ಮುಂಡಗೋಡ: ನಾಪತ್ತೆಯಾಗಿದ್ದ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕ ಆನಂದ ಕಡಗಿ ಶವ, ಬರೋಬ್ಬರಿ 21 ದಿನಗಳ ಬಳಿಕ ಪತ್ತೆಯಾಗಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಈ ಮೂಲಕ ಉಟ್ಟುಡುಗೆಯಲ್ಲೇ ಮನೆಬಿಟ್ಟು ನಡೆದಿದ್ದ ಆನಂದ್ ಕಡಗಿಯ ಶವ ಕಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ನೇಹಿತರಲ್ಲಿ ದುಃಖ ಮಡುಗಟ್ಟಿದೆ.
ಬರಿಗಾಲಲ್ಲೇ ನಡೆದಿದ್ದ ಶಿಕ್ಷಕ..!
ಅವತ್ತು, ಮೇ 29 ರ ರವಿವಾರ, ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿದ್ದ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದರು.
ವಿಷ ಸೇವಿಸಿದ್ರಾ..?
ಇನ್ನು, ಇವತ್ತಿಗೆ ಬರೋಬ್ಬರಿ 21 ದಿನಗಳಾಯ್ತು ಆನಂದ್ ಕಡಗಿ ನಾಪತ್ತೆಯಾಗಿ. ಇಷ್ಟು ದಿನದ ನಂತ್ರ, ಆನಂದ್ ಮೃತದೇಹ ಪತ್ತೆಯಾಗಿದೆ. ವಿಚಿತ್ರ ಅಂದ್ರೆ ಮೃತದೇಹ ಇಷ್ಟು ದಿನವಾದ್ರೂ ಸಂಪೂರ್ಣ ಕೊಳೆತು ಹೋಗಿಲ್ಲ. ಸುಮಾರು 80% ಕೊಳೆತಿದೆ. ಇದಕ್ಕೂ ಹೆಚ್ಚಿನ ಅಚ್ಚರಿಯೆಂದ್ರೆ, ಕಾಡು ಪ್ರಾಣಿಗಳು ಮೃತದೇಹವನ್ನು ತಿಂದಿಲ್ಲ. ಕಾಲಿನ ಭಾಗ ಹೊರತು ಪಡಿಸಿದ್ರೆ ಆ ಮಟ್ಟಿಗೆ ದೇಹದ ಯಾವ ಭಾಗವನ್ನೂ ಮುಟ್ಟಿಲ್ಲ. ಹೀಗಿದ್ದಾಗ, ನಾಪತ್ತೆಯಾಗಿದ್ದ ಆನಂದ್ ಕಡಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ದೇಹದಲ್ಲಿ ವಿಷದ ಅಂಶ ಇರೋ ಕಾರಣಕ್ಕಾಗಿಯೇ ಪ್ರಾಣಿಗಳು ದೇಹವನ್ನು ಮುಟ್ಟಿಲ್ಲವಾ..? ಇಂತಹದ್ದೊಂದು ಅನುಮಾನ ಶುರುವಾಗಿದೆ.
ಒಟ್ನಲ್ಲಿ, ಕುಂದರ್ಗಿ ಕ್ರಾಸ್ ಬಳಿ ಇಂದು ಆನಂದ್ ಕಡಗಿ ಶವ ಪತ್ತೆಯಾಗಿದ್ದು, ಸಾವು ಹೇಗಾಯ್ತು ಅನ್ನೋ ಖಚಿತತೆ ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ.
ಪಬ್ಲಿಕ್ ಫಸ್ಟ್ ನ್ಯೂಸ್
ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿ, ತಾಜಾ ಸುದ್ದಿಗಳನ್ನು ಕ್ಷಣಮಾತ್ರದಲ್ಲೇ ಪಡೆಯಿರಿ..