ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿಗೆ ಮೊದಲ ದಿನವೇ ಹೈಕೋರ್ಟ್ ಶಾಕ್..! ಮೀಸಲಾತಿಗೆ ತಡೆಯಾಜ್ಞೆ..!


ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಆದ್ರೆ, ಅಧ್ಯಕ್ಷರಾದ ಮೊದಲ ದಿನವೇ ಶಾಕ್ ಎದುರಾಗಿದೆ. ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ, ಮಾನ್ಯ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.

ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಅದರ ವಿರುದ್ಧ ನಾಲ್ವರು ಪಟ್ಟಣ ಪಂಚಾಯತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು‌. ಹೀಗಾಗಿ, ವಿಚಾರಣೆ ನಡಸಿರೊ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ, ಅಧ್ಯಕ್ಷ ಪದವಿಗೇರಿದ್ರೂ ಜಯಸುಧಾ ಭೋವಿ ಮೇಡಂ ಸದ್ಯ ಕೋರ್ಟ್ ಮುಂದಿನ ಆದೇಶದ ವರೆಗೂ ನಾಮಕೆವಾಸ್ತೆ ಅನ್ನುವಂತಾಗಿದೆ..?

ಅಸಲು, ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿಗೇರಿದ್ದ ಜಯಸುಧಾ ಭೋವಿ ಎರಡನೇ ಬಾರಿ ಹುದ್ದೆ ಅಲಂಕರಿಸಿದ್ದಾರೆ‌. ಇನ್ನು, ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸದಸ್ಯರಾದ ರಝಾ ಖಾನ್ ಪಠಾಣ್, ಶಿವರಾಜ್ ಸುಬ್ಬಾಯವರ್, ಫಣಿರಾಜ್ ಹದಳಗಿ ಸೇರಿದಂತೆ ಹಲವರು ಕೋರ್ಟ್ ಮೆಟ್ಟಿಲೇರಿದ್ದರು ಅನ್ನೊ ಮಾಹಿತಿ ಲಭ್ಯವಾಗಿದೆ‌.

 

error: Content is protected !!