ಮತ್ತೆ ಕೊರೋನಾ ಅಟ್ಟಹಾಸ, ತಾಲೂಕಿನಲ್ಲಿ ಇಂದಿನ ಪಾಸಿಟಿವ್ ಕೇಸ್ ಎಷ್ಟು..? ವಿದ್ಯಾರ್ಥಿಗಳ ಪಾಲು ಎಷ್ಟು..!

ಮತ್ತೆ ಕೊರೋನಾ ಅಟ್ಟಹಾಸ, ತಾಲೂಕಿನಲ್ಲಿ ಇಂದಿನ ಪಾಸಿಟಿವ್ ಕೇಸ್ ಎಷ್ಟು..? ವಿದ್ಯಾರ್ಥಿಗಳ ಪಾಲು ಎಷ್ಟು..!

ಮುಂಡಗೋಡ: ತಾಲೂಕಿನಲ್ಲಿ ಶುಕ್ರವಾರ ಕೊರೋನಾ ಮತ್ತೆ ಅಟ್ಟಹಾಸ ಮೆರೆದಿದೆ. ಇಂದು ಬರೋಬ್ಬರಿ 138 ಪಾಸಿಟಿವ್ ದೃಢ ಪಟ್ಟಿದೆ. ಅಚ್ಚರಿಯ ಸಂಗತಿಯೆಂದ್ರೆ, ಇಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಬಹುಪಾಲು ವಿದ್ಯಾರ್ಥಿಗಳದ್ದೇ ಆಗಿದೆ. ಇಂದು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೊಂದೇ ಕಾಲೇಜಿನಲ್ಲಿ ಬರೋಬ್ಬರಿ 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅದ್ರಂತೆ ಇನ್ನು ಹಲವು ಶಾಲೆಗಳು, ಕಾಲೇಜುಗಳಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪಾಲಕರಿಗೆ ಆತಂಕ ತಂದಿಟ್ಟಿದೆ‌. ಇನ್ನು, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿಯೊಂದೂ ಶಾಲೆಗಳಲ್ಲೂ ಹಿಂಡು ಹಿಂಡು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ, ತಾಲೂಕಿನಲ್ಲಿ ಕೆಲವು ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ‌.

ಮುಂಡಗೋಡಿನಲ್ಲಿ ಸಿ.ಎಸ್.ಸಿ ಸೆಂಟರ್ ಓಪನ್..!

ಮುಂಡಗೋಡಿನಲ್ಲಿ ಸಿ.ಎಸ್.ಸಿ ಸೆಂಟರ್ ಓಪನ್..!

ಮುಂಡಗೋಡಿನಲ್ಲಿ ಸಿ.ಎಸ್.ಸಿ ಸೆಂಟರ್ ಓಪನ್..! ಮುಂಡಗೋಡ: ಪಟ್ಟಣದ ನೆಹರು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂಡಗೋಡದ ಕಾರ್ಯಕ್ಷೇತ್ರದಲ್ಲಿ ಗುರುವಾರ ಸಿ.ಎಸ್.ಸಿ ಸೆಂಟರ್ ಉದ್ಘಾಟಿಸಲಾಯಿತು.

ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..!

ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..!

ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..! ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾದೇವಿ ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ವಿರೋಧ ವ್ಯಕ್ತ ಪಡಿಸಿ ಭಕ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ರು. ಮಠದಲ್ಲಿ ಭಾರೀ ಅವ್ಯವಹಾರದ ವಾಸನೆ ಬರ್ತಿದೆ‌. ಮಠದ ಆಸ್ತಿ ಕಬಳಿಸಲು ಹುನ್ನಾರ ನಡೀತಿದೆ. ಉತ್ತರಾಧಿಕಾರಿ ಮಠದ ಹಣ, ಒಡವೆ ಕದ್ದುಕೊಂಡು ರಾತ್ರೊ ರಾತ್ರಿ ನಾಪತ್ತೆಯಾಗಿದ್ದಾರೆ. ಅವರ ಕುರಿತು ಈಗಾಗಲೇ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ರಾಜಕೀಯ ಒತ್ತಡದಿಂದ ಕೇಸು ದಾಖಲಾಗದಂತೆ ನೋಡಿಕೊಂಡಿದ್ದಾರೆ. ಹಿಗಾಗಿ, ಇದ್ರಲ್ಲಿ ಫೀಠಾಧಿಪತಿಗಳು ಉತ್ತರಾಧಿಕಾರಿಗಳ ನೇಮಕ ಮಾಡೋದನ್ನ ನಾವು ಒಪ್ಪುವುದಿಲ್ಲ. ಅಂತಾ ವಿರೋಧಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಅರ್ಪಿಸಿದ್ದಾರೆ. ಇನ್ನು ಇದಕ್ಕೂ ಮೊದಲು ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ಸಭೆ ಸೇರಿದ್ದ ಭಕ್ತರು ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ರು.

ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು..!

ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು..!

ಮುಂಡಗೋಡ : ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮಳಗಿ ಪಂಚವಟಿಯ ಜವಾಹರ ನವೋದಯ ಶಾಲೆಯ 18 ವಿದ್ಯಾರ್ಥಿಗಳಿಗೆ ಮತ್ತೆ ಸೋಂಕು ದೃಢ ಪಟ್ಟಿದೆ‌. ಹೀಗಾಗಿ ಮತ್ತೆ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಅದ್ರಂತೆ, ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಲ್ಲೂ ಕೊರೊನಾ ಆತಂಕ ಶುರುವಾಗಿದೆ. ಬಡ್ಡಿಗೇರಿ ಸರಕಾರಿ ಶಾಲೆ, ಲೊಯೋಲಾ ಪಿ.ಯು. ಕಾಲೇಜು, ಕಾತೂರ ಸರಕಾರಿ ಶಾಲೆ, ಲೊಯೋಲಾ ಕೇಂದ್ರೀಯ ವಿದ್ಯಾಲಯ, ಮುರಾರ್ಜಿ ವಸತಿ ಶಾಲೆ ಪಾಳಾ ಉರ್ದು ಹೈಸ್ಕೂಲು ಸೇರಿ ಹಲವು ಶಾಲೆಗಳಲ್ಲಿ ಕೋವಿಡ್ ಸೋಂಕು ಅಟ್ಟಹಾಸ ಮೆರೆದಿದೆ.

ಕೋಡಂಬಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆ ಆಯೋಜಕರಿಗೆ ಸಂಕಷ್ಟ..! ನಾಲ್ವರು ವಶಕ್ಕೆ..!

ಕೋಡಂಬಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆ ಆಯೋಜಕರಿಗೆ ಸಂಕಷ್ಟ..! ನಾಲ್ವರು ವಶಕ್ಕೆ..!

ಮುಂಡಗೋಡ: ಉತ್ತರ ಕರ್ನಾಟಕದ ಯುವಕರ ಪಾಲಿನ ರಣರೋಚಕ ಹೋರಿ ಹಬ್ಬಕ್ಕೆ ಮುಂಡಗೋಡ ತಾಲೂಕಿನಲ್ಲಿ ಭಾರೀ ಹಿನ್ನಡೆಯಾಗಿದೆ. ಕೋಡಂಬಿಯಲ್ಲಿ ನಿನ್ನೆ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಬರೋಬ್ಬರಿ 17 ಜನರ ಮೇಲೆ ಕೇಸು ಜಡೆದಿದ್ದಾರೆ. ಅದ್ರಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ‌. ಉಳಿದ 13 ಜನ ಪರಾರಿಯಾಗಿದ್ದಾರೆ. ಅನುಮತಿ ಪಡೆದಿರಲಿಲ್ಲವಾ‌..? ಕೋಡಂಬಿಯಲ್ಲಿ ನಿನ್ನೆ ಮಂಗಳವಾರ ನಡೆದ “ಹೋರಿ ಬೆದರಿಸುವ ಸ್ಪರ್ಧೆ” ಅಯೋಜಕರಿಗೆ ಸಂಕಷ್ಟ ತಂದೊಡ್ಡಿದೆ‌. ಕೊರೋನಾ ಸಂಕಷ್ಟದ ನಡುವೆ ಸರ್ಕಾರದ ಯಾವುದೇ ಅನುಮತಿ ಪಡೆಯದೇ, ಸಾಮಾಜಿಕ ಅಂತರ ಪಾಲಿಸದೇ, ಕೊರೋನಾ ನಿಯಮ ಗಾಳಿಗೆ ತೂರಿ ಸ್ಪರ್ಧೆ ಏರ್ಪಡಿಸಿದ್ದಾರೆ ಅಂತಾ ಕೇಸು ದಾಖಲಾಗಿದೆ. ಹಾಗಿದ್ರೆ ಕೋಡಂಬಿ ಹೋರಿ ಸ್ಪರ್ಧೆಯ ಆಯೋಜಕರು ಸ್ಪರ್ಧೆಗೆ ಅನುಮತಿ ಪಡೆದಿರಲಿಲ್ಲವಾ..? ಸಂಕಷ್ಟದ ಸಮಯದಲ್ಲಿ ಯಾಕೆ ಬೇಕಿತ್ತು ಈ ಹುಂಬತನ ಅನ್ನೋ ಪ್ರಶ್ನೆ ಎದುರಾಗಿದೆ. ಯಾರ್ಯಾರ ಮೇಲೆ ಕೇಸ್..? ಕೋಡಂಬಿಯ ಹೋರಿ ಬೆದರಿಸೋ ಸ್ಪರ್ಧೆಯ ರೂವಾರಿಗಳು ಅಂತಾ, ಹಾಲಪ್ಪ ಕೋಡಣ್ಣನವರ್, ಬಸವಂತಪ್ಪ ಪೂಜಾರ್, ಹನ್ಮಂತಪ್ಪ ಪೂಜಾರ್,...

