. ಆಸನ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಪ್ರತಿದಿನವೂ ಮಾಡಬೇಕು. ವಿಶ್ವ ಯೋಗದ ದಿನಾಚರಣೆಯು ಯೋಗದ ಮೂಲಕ ಎಲ್ಲರೂ ಆರೋಗ್ಯ ಪಡೆಯುವಲ್ಲಿ ನೆರವಾಗಲಿ. ಯೋಗದ ಮೂಲಕ ವಿಶ್ವ ಒಂದಾಗಬಹುದು ಎಂಬುದನ್ನು ಮತ್ತೆ ಒಂದಾಗಬಹುದು ಎಂಬುದನ್ನು ತಿಳಿಸಲಿ ಎಂದರು. ಯೋಗ ಸಾಧಕ ಶ್ರೀ..! ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸುತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಗುರುಗಳೂ...

ಪ್ರಯಾಣಿಕರ ಕೊರತೆಯಲ್ಲೇ ಉತ್ತರ ಕನ್ನಡದಲ್ಲಿ ಬಸ್ ಸಂಚಾರ ಶುರು..!

ಪ್ರಯಾಣಿಕರ ಕೊರತೆಯಲ್ಲೇ ಉತ್ತರ ಕನ್ನಡದಲ್ಲಿ ಬಸ್ ಸಂಚಾರ ಶುರು..!

ಶಿರಸಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಭಾಗವಾಗಿ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲೆಯ ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಘಟಕವಾದ ಶಿರಸಿಯಿಂದ ಬಸ್ ಗಳು ಕಾರ್ಯ ಆರಂಭಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಈಗಾಗಲೇ ಬಸ್ ಗಳು ಸಂಚಾರವನ್ನ ಆರಂಭಿಸಿದ್ದು, ಸದ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗಳಿಗೆ, ತಾಲೂಕುಗಳಿಂದ ತಾಲೂಕುಗಳಿಗೆ ಮಾತ್ರ ಬಸ್ ಗಳು ಸಂಚಾರ ಪ್ರಾರಂಭಿಸಿವೆ. ಆದ್ರೆ ಪ್ರಯಾಣಿಕರ ಕೊರತೆ ಸಾರಿಗೆ ಸಂಸ್ಥೆಯನ್ನ ಕಾಡುತ್ತಿದೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಸದ್ಯಕ್ಕೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಲಾಗುತ್ತಿದೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ ಗಳನ್ನ ಓಡಿಸಲಾಗುತ್ತಿದೆ. ಇನ್ನು, ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರವನ್ನ ಜನರ ರೆಸ್ಪಾನ್ಸ್ ನೋಡಿಕೊಂಡು ಪ್ರಾರಂಭಿಸಲಾಗುತ್ತೆ ಅಂತಾ KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!