ಬೆಂಗಳೂರು: ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್ (ನೈಸ್) ವಿರುದ್ಧ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನ್ಯಾಯಾಲಯ 2 ಕೋಟಿ ರೂ. ದಂಡ ವಿಧಿಸಿದೆ.
ನೈಸ್ ಕಂಪನಿಗೆ ಆದ ಮಾನನಷ್ಟಕ್ಕೆ 2 ಕೋಟಿ ರೂ. ನೀಡುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ ಆದೇಶಿಸಿದೆ.
ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸದರ್ಶನ ನೀಡುವಾಗ ದೇವೇಗೌಡ ನೈಸ್ ಕಂಪನಿ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ, ನೈಸ್ ಕಂಪನಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದ ದೇವೇಗೌಡರಿಗೆ ನೈಸ್ ಕಂಪನಿಗೆ 2 ಕೋಟಿ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.