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕಾರಿಗೆ ಗುದ್ದಿದ ಲಾರಿ..!

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕಾರಿಗೆ ಗುದ್ದಿದ ಲಾರಿ..!

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕಾರಿಗೆ ಗುದ್ದಿದ ಲಾರಿ..! ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಗೆ ಚಿಕ್ಕದಾಗಿ ಹಾನಿಯಾದ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಲಾರಿ, ಪಟ್ಟಣದಲ್ಲಿ ಬಂಕಾಪುರ ರಸ್ತೆ ಕಡೆಗೆ ಹೊರಟಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿತ್ತು ಎನ್ನಲಾಗಿದೆ‌. ಹೀಗಾಗಿ ಡಿಕ್ಕಿ ಹೊಡೆದು ಶಿರಸಿ ರಸ್ತೆ ಕಡೆಗೆ ಹೊರಟಿದ್ದ ಲಾರಿಯನ್ನು ತಡೆದ ಕಾರು ಚಾಲಕ, ಆಗಿರೋ ಹಾನಿ ತುಂಬಿ ಕೊಡುವಂತೆ ಒತ್ತಾಯಿಸಿದ್ದಾನೆ‌ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಾತ್ರೆಗಳು ಬಂದ್ ಹಿನ್ನೆಲೆ, ಬಡ ವ್ಯಾಪಾರಸ್ಥರಿಗೆ ಸಂಕಷ್ಟ..!

ಜಾತ್ರೆಗಳು ಬಂದ್ ಹಿನ್ನೆಲೆ, ಬಡ ವ್ಯಾಪಾರಸ್ಥರಿಗೆ ಸಂಕಷ್ಟ..!

ಜಾತ್ರೆಗಳು ಬಂದ್ ಹಿನ್ನೆಲೆ, ಬಡ ವ್ಯಾಪಾರಸ್ಥರಿಗೆ ಸಂಕಷ್ಟ..! ಮುಂಡಗೋ: ತಾಲೂಕಿನಲ್ಲಿ ಪ್ರತಿ ವರ್ಷವೂ ನಡೆಯುವ ಜಾತ್ರೆಗಳಲ್ಲಿ ಹಲವು ಪ್ರಕಾರದ ವಸ್ತುಗಳ ವ್ಯಾಪಾರ ಮಾಡಿ ಬದುಕು ನಡೆಸೊ ಸುಡುಗಾಡು ಸಿದ್ದರು, ಹಾಗೂ ವಿವಿದ ಜನಾಂಗದ ಬಡ ವ್ಯಾಪಾರಿಗಳಿಗೆ ಕೊರೋನಾ ಸಂಕಷ್ಟ ತಂದೊಡ್ಡಿದೆ‌. ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ಜಾತ್ರೆಗಳು ಬಂದ್ ಆಗಿರೋ ಕಾರಣಕ್ಕೆ ಈ ಬಡ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದೇ ಬದುಕೇ ದುಸ್ತರವಾಗಿದೆ. ಹೀಗಾಗಿ ಸರ್ಕಾರ ಇಂತಹ ಬಡ ಕುಟುಂಬಗಳ ಬಗ್ಗೆ ಗಮನ ಹರಿಸಬೇಕಿದೆ.. ಇಂತವರಿಗಾಗಿ ಏನಾದರೂ ಸಹಾಯ ಹಸ್ತ ಚಾಚಬೇಕಿದೆ.

ಸನವಳ್ಳಿ ಅಡಿಕೆ ತೋಟಗಳಿಗೆ ಕಾಡು ಹಂದಿಗಳ ಕಾಟ..!

ಸನವಳ್ಳಿ ಅಡಿಕೆ ತೋಟಗಳಿಗೆ ಕಾಡು ಹಂದಿಗಳ ಕಾಟ..!

ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡುಹಂದಿಗಳು ಅಡಕೆ ಸಸಿಗಳನ್ನು ತಿಂದು ಕಿತ್ತು ಹಾಕುವ ಮೂಲಕ ರೈತರಿಗೆ ಅಪಾರ ಪ್ರಮಾಣದ ಹಾನಿ ಪಡಿಸುತ್ತಿರುವುದು ಕಂಡು ಬಂದಿದೆ. ಕಳೆದ ಹದಿನೈದು ದಿನಗಳಿಂದ ಸನವಳ್ಳಿ ಭಾಗದಲ್ಲಿ ಕಾಡುಹಂದಿಗಳು ಹೆಚ್ಚಾಗಿ ಸಂಚರಿಸುತ್ತಿದ್ದು ರಾತ್ರಿ ವೇಳೆ ಗದ್ದೆಗಳಿಗೆ ದಾಳಿ ನಡೆಸುವ ಕಾಡು ಹಂದಿಗಳು ಅಡಿಕೆ ಸಸಿಗಳನ್ನು ಕಿತ್ತು ಹಾಕುತ್ತಿವೆ. ಎರಡ್ಮೂರು ರೈತರಿಗೆ ಸೇರಿದ ನೂರಾರು ಅಡಕೆ ಸಸಿಗಳನ್ನು ಕಿತ್ತು ಹಾಕಿವೆ ವರ್ಷವಿಡಿ ಕಷ್ಟಪಟ್ಟು ಬೆಳೆಸಿದ್ದ ಅಡಕೆ ಸಸಿಗಳು ಈಗ ಕಾಡುಹಂದಿಗಳು ನಾಶ ಪಡಿಸುತ್ತಿರುವುದು ರೈತರಿಗೆ ದಿಕ್ಕು ತೋಚದಂತಾಗಿದೆ. ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುತ್ತೆವೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಈ ಮೊದಲು ಉಸ್ತುವಾರಿಯಾಗಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೆ ಕೋಕ್ ನೀಡಿ, ಕೋಟಾ ಶ್ರೀನಿವಾಸ್ ಪೂಜಾರಿಯವರನ್ನ ಉತ್ತರ ಕನ್ನಡಕ್ಕೆ ಉಸ್ತುವಾರಿ ಸಚಿವರನ್ನಾಗಿಸಿದ್ದಾರೆ. ಹಾಗೇ, ಶಿವರಾಮ್ ಹೆಬ್ಬಾರ್ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ.

ತಾಲೂಕಿನಲ್ಲಿ ಇಂದು 45 ಪಾಸಿಟಿವ್ ಕೇಸ್..! ಮೊರಾರ್ಜಿ ಶಾಲೆಯಲ್ಲಿ 11 ವಿದ್ಯಾರ್ಥಿಗಳಿಗೆ ಸೋಂಕು..!

ತಾಲೂಕಿನಲ್ಲಿ ಇಂದು 45 ಪಾಸಿಟಿವ್ ಕೇಸ್..! ಮೊರಾರ್ಜಿ ಶಾಲೆಯಲ್ಲಿ 11 ವಿದ್ಯಾರ್ಥಿಗಳಿಗೆ ಸೋಂಕು..!

ಮುಂಡಗೋಡ: ತಾಲೂಕಿನಲ್ಲಿ ಇಂದು ಸೋಮವಾರ ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ತಾಲೂಕಿನಲ್ಲಿ ಇಂದು ಒಟ್ಟೂ 45 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 11 ವಿದ್ಯಾರ್ಥಿಗಳಲ್ಲಿ ಕೋವಿಡ್ ಹೆಮ್ಮಾರಿ ವಕ್ಕರಿಸಿದೆ. ಹೀಗಾಗಿ, ಮತ್ತೆ ತಾಲೂಕಿನಲ್ಲಿ ಪಾಲಕರಿಗೆ ಆತಂಕ ಶುರುವಾಗಿದೆ. ಅದ್ರಂತೆ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ, ಕೋಡಂಬಿ, ಪಾಳಾ, ಇಂದೂರು, ನಂದಿಕಟ್ಟಾ, ಅಟ್ಟಣಗಿ, ಸೇರಿದಂತೆ ಮುಂಡಗೋಡ ಪಟ್ಟಣದಲ್ಲಿಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಲೊಯೊಲಾ ಶಿಕ್ಷಣ ಕೇಂದ್ರದ ಇಬ್ಬರು ವಿದ್ಯಾರ್ಥಿಗಳಿಗೆ ಇಂದು ಮತ್ತೆ ಸೋಂಕು ದೃಢ ಪಟ್ಟಿದೆ.

error: Content is protected !